Mali: ಮಾಲಿಯಲ್ಲಿ ಮೂವರು ಭಾರತೀಯರನ್ನು ಅಪಹರಿಸಿದ ಅಲ್-ಖೈದಾ ಉಗ್ರರು
ಪಶ್ಚಿಮ ಆಫ್ರಿಕಾದ ಮಾಲಿ ದೇಶದ ಕೇಯ್ಸ್ ನಗರದ ಡೈಮಂಡ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ನಾಗರಿಕರ ಅಪಹರಣವನ್ನು ಭಾರತ ಸರ್ಕಾರವನ್ನು ಕಳವಳಗೊಳ್ಳುವಂತೆ ಮಾಡಿದೆ. ವಿದೇಶಾಂಗ ಸಚಿವಾಲಯ (MEA) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜುಲೈ 1 ರಂದು, ಕೆಲವು ಶಸ್ತ್ರಸಜ್ಜಿತ ದಾಳಿಕೋರರು ಮಾಲಿಯ ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ನಾಗರಿಕರನ್ನು ಅಪಹರಿಸಿದ್ದಾರೆ.

ಮಾಲಿ, ಜುಲೈ 03: ಪಶ್ಚಿಮ ಆಫ್ರಿಕಾದ ಮಾಲಿ(Mali)ಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಅಲ್-ಖೈದಾ ಉಗ್ರರು ಮೂವರು ಭಾರತೀಯರನ್ನು ಅಪಹರಿಸಿದ್ದಾರೆ. ಈ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅವರನ್ನು ಕೂಡಲೇ ರಕ್ಷಣೆ ಮಾಡುವಂತೆ ಮಾಲಿ ಸರ್ಕಾರದ ಬಳಿ ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯ (MEA) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜುಲೈ 1 ರಂದು, ಕೆಲವು ಶಸ್ತ್ರಸಜ್ಜಿತ ದಾಳಿಕೋರರು ಮಾಲಿಯ ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ನಾಗರಿಕರನ್ನು ಅಪಹರಿಸಿದ್ದಾರೆ.
ಮಾಲಿಯಲ್ಲಿ ನಡೆದ ಈ ಅಪಹರಣ ಮತ್ತು ಇತರ ದಾಳಿಗಳ ಹೊಣೆಯನ್ನು ಅಲ್-ಖೈದಾ ಸಂಬಂಧಿತ ಗುಂಪು ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್ ಮುಸ್ಲಿಮೀನ್ (ಜೆಎನ್‌ಐಎಂ) ಹೊತ್ತುಕೊಂಡಿದೆ. ಮಾಲಿಯ ರಾಜಧಾನಿ ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತ, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಲ್ಲದೆ, ಅಪಹರಣಕ್ಕೊಳಗಾದ ಭಾರತೀಯರ ಕುಟುಂಬಗಳಿಗೂ ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತಿದೆ.
ಈ ಘಟನೆಯನ್ನು ‘ಅತ್ಯಂತ ಖಂಡನೀಯ ಹಿಂಸಾಚಾರ’ ಎಂದು ಸರ್ಕಾರ ಕರೆದಿದೆ ಮತ್ತು ಭಾರತೀಯ ಪ್ರಜೆಗಳು ಬೇಗನೆ ಮತ್ತು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಮಾಲಿ ಸರ್ಕಾರಕ್ಕೆ ಮನವಿ ಮಾಡಿದೆ.
ಮತ್ತಷ್ಟು ಓದಿ: ನಾವು ಪಾಕಿಸ್ತಾನದೊಳಗೆ ದಾಳಿ ಮಾಡಲು ಹಿಂಜರಿಯುವುದಿಲ್ಲ; ಬೆಲ್ಜಿಯಂನಲ್ಲಿ ಸಚಿವ ಜೈಶಂಕರ್ ಎಚ್ಚರಿಕೆ
ಮಾಲಿಯಲ್ಲಿ ವಾಸಿಸುವ ಇತರ ಭಾರತೀಯರು ಜಾಗರೂಕರಾಗಿರಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ರಾಯಭಾರ ಕಚೇರಿಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿರಿ ಎಂದು ಸರ್ಕಾರ ಸೂಚಿಸಿದೆ. ವಿದೇಶಾಂಗ ಸಚಿವಾಲಯವು ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಯೋಗಕ್ಷೇಮವು ಭಾರತ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದೆ.
ಇಸ್ಲಾಮಿಸ್ಟ್ ದಂಗೆ ಮತ್ತು ಟುವಾರೆಗ್ ದಂಗೆಯಿಂದಾಗಿ ಮಾಲಿ 2012 ರಿಂದ ಅಸ್ಥಿರ ಭದ್ರತಾ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಇತ್ತೀಚಿನ ತಿಂಗಳುಗಳಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಹೆಚ್ಚಳ ಕಂಡುಬಂದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Thu, 3 July 25