AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಫೀಜ್ ಸಯೀದ್ ಮನೆ ಹೊರಗಿನ ಸ್ಫೋಟಕ್ಕೆ ಭಾರತೀಯ ನಾಗರಿಕ ಮಾಸ್ಟರ್ ಮೈಂಡ್, RAW ಏಜೆನ್ಸಿ ಕೈವಾಡ ಎಂದ ಪಾಕ್

ಮುಂಬೈ ದಾಳಿಯ ಮಾಸ್ಟರ್ ಮೈಂಡ್- ನಿಷೇಧಿತ ಉಗ್ರ ಸಂಘಟನೆ ಜಮಾತ್-ಉದ್-ದವಾದ ಮುಖ್ಯಸ್ಥ ಹಫೀಜ್​ ಸಯೀದ್​ನ ಲಾಹೋರ್​ನ ಮನೆಯ ಸಮೀಪ ನಡೆದ ಪ್ರಬಲ ಬಾಂಬ್​ ಸ್ಫೋಟದ ಹಿಂದೆ ಭಾರತದ ನಾಗರಿಕ ಮಾಸ್ಟರ್​ ಮೈಂಡ್ ಆಗಿ ಕೆಲಸ ಮಾಡಿದ್ದಾನೆ ಎಂದು ಪಾಕ್ ಆರೋಪಿಸಿದೆ.

ಹಫೀಜ್ ಸಯೀದ್ ಮನೆ ಹೊರಗಿನ ಸ್ಫೋಟಕ್ಕೆ ಭಾರತೀಯ ನಾಗರಿಕ ಮಾಸ್ಟರ್ ಮೈಂಡ್, RAW ಏಜೆನ್ಸಿ ಕೈವಾಡ ಎಂದ ಪಾಕ್
ನಿಷೇಧಿತ ಜಮಾತ್ ಉದ್ ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ (ಸಂಗ್ರಹ ಚಿತ್ರ)
TV9 Web
| Updated By: Srinivas Mata|

Updated on: Jul 05, 2021 | 12:18 AM

Share

ಇಸ್ಲಾಮಾಬಾದ್: ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಾಗೂ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ಹಫೀಜ್ ಸಯೀದ್​ನ ಲಾಹೋರ್​ನ ಮನೆಯ ಬಳಿ ಕಳೆದ ತಿಂಗಳು ನಡೆದ ಪ್ರಬಲ ಬಾಂಬ್ ಸ್ಫೋಟಕ್ಕೆ ಭಾರತೀಯ ನಾಗರಿಕ ಕಾರಣ ಎಂದು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸೂಫ್ ಭಾನುವಾರ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಲಾಹೋರ್​ನ ಜೊಹರ್​ ಟೌನ್​ನಲ್ಲಿ ಬೋರ್ಡ್​ ಆಫ್ ರೆವೆನ್ಯೂ (BOR) ಹೌಸಿಂಗ್ ಸೊಸೈಟಿಯಲ್ಲಿ ಇರುವ ಸಯೀದ್ ಮನೆಯ ಬಳಿ ಜೂನ್ 23, 2021ರಂದು ಪ್ರಬಲ ಕಾರು ಬಾಂಬ್ ಸ್ಫೋಟವಾಗಿತ್ತು. ಇದರಲ್ಲಿ ಮೂವರು ಮೃತಪಟ್ಟು, ಇಪ್ಪತ್ನಾಲ್ಕು ಮಂದಿ ಗಾಯಗೊಂಡಿದ್ದರು. ಮೊಯೀದ್ ಯೂಸೂಫ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಧಿವಿಜ್ಞಾನ ವಿಶ್ಲೇಷಣೆ, ಭಯೋತ್ಪಾದಕರಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಸಲಕರಣೆಗಳು, ಈ ಭಯೋತ್ಪಾದನಾ ದಾಳಿಯ ಮಾಸ್ಟರ್​ಮೈಂಡ್ ಹಾಗೂ ಹ್ಯಾಂಡ್ಲರ್​ಗಳನ್ನು ಗುರುತಿಸಿದ್ದೇವೆ. ಈ ವಿಚಾರದಲ್ಲಿ ನಮಗೆ ಯಾವ ಅನುಮಾನವೂ ಇಲ್ಲ ಅಥವಾ ವಿನಾಯಿತಿಯೂ ತೆಗೆದುಕೊಳ್ಳದೆ ಹೇಳುತ್ತಿದ್ದೇವೆ; ದಾಳಿಯ ಮುಖ್ಯ ಮಾಸ್ಟರ್​ಮೈಂಡ್ ಭಾರತದ ಗುಪ್ತಚರ ಇಲಾಖೆ RAWಗೆ ಸೇರಿದ್ದು, ಆತ ಭಾರತೀಯ ನಾಗರಿಕ ಮತ್ತು ಭಾರತ ಮೂಲದವನು ಎಂದಿದ್ದಾರೆ.

ಆದರೆ, ಮುಖ್ಯವಾದ ಆರೋಪಿ ಯಾರು ಎಂಬುದನ್ನು ತಿಳಿಸಿಲ್ಲ. ಅಂದಹಾಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಹಿಂದೆ ಕೂಡ ಪಾಕಿಸ್ತಾನದ ಇಂಥ ಆರೋಪಗಳನ್ನು ನಿರಾಕರಿಸಿದೆ. ಆ ದೇಶದಲ್ಲಿ ನಡೆದ ಭಯೋತ್ಪಾದನಾ ಚಟುವಟಿಕೆಗಳಿಗೆ ಊಹಾತ್ಮಕವಾಗಿ ತಳುಕು ಹಾಕಿ, ಯಾವುದೋ ಸಾಕ್ಷ್ಯಗಳು ಇವೆ ಎಂದು ಹೇಳಿಕೊಳ್ಳುವುದು ಪಾಕಿಸ್ತಾನಕ್ಕೆ ಸಾಮಾನ್ಯ ವಿದ್ಯಮಾನವಾಗಿದೆ ಎಂದು ಆರೋಪವನ್ನು ಅಲ್ಲಗಳೆಯಲಾಗಿದೆ. ಪಾಕಿಸ್ತಾನದ ಹತಾಶ ಪ್ರಯತ್ನ ಇದು. ಅಂತರರಾಷ್ಟ್ರೀಯ ಸಮುದಾಯದ ಎದುರು ಅದರ ತಂತ್ರ ಬಯಲಾಗಿದೆ. ಆ ದೇಶದ ನಾಯಕತ್ವವೇ ಭಯೋತ್ಪಾದನಾ ಚಟುವಟಿಕೆ ಪ್ರಾಯೋಜಕತ್ವವನ್ನು ಒಪ್ಪಿಕೊಳ್ಳುತ್ತಿದೆ. ಇದೀಗ ಮತ್ತೊಂದು ಭಾರತ ವಿರೋಧಿ ಪಿತೂರಿ. ಈಗ ಹೇಳುತ್ತಿರುವ ಸಾಕ್ಷ್ಯಕ್ಕೆ ಯಾವ ವಿಶ್ವಾಸಾರ್ಹತೆಯೂ ಇಲ್ಲ. ಎಲ್ಲವನ್ನೂ ತಿರುಚಲಾಗಿದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ವಕ್ತಾರರು ಹೇಳಿದ್ದಾರೆ. ಅಂದ ಹಾಗೆ ಕಳೆದ ನವೆಂಬರ್​ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹ್ಮೂದ್ ಖುರೇಷಿ, ಭಾರತದ ವಿರುದ್ಧ ಭಯೋತ್ದಾದನೆ ದಾಳಿಯ ಆರೋಪ ಮಾಡಿದ್ದರು.

ಯೂಸೂಫ್ ಮಾತನಾಡಿ, ಸರ್ಕಾರದ ಬಳಿ ನಕಲಿ ಹೆಸರುಗಳಿದ್ದವು. ಶಂಕಿತ ಆರೋಪಿಗಳ ನಿಜವಾದ ಗುರುತು ಮತ್ತು ಸ್ಥಳದ ಸಮನ್ವಯವನ್ನು ವಿವಿಧ ಸಂಸ್ಥೆಗಳ ಜತೆಗೆ ಮಾಡಲಾಯಿತು. ಆ ನಂತರ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿ, ಸೂಚನೆ ನೀಡದರು. ಆ ಪ್ರಕಾರವಾಗಿ ಸ್ಫೋಟದ ಬಗ್ಗೆ ವಿವರಗಳನ್ನು ದೇಶದ ಎದುರು ಹಂಚಿಕೊಳ್ಳಲಾಗುತ್ತಿದೆ. ನಾಗರಿಕ ಮತ್ತು ಸೇನಾ ಗುಪ್ತಚರ ಸಂಸ್ಥೆಗಳ ಮಧ್ಯದ ಸಮನ್ವಯತೆಯಿಂದಾಗಿ ಭಯೋತ್ಪಾದಕರು ಮತ್ತು ಅವರ ಅಂತರರಾಷ್ಟ್ರೀಯ ನಂಟನ್ನು ಗುರುತಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಹಫೀಜ್ ಸಯೀದ್​ನನ್ನು ವಿಶ್ವಸಂಸ್ಥೆಯಿಂದಲೇ ಭಯೋತ್ಪಾದಕ ಎಂದು ಘೋಷಿಸಿದ್ದು, ಆತನ ತಲೆಗೆ ಅಮೆರಿಕ 1 ಕೋಟಿ ಯುಎಸ್​ಡಿ ಬಹುಮಾನ ಇಟ್ಟಿದೆ. ಭಯೋತ್ಪಾದನಾ ಹಣಕಾಸು ನೆರವು ಪ್ರಕರಣದಲ್ಲಿ ಸಯೀದ್​ಗೆ ಪಾಕಿಸ್ತಾನದಲ್ಲಿ 36 ವರ್ಷ ಜೈಲು ಶಿಕ್ಷೆ ಆಗಿದೆ. ಭಯೋತ್ಪಾದನೆ ಚಟುವಟಿಕೆಗಳಿಗೆ ಹನಕಾಸು ನೆರವು ನೀಡಿದ ಆರೋಪದಲ್ಲಿ ಹಫೀಜ್ ಸಯೀದ್ ಲಾಹೋರ್​ನ ಕೋಟ್ ಲಖ್​ಪತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಇದನ್ನೂ ಓದಿ: ಮುಂಬೈ ಉಗ್ರದಾಳಿ ಮಾಸ್ಟರ್ ಮೈಂಡ್​ ಹಫೀಜ್​ ಸೈಯದ್​ ಮನೆ ಸಮೀಪ ಸ್ಫೋಟ; ಇಬ್ಬರು ಸಾವು

(Pakistan NSA Moeed Yousuf alleged against RAW, intelligence agency of India for bomb blast outside Hafiz Saeed’s Lahore house)

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ