ಬಾಂಗ್ಲಾದೇಶ: ಹೊತ್ತಿ ಉರಿದ ರೈಲಿನ ಬೋಗಿಗಳು, 5 ಸಾವು
ಶುಕ್ರವಾರ ರಾತ್ರಿ ಬಾಂಗ್ಲಾದೇಶದ ಬೆನಾಪೋಲ್ ರೈಲಿನ ನಾಲ್ಕು ಭೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಐವರು ಮೃತಪಟ್ಟಿದ್ದಾರೆ. ರೈಲಿನಲ್ಲಿ ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಢಾಕಾ, ಜನವರಿ 06: ಶುಕ್ರವಾರ ರಾತ್ರಿ ಬಾಂಗ್ಲಾದೇಶದ (Bangladesh) ಬೆನಾಪೋಲ್ ರೈಲಿನ (Train) ನಾಲ್ಕು ಭೋಗಿಗಳಿಗೆ ಬೆಂಕಿ (Fire) ಹೊತ್ತಿಕೊಂಡಿದ್ದು, ಐವರು ಮೃತಪಟ್ಟಿದ್ದಾರೆ. ರೈಲಿನಲ್ಲಿ ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲು ಜೆಸ್ಸೋರ್‌ನಿಂದ ಢಾಕಾಕ್ಕೆ ತೆರಳುತ್ತಿತ್ತು. ರೈಲು ಸಯಿದಾಬಾದ್‌ನ ಗೋಲಬಾಗ್ ಪ್ರದೇಶಕ್ಕೆ ತಲುಪಿದಾಗ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ತಗುಲಿದ ಬೆನಪೋಲ್ ಪ್ಯಾಸೆಂಜರ್ ರೈಲಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುತ್ತಿದ್ದ ವೇಳೆ ಓರ್ವ ಯುವಕ ಮೃತಪಟ್ಟಿದ್ದಾನೆ. ಬೆನಪೋಲ್ ಎಕ್ಸ್‌ಪ್ರೆಸ್‌ನಲ್ಲಿ ಕನಿಷ್ಠ ನಾಲ್ಕು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಅಗ್ನಿಶಾಮಕ ಸೇವಾ ಅಧಿಕಾರಿ ರಕ್ಜಿಬುಲ್ ಹಸನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಜಾನುವಾರು ಕಳ್ಳಸಾಗಣೆ ಯತ್ನ: 93 ಜಾನುವಾರುಗಳ ರಕ್ಷಿಸಿದ BSF ಪಡೆ
ಬಾಂಗ್ಲಾದೇಶದಲ್ಲಿ ನಾಳೆ (ಜ.07) ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನು ಅಲ್ಲಿನ ವಿರೋಧ ಪಕ್ಷಗಳಾದ ಬಾಂಗ್ಲದೇಶ ರಾಷ್ಟ್ರೀಯ ಪಕ್ಷ (ಬಿಎನ್ಪಿ) ಸೇರಿದಂತೆ ವಿವಿಧ ಪಕ್ಷಗಳ ವಿರೋಧಿಸಿವೆ. ಇನ್ನೂ ಈ ಘಟನೆ ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
#WATCH | A passenger train was set on fire in Bangladesh’s capital Dhaka yesterday (January 5) ahead of the country’s general election this weekend.
At least four people died aboard the intercity train, reports Reuters quoting local newspaper Dhaka Tribune.
(Source: Reuters) pic.twitter.com/FoFZVsqZ6u
— ANI (@ANI) January 6, 2024
“ಬೆಂಕಿಯ ಘಟನೆಯ ಹಿಂದೆ ದುಷ್ಕರ್ಮಿಗಳ ಕೇವಾಡವಿದೆ ಎಂದು ಅಲ್ಲಿನ ಪೊಲೀಸರು ಶಂಕಿಸಿದ್ದಾರೆ. ವಿರೋಧ ಪಕ್ಷ ಬಿಎನ್ಪಿ ಈ ಆರೋಪವನ್ನು ಅಲ್ಲಗೆಳೆದಿದೆ. ಈ ಮೂಲಕ ವಿರೋಧ ಪಕ್ಷಗಳ ಮೇಲೆ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ಮತ್ತು ಸುಖಾ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದೆ.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:01 am, Sat, 6 January 24