ಜಾರ್ಜಿಯಾದ 55-ವರ್ಷ-ವಯಸ್ಸಿನ ವ್ಯಕ್ತಿ ತನ್ನ ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಗುಂಡಿಟ್ಟು ಕೊಂದನೇ?

ವೇರ್ ಕೌಂಟಿ ಶರೀಫ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ ವೇಕ್ರಾಸ್​ನ ಬರ್ನಾರ್ಡ್ ರಿಟ್ಟನ್​ಹೌಸ್ ವಿರುದ್ಧ ಇಬ್ಬರ ಹತ್ಯೆ ಮತ್ತು ಕಳ್ಳತನದ ಆರೋಪ ದಾಖಲಿಸಲಾಗಿದೆ. ಮಂಗಳವಾರದಂದು ರಿಟ್ಟನ್​ಹೌಸ್​ನನ್ನು ಅವನ ಮನೆಯಲ್ಲಿ ಬಂಧಿಸಿ ಅವನಿಂದ ಯಾವುದೇ ಪ್ರತಿರೋಧವಿಲ್ಲದೆ ವೇರ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು.

ಜಾರ್ಜಿಯಾದ 55-ವರ್ಷ-ವಯಸ್ಸಿನ ವ್ಯಕ್ತಿ ತನ್ನ ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಗುಂಡಿಟ್ಟು ಕೊಂದನೇ?
ಕೊಲೆಯಾದ ದಂಪತಿಯೊಂದಿಗೆ ಆರೋಪಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2022 | 8:11 AM

ವಯಸ್ಕ ತಾಯಿ ಮತ್ತು ಆಕೆಯ ಸಂಗಾತಿಯನ್ನು ಹತ್ಯೆಗೈದ ಆರೋಪದಲ್ಲಿ ಜಾರ್ಜಿಯಾ ಪೊಲೀಸರು 55-ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಸೋಮಾವಾರ ಬೆಳಗ್ಗೆ ವರ್ಜಿನಿಯಾ ಡಿ ಥಾಮಸ್ (Virginia D Thomas) (73) ಮತ್ತು ಆಕೆಯ ಪಾರ್ಟನರ್ ಚಾರ್ಲ್ಸ್ ಬಾರ್ನೆಟ್ (Charles Barnett) (75) ಶವಗಳು ಅವರ ಬೆಡ್ ರೂಮಿನಲ್ಲಿ ಪತ್ತೆಯಾದವು ಎಂದು ಜಾರ್ಜಿಯಾ ಬ್ಯರೋ ಆಫ್ ಇನ್ವೆಸ್ಟಿಗೇಶನ್ (GIB) ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ತನ್ನ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವೇರ್ ಕೌಂಟಿ ಶರೀಫ್ ಕಚೇರಿ ನೀಡಿರುವ ಮಾಹಿತಿ ಪ್ರಕಾರ ವೇಕ್ರಾಸ್​ನ ಬರ್ನಾರ್ಡ್ ರಿಟ್ಟನ್​ಹೌಸ್ ವಿರುದ್ಧ ಇಬ್ಬರ ಹತ್ಯೆ ಮತ್ತು ಕಳ್ಳತನದ ಆರೋಪ ದಾಖಲಿಸಲಾಗಿದೆ. ಮಂಗಳವಾರದಂದು ರಿಟ್ಟನ್​ಹೌಸ್​ನನ್ನು ಅವನ ಮನೆಯಲ್ಲಿ ಬಂಧಿಸಿ ಅವನಿಂದ ಯಾವುದೇ ಪ್ರತಿರೋಧವಿಲ್ಲದೆ ವೇರ್ ಕೌಂಟಿ ಜೈಲಿಗೆ ಕರೆದೊಯ್ಯಲಾಯಿತು.

ಒಂದು ದಿನ ಮೊದಲು ರಿಟ್ಟನ್​ಹೌಸ್ ಸಂಬಂಧಿಯೊಬ್ಬ ಬೆಳಗ್ಗೆ 8:49 ಗಂಟೆಗೆ 911 ಗೆ ಕರೆ ಮಾಡಿ ಬಾರ್ನೆಟ್ ಹಾಗೂ ಥಾಮಸ್ ಅವರು ವೇಕ್ರಾಸ್ನಲ್ಲಿರುವ ತಮ್ಮ ಮನೆಯಲ್ಲಿ ಸತ್ತುಬಿದ್ದಿರುವುದನ್ನು ಕಂಡಿರುವುದಾಗಿ ಹೇಳಿದ್ದಾನೆ. ಪೊಲೀಸರು ಅಲ್ಲಿಗೆ ಆಗಮಿಸಿದಾಗ ವಯಸ್ಕ ದಂಪತಿ ಗುಂಡಿನೇಟಿನಿಂದ ಸತ್ತು ಬಿದ್ದಿರುವುದನ್ನು ಕಂಡರು.

ವೇರ್ ಕೌಂಟಿಯ ಶರೀಫ್ ಕಾರ್ಲ್ ಜೇಮ್ಸ್ ಜಾರ್ಜಿಯಾ ಬ್ಯೂರೋ ಆಫ್ ಇನ್ವೆಸ್ಟಿಗೇಶನ್​ನ ಡಗ್ಲಾಸ್ ಪ್ರಾದೇಶಿಕ ಕಚೇರಿ ಹತ್ಯೆಗಳ ತನಿಖೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.

ತನಿಖೆ ಜಾರಿಯಲ್ಲಿದೆ ಮತ್ತು ಅದು ಕೊನೆಗೊಂಡ ಬಳಿಕ ಪ್ರಕರಣವನ್ನು ವಿಚಾರಣೆಗಾಗಿ ವೇಕ್ರಾಸ್ ಜ್ಯುಡಿಶಿಯಲ್ ಸರ್ಕ್ಯೂಟ್ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿಗೆ ವರ್ಗಾಯಿಸಲಾಗುವುದೆಂದು ಶರೀಫ್ ಕಚೇರಿ ಹೇಳಿದೆ. ಹತ್ಯೆಗಳಿಗೆ ಸಂಬಂಧಿಸಿದಂತೆ ಯಾರಲ್ಲಾದರೂ ಮಾಹಿತಿ ಇದ್ದರೆ ಶರೀಫ್ ಕಚೇರಿ ಸಂಪರ್ಕಿಸುವಂತೆ ಸಾರ್ವಜನಿಕ ಪ್ರಕಟಣೆಯೊಂದರಲ್ಲಿ ತಿಳಿಸಲಾಗಿದೆ.

ಕೊಲೆಯ ಹಿಂದಿನ ಉದ್ದೇಶ ಏನಾಗಿತ್ತು ಅನ್ನೋದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

‘ಮಿ ಬಾರ್ನೆಟ್ ಮತ್ತು ಮಿಸೆಸ್ ಥಾಮಸ್ ಮೇಲೆ ನಡೆದಿರುವ ಈ ಅಪರಾಧ ನಿಜಕ್ಕೂ ಅತ್ಯಂತ ದುಃಖಕರ ಮತ್ತು ಹೇಯಕರವಾಗಿದೆ, ಎಂದು ಜೇಮ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ಜಿಬಿಐ ಏಜೆಂಟ್ ಮತ್ತು ನಮ್ಮ ಪತ್ತೇದಾರಿ ತಂಡಕ್ಕೆ ನಾನು ಧನ್ಯವಾಗಳನ್ನು ತಿಳಿಸುತ್ತೇನೆ. ಇವರೆಲ್ಲ ಪ್ರಕರಣವನ್ನು ಬೇಧಿಸಲು ಅವಿರತವಾಗಿ ಶ್ರಮಿಸಿದ್ದಾರೆ,’ ಎಂದು ಅವರು ಹೇಳಿದ್ದಾರೆ.

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್