140 ಕೋಟಿ ಭಾರತೀಯರ ಅಭಿಮಾನ ಹೊತ್ತು ತಂದಿದ್ದೇನೆ; ಘಾನಾದ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ ಇಂದು ಘಾನಾದ ಸಂಸತ್ತನ್ನುದ್ದೇಶಿಸಿ ಮಾತನಾಡಿದರು. ಈ ಮೂಲಕ ಕಳೆದ 3 ದಶಕಗಳಲ್ಲಿ ಆಫ್ರಿಕಾದ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿ ಎನಿಸಿಕೊಂಡರು. ಈ ವೇಳೆ ಅವರು ಸಂಶೋಧನೆ ಮತ್ತು ಅಭಿವೃದ್ಧಿ, ವೈದ್ಯಕೀಯ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಒಪ್ಪಂದಗಳಿಗೆ ಸಹಿ ಹಾಕಿದರು.

ನವದೆಹಲಿ, ಜುಲೈ 3: ಘಾನಾ (Ghana Parliament) ಗಣರಾಜ್ಯದ ಸಂಸತ್ತನ್ನು ಉದ್ದೇಶಿಸಿ ಇಂದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi), “ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರತಿನಿಧಿಯಾಗಿ ನಾನು ನನ್ನೊಂದಿಗೆ 1.4 ಶತಕೋಟಿ ಭಾರತೀಯರ ಅಭಿಮಾನ ಮತ್ತು ಶುಭಾಶಯಗಳನ್ನು ತಂದಿದ್ದೇನೆ” ಎಂದು ಪ್ರಧಾನಿ ಮೋದಿ ಇಂದು ಘಾನಾ ಸಂಸತ್ತಿನಲ್ಲಿ ಹೇಳಿದರು. “ಘಾನಾವನ್ನು ಚಿನ್ನದ ನಾಡು ಎಂದು ಕರೆಯಲಾಗುತ್ತದೆ, ನಿಮ್ಮ ಮಣ್ಣಿನಡಿಯಲ್ಲಿ ಇರುವ ವಸ್ತುಗಳಿಗೆ ಮಾತ್ರವಲ್ಲ, ನಿಮ್ಮ ಹೃದಯದಲ್ಲಿನ ಪ್ರೀತಿ ಮತ್ತು ಬಲಕ್ಕೂ ಅಷ್ಟೇ ಮಹತ್ವವಿದೆ” ಎಂದು ಹೇಳಿದರು.
“ನಮಗೆ ಪ್ರಜಾಪ್ರಭುತ್ವ ಕೇವಲ ಒಂದು ವ್ಯವಸ್ಥೆಯಲ್ಲ. ಅದು ನಮ್ಮ ಮೂಲಭೂತ ಮೌಲ್ಯಗಳ ಒಂದು ಭಾಗ. ಭಾರತವು ಪ್ರಜಾಪ್ರಭುತ್ವದ ತಾಯಿ. ನಮಗೆ, ಪ್ರಜಾಪ್ರಭುತ್ವ ಕೇವಲ ಒಂದು ವ್ಯವಸ್ಥೆಯಲ್ಲ, ಅದು ನಮ್ಮ ಮೂಲಭೂತ ಮೌಲ್ಯಗಳ ಒಂದು ಭಾಗ. ಭಾರತದಲ್ಲಿ 2,500ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು, ವಿವಿಧ ರಾಜ್ಯಗಳನ್ನು ಆಳುವ 20 ವಿಭಿನ್ನ ಪಕ್ಷಗಳು, 22 ಅಧಿಕೃತ ಭಾಷೆಗಳು ಮತ್ತು ಸಾವಿರಾರು ಉಪಭಾಷೆಗಳಿವೆ. ಭಾರತಕ್ಕೆ ಬಂದ ಜನರನ್ನು ಯಾವಾಗಲೂ ಮುಕ್ತ ಹೃದಯದಿಂದ ಸ್ವಾಗತಿಸುವುದಕ್ಕೆ ಇದೇ ಕಾರಣ” ಎಂದು ಪ್ರಧಾನಿ ಹೇಳಿದ್ದಾರೆ.
Today, I had the honour of addressing the Parliament of Ghana. I spoke of the deep ties between our nations and our shared values. India and Ghana stand united in our pursuit of progress and prosperity. pic.twitter.com/4U5XCYUIUr
— Narendra Modi (@narendramodi) July 3, 2025
ಇದನ್ನೂ ಓದಿ: ಘಾನಾಗೆ ಬಂದ ಪ್ರಧಾನಿ ಮೋದಿಗೆ ಹರೇ ರಾಮ, ಹರೇ ಕೃಷ್ಣ ಹೇಳಿದ ಮಕ್ಕಳು
“ಇಂದು ಈ ಗೌರವಾನ್ವಿತ ಸದನವನ್ನು ಉದ್ದೇಶಿಸಿ ಮಾತನಾಡಲು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಪ್ರಜಾಪ್ರಭುತ್ವದ ಚೈತನ್ಯವನ್ನು ಹೊರಸೂಸುವ ಭೂಮಿಯಾದ ಘಾನಾದಲ್ಲಿ ಇರುವುದು ಒಂದು ಸೌಭಾಗ್ಯ” ಎಂದು ಹೇಳಿದರು. “ಘಾನಾ ಪ್ರಜಾಪ್ರಭುತ್ವ ಮತ್ತು ತೇಜಸ್ಸನ್ನು ಹೊರಸೂಸುವ ಭೂಮಿ. ಜಾಗತಿಕ ದಕ್ಷಿಣಕ್ಕೆ ಧ್ವನಿ ನೀಡದೆ ಪ್ರಗತಿ ಉಂಟಾಗಲು ಸಾಧ್ಯವಿಲ್ಲ. ಜಾಗತಿಕ ವೇದಿಕೆಯಲ್ಲಿ ಆಫ್ರಿಕಾಕ್ಕೆ ಸರಿಯಾದ ಸ್ಥಾನವಿದೆ. ನಮ್ಮ ಅಧ್ಯಕ್ಷತೆಯಲ್ಲಿ ಆಫ್ರಿಕನ್ ಒಕ್ಕೂಟವು G20 ನ ಶಾಶ್ವತ ಸದಸ್ಯನಾಗಿರುವುದು ಹೆಮ್ಮೆ ತಂದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
India and Ghana are connected by a shared commitment to democratic values. pic.twitter.com/VMQnXz9lbX
— Narendra Modi (@narendramodi) July 3, 2025
ಪ್ರಧಾನಿ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಭಾರತ ಮತ್ತು ಘಾನಾ ನಡುವೆ ಸಂಶೋಧನೆ ಮತ್ತು ಅಭಿವೃದ್ಧಿ, ವೈದ್ಯಕೀಯ ಮತ್ತು ಸಾಂಸ್ಕೃತಿಕ ವಿನಿಮಯದಂತಹ ಕ್ಷೇತ್ರಗಳಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಪ್ರಧಾನಿ ಮೋದಿ ಅವರು ಕ್ವಾಮೆ ನ್ಕ್ರುಮಾ ಅವರ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು.
ಇದನ್ನೂ ಓದಿ: Video: ಪ್ರಧಾನಿ ನರೇಂದ್ರ ಮೋದಿಗೆ ಘಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
“ಇಂದು ಮೊದಲು, ನಮ್ಮ ದಾರ್ಶನಿಕ ಮತ್ತು ರಾಜಕಾರಣಿ ಮತ್ತು ಘಾನಾದ ಪ್ರೀತಿಯ ಪುತ್ರ ಡಾ. ಕ್ವಾಮೆ ನ್ಕ್ರುಮಾ ಅವರಿಗೆ ಗೌರವ ಸಲ್ಲಿಸುವ ಗೌರವ ನನಗೆ ಸಿಕ್ಕಿತು. ನಮ್ಮನ್ನು ಒಂದುಗೂಡಿಸುವ ಶಕ್ತಿಗಳು ನಮ್ಮನ್ನು ದೂರವಿಡುವ ಪ್ರಭಾವಗಳಿಗಿಂತ ದೊಡ್ಡದಾಗಿದೆ ಎಂದು ಅವರು ಒಮ್ಮೆ ಹೇಳಿದ್ದರು. ಅವರ ಮಾತುಗಳು ನಮ್ಮ ಪ್ರಯಾಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇರುತ್ತವೆ” ಎಂದು ಮೋದಿ ಹೇಳಿದರು.
Addressing the Parliament of the Republic of Ghana. https://t.co/rxAOzpSnwu
— Narendra Modi (@narendramodi) July 3, 2025
“ಭಾರತವು ನಮ್ಮ ದೇಶಕ್ಕೆ ಬಂದಿರುವ ಪ್ರತಿಯೊಬ್ಬರನ್ನು ಸ್ವಾಗತಿಸಿದೆ. ಭಾರತ ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತದೆ. ನಮ್ಮ ಸಂಬಂಧಕ್ಕೆ ಯಾವುದೇ ಮಿತಿಯಿಲ್ಲ. ನಮ್ಮ ಸ್ನೇಹವು ನಿಮ್ಮ ಸಕ್ಕರೆ ಲೇಪಿತ ಅನಾನಸ್‌ಗಿಂತ ಸಿಹಿಯಾಗಿದೆ” ಎಂದು ಮೋದಿ ಅಕ್ರಾದಲ್ಲಿ ಘಾನಿಯನ್ ಸಂಸತ್ತಿನ ಸದಸ್ಯರೊಂದಿಗೆ ಮಾತನಾಡುತ್ತಾ ಹೇಳಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Thu, 3 July 25




