AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲಿನಂತೆ ಮಾರ್ಪಾಡಾಗುತ್ತಿದ್ದಾಳೆ ಈ ಐದು ತಿಂಗಳ ಹಸುಗೂಸು; ಹುಟ್ಟುವಾಗ ಸಹಜವಾಗಿಯೇ ಇದ್ದವಳು ಹೀಗೇಕಾದಳು?

ಕಾಯಿಲೆಯಿಂದ ಬಳಲುತ್ತಿರುವ ಲೆಕ್ಸಿ ಆರೋಗ್ಯ ಸ್ಥಿತಿ ಬಗ್ಗೆ ಪಾಲಕರು ಭಯದಿಂದ ಇದ್ದಾರೆ. ಆಕೆಗೆ ಯಾವುದೇ ಚುಚ್ಚುಮದ್ದು, ವ್ಯಾಕ್ಸಿನ್​, ಔಷಧಗಳನ್ನು ಕೊಡಲೂ ಸಾಧ್ಯವಾಗುತ್ತಿಲ್ಲ.

ಕಲ್ಲಿನಂತೆ ಮಾರ್ಪಾಡಾಗುತ್ತಿದ್ದಾಳೆ ಈ ಐದು ತಿಂಗಳ ಹಸುಗೂಸು; ಹುಟ್ಟುವಾಗ ಸಹಜವಾಗಿಯೇ ಇದ್ದವಳು ಹೀಗೇಕಾದಳು?
ಲೆಕ್ಸಿ
TV9 Web
| Updated By: Lakshmi Hegde|

Updated on: Jul 04, 2021 | 4:25 PM

Share

ಐದು ತಿಂಗಳ ಹೆಣ್ಣುಮಗುವೊಂದು ಪೂರ್ತಿ ಕಲ್ಲಿನಂತೆ ಮಾರ್ಪಾಟಾಗಿದ್ದಾಳೆ.. ಯುನೈಟೆಡ್​ ಕಿಂಗ್​ಡಮ್​​ನಲ್ಲಿ ಇಂಥ ಒಂದು ವಿರಳಾತಿವಿರಳ ಪ್ರಕರಣ ಬೆಳಕಿಗೆ ಬಂದಿದೆ. ಹುಟ್ಟುವಾಗ ಸಹಜವಾಗಿ, ಎಲ್ಲ ಮಕ್ಕಳಂತೆ ಇದ್ದ ಈ ಶಿಶು ಐದು ತಿಂಗಳು ತುಂಬುತ್ತಿದ್ದಂತೆ ಕಲ್ಲಿನಂತಾಗಿದ್ದಾಳೆ. ಇದಕ್ಕೆ ಕಾರಣ ಒಂದು ಅಪರೂಪದ, ಮಾರಣಾಂತಿಕವಾದ ರೋಗ.

ಮಗುವಿನ ಹೆಸರು ಲೆಕ್ಸಿ ರಾಬಿನ್ಸ್​. ಜನವರಿ 31ರಂದು ಜನಿಸಿದ್ದಳು. ಈಕೆ ಹುಟ್ಟುವಾಗ ಉಳಿದೆಲ್ಲವೂ ಸಹಜವಾಗಿಯೇ ಇತ್ತು. ಆದರೆ ಹೆಬ್ಬೆರಳಲ್ಲಿ ಚಲನೆ ಇರಲಿಲ್ಲ. ಹಾಗೇ ಬರಬರುತ್ತ ಕಾಲ್ಬೆರಳುಗಳ ಗಾತ್ರ ದೊಡ್ಡದಾಗುತ್ತ ಹೋಯಿತು. ಆತಂಕಗೊಂಡ ಪಾಲಕರು ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರೆ ಒಂದು ಶಾಕಿಂಗ್ ಸತ್ಯ ಗೊತ್ತಾಯಿತು. ಲೆಕ್ಸಿ ಫೈಬ್ರೊಡಿ ಸ್ಪ್ಲಾಸಿಯಾ ಒಸಿಫಿಕಾನ್ಸ್ ಪ್ರೋಗ್ರೆಸ್ಸಿವಾ (FOP) ಎಂಬ ಅಪರೂಪದ, ಮಾರಣಾಂತಿಕ ಆನುವಂಶಿಕ ಕಾಯಿಲೆಗೆ ತುತ್ತಾಗಿದ್ದಾಳೆ ಎಂದು ವೈದ್ಯರು ಹೇಳಿದರು. ಈ ರೋಗ 20 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ವಿರಳವಾದ ಕಾಯಿಲೆಯಾಗಿದ್ದು, ಈ ರೋಗ ಬಂದವರ ಮಾಂಸಖಂಡಗಳು ಕ್ರಮೇಣ ಎಲುಬುಗಳಾಗಿ ಮಾರ್ಪಾಡಾಗುತ್ತವೆ. ಇದೀಗ ಲೆಕ್ಸಿ ಮಾಂಸಖಂಡಗಳೂ ಎಲುಬಾಗಿ ಬದಲಾಗುತ್ತಿದ್ದು, ಆಕೆಯ ಶರೀರ ಪೂರ್ತಿಯಾಗಿ ಕಲ್ಲಿನಂತಾಗುತ್ತಿದೆ.

ಏಪ್ರಿಲ್​​ನಲ್ಲಿಯೇ ಎಕ್ಸ್​ ರೇ ಮಾಡಲಾಗಿದೆ. ಈ ವೇಳೆ ಆಕೆಯ ಕಾಲಿನ ಹೆಬ್ಬೆರಳ ಜಾಯಿಂಟ್​ ಬಳಿ ಊದಿಕೊಂಡಂತಿರುವ ಕುರುಗಳು ಕಾಣಿಸಿವೆ. ಹಾಗೇ, ಕೈಯ ಹೆಬ್ಬೆರಳುಗಳಲ್ಲಿ ಡಬಲ್​ ಜಾಯಿಂಟ್​ ಇರುವುದೂ ಗೊತ್ತಾಗಿದೆ. ಈ ಎಫ್​ಒಪಿ ಕಾಯಿಲೆ ಬಂದರೆ ದೇಹದೊಳಗೆ ಅಸ್ಥಿಪಂಜರದ ಹೊರಭಾಗದಲ್ಲಿ ಮೂಳೆ ರಚನೆ ಉಂಟಾಗುತ್ತದೆ. ನಮ್ಮ ದೇಹದ ಚಲನೆಯನ್ನು ನಿರ್ಬಂಧಿಸುತ್ತದೆ. ಸ್ನಾಯುಗಳು, ಸ್ನಾಯುರಜ್ಜುಗಳು ಮತ್ತು ಅಸ್ಥಿರಜ್ಜುಗಳಂತಹ ಸಂಯೋಜಕ ಅಂಗಾಂಶಗಳನ್ನೂ ಮೂಳೆಗಳಾಗಿ ಬದಲಾಗುತ್ತವೆ. ಈ ಕಾಯಿಲೆಗೆ ಯಾವುದೇ ಸರಿಯಾದ ಚಿಕಿತ್ಸೆಯೂ ಇಲ್ಲ. ಈ ರೋಗ ಬಂದವರು ತುಂಬ ವರ್ಷ ಬದುಕುವ ಸಾಧ್ಯತೆ ತೀರ ಕಡಿಮೆ ಇರುತ್ತದೆ.

ಇದೀಗ ಕಾಯಿಲೆಯಿಂದ ಬಳಲುತ್ತಿರುವ ಲೆಕ್ಸಿ ಆರೋಗ್ಯ ಸ್ಥಿತಿ ಬಗ್ಗೆ ಪಾಲಕರು ಭಯದಿಂದ ಇದ್ದಾರೆ. ಆಕೆಗೆ ಯಾವುದೇ ಚುಚ್ಚುಮದ್ದು, ವ್ಯಾಕ್ಸಿನ್​, ಔಷಧಗಳನ್ನು ಕೊಡಲೂ ಸಾಧ್ಯವಾಗುತ್ತಿಲ್ಲ. ನನ್ನ ಮಗಳು ಹುಟ್ಟುವಾಗ ಆರೋಗ್ಯವಾಗಿಯೇ ಇದ್ದಳು. ಅವಳಿಗೆ ಇಂಥದ್ದೊಂದು ಅಪರೂಪದ ಕಾಯಿಲೆ ಬಂದಿರುವುದನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಲೆಕ್ಸಿ ತಾಯಿ ಹೇಳಿದ್ದಾರೆ. ಹೇಗಾದರೂ ಮಗುವನ್ನು ಬದುಕಿಸಿಕೊಳ್ಳಲು ಉತ್ತಮ ಚಿಕಿತ್ಸೆಯ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚಾದರೂ ಸರಿ ಮಗಳನ್ನು ಉಳಿಸಬೇಕು ಎಂಬ ದೃಷ್ಟಿಯಿಂದ ದೇಣಿಗೆ ಸಂಗ್ರಹವನ್ನೂ ಶುರು ಮಾಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​; ಕರ್ನಾಟಕದಲ್ಲಿ ಬಾಗಿಲು ಮುಚ್ಚಲಿವೆ 150 ಚಿತ್ರಮಂದಿರಗಳು

5 month old baby girl turn into Stone in United Kingdom

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು