ಚೀನಾದ ಆಕ್ರಮಣಶೀಲತೆಯನ್ನು ಹತ್ತಿಕ್ಕಲು ಭಾರತಕ್ಕೆ ನೆರವಾಗುವ ಕಾನೂನು ತಿದ್ದುಪಡಿಗೆ ಯುಎಸ್ ಸಂಸತ್ತು ಅನುಮೋದನೆ

ಚೀನಾದ ಆಕ್ರಮಣಶೀಲತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯನೈಟೆಡ್ ಸ್ಟೇಟ್ಸ್ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ಅವಶ್ಯಕತೆಯಿದೆ. ನಮ್ಮೊಂದಿಗೆ ಮಿತ್ರರಾಷ್ಟ್ರಗಳ ಸಂಬಂಧ ಬಲಗೊಳ್ಳುವೆಡೆ ನಾನು ಕೆಲಸ ಮಾಡುತ್ತಿದ್ದೇನೆ ಮತ್ತು ಇಂಡಿಯ-ಚೀನಾ ಗಡಿಭಾಗದಲ್ಲಿ ಇಂಡಿಯ ತನ್ನ ಸುರಕ್ಷತೆಯನ್ನು ತಾನು ಕಾಪಾಡಿಕೊಳ್ಳಲು ಶಕ್ತವಾಗುವುದನ್ನು ನೋಡ ಬಯಸುತ್ತೇನೆ ಎಂದು ರೋ ಖನ್ನಾ ಹೇಳಿದ್ದಾರೆ.

ಚೀನಾದ ಆಕ್ರಮಣಶೀಲತೆಯನ್ನು ಹತ್ತಿಕ್ಕಲು ಭಾರತಕ್ಕೆ ನೆರವಾಗುವ ಕಾನೂನು ತಿದ್ದುಪಡಿಗೆ ಯುಎಸ್ ಸಂಸತ್ತು ಅನುಮೋದನೆ
ರೊ ಖನ್ನಾ, ಯುಎಸ್ ಕಾಂಗ್ರೆಸ್ ಸದಸ್ಯ
TV9kannada Web Team

| Edited By: Arun Belly

Jul 15, 2022 | 11:40 AM

ನವದೆಹಲಿ: ಕಾಸ್ಟಾದ ದಂಡನೀಯ (punitive) ನಿರ್ಬಂಧಗಳಿಗೆ ಭಾರತವನ್ನು ಹೊರತುಪಡಿಸುವ ಶಾಸನಾತ್ಮಕ ತಿದ್ದುಪಡಿಗೆ ಯುಎಸ್ ಪ್ರತಿನಿಧಿಗಳ ಸದನ ಅನುಮೋದನೆ ನೀಡಿದೆ. ಭಾರತೀಯ ಮೂಲದ ಅಮೆರಿಕನ್ ಮತ್ತು ಕಾಂಗ್ರೆಸ್ ಸದಸ್ಯ ರೋ ಖನ್ನಾ (Ro Khanna) ಅವರು ರಚಿಸಿ ಪ್ರಸ್ತಾಪಿಸಿರುವ ತಿದ್ದುಪಡಿಯು ನಿರ್ಬಂಧಗಳ ಕಾಯ್ದೆ ಮೂಲಕ ಅಮೆರಿಕದ ವಿರೋಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವನ್ನು (CAASTA) ಭಾರತಕ್ಕೆ ನೀಡುವಂತೆ ಜೋ ಬೈಡನ್ ಆಡಳಿತವನ್ನು ಆಗ್ರಹಿಸುತ್ತದೆ. ಗುರುವಾರದಂದು ಸದನದಲ್ಲಿ ನ್ಯಾಶನಲ್ ಡಿಫೆನ್ಸ್ ಅಥೋರೈಸೇಶನ್ ಌಕ್ಟ್ (ಎನ್ ಡಿ ಎ ಎ) ಚರ್ಚೆಗೆ ಬಂದಾಗ ಸದಸ್ಯರೆಲ್ಲ ಧ್ವನಿಮತದ ಮೂಲಕ ಶಾಸಕಾಂಗ ತಿದ್ದುಪಡಿಗೆ ಅನುಮೋದನೆ ನೀಡಿದರು.

ಚೀನಾದ ಆಕ್ರಮಣಶೀಲತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯನೈಟೆಡ್ ಸ್ಟೇಟ್ಸ್ ಭಾರತಕ್ಕೆ ಬೆಂಬಲವಾಗಿ ನಿಲ್ಲುವ ಅವಶ್ಯಕತೆಯಿದೆ. ನಮ್ಮೊಂದಿಗೆ ಮಿತ್ರರಾಷ್ಟ್ರಗಳ ಸಂಬಂಧ ಬಲಗೊಳ್ಳುವೆಡೆ ನಾನು ಕೆಲಸ ಮಾಡುತ್ತಿದ್ದೇನೆ ಮತ್ತು ಇಂಡಿಯ-ಚೀನಾ ಗಡಿಭಾಗದಲ್ಲಿ ಇಂಡಿಯ ತನ್ನ ಸುರಕ್ಷತೆಯನ್ನು ತಾನು ಕಾಪಾಡಿಕೊಳ್ಳಲು ಶಕ್ತವಾಗುವುದನ್ನು ನೋಡ ಬಯಸುತ್ತೇನೆ ಎಂದು ರೋ ಖನ್ನಾ ಹೇಳಿದ್ದಾರೆ.

ಸದರಿ ತಿದ್ದುಪಡಿಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಅದು ಸದನದಲ್ಲಿ ಯಾವುದೇ ಭಿನ್ನಮತವಿಲ್ಲದೆ ಪಾಸಾಗಿರುವುದಕ್ಕೆ ಹೆಮ್ಮೆಪಟ್ಟುಕೊಳ್ಳುತ್ತೇನೆ, ಎಂದು ಅವರು ಹೇಳಿದ್ದಾರೆ,

ಸದನದಲ್ಲಿ ನೀಡಿದ ತಮ್ಮ ಹೇಳಿಕೆಯಲ್ಲಿ ಖನ್ನಾ ಅವರು ಯುಎಸ್ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಯುಎಸ್-ಭಾರತ ಪಾಲುದಾರಿಕೆಗಿಂತ ಹೆಚ್ಚಿನ ಮಹತ್ವದ್ದು ಯಾವುದೂ ಇಲ್ಲ ಎಂದು ಹೇಳಿದರು.

‘ನನ್ನ ದ್ವಿಪಕ್ಷೀಯ ಎನ್‌ಡಿಎಎ ತಿದ್ದುಪಡಿಯು ಯುಎಸ್-ಭಾರತ ಪರಮಾಣು ಒಪ್ಪಂದದ ನಂತರ ಯುಎಸ್-ಭಾರತ ಸಂಬಂಧಗಳಿಗೆ ಕಾಂಗ್ರೆಸ್‌ ಮೂಲಕ ಹೊರಬಂದಿರುವ ಅತ್ಯಂತ ಮಹತ್ವದ ತಿದ್ದುಪಡಿಯಾಗಿದೆ ಎಂದು ಹೇಳಬಹುದು’ ಎಂದು ಖನ್ನಾ ಹೇಳಿದರು.

ಕ್ರಿಟಿಕಲ್ ಇಂಟೆಲಿಜೆನ್ಸ್, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಸೆಮಿ ಕಂಡಕ್ಟರ್ ಉತ್ಪಾದನೆ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿನ ಇತ್ತೀಚಿನ ಪ್ರಗತಿಗಳ ಕಡೆ ಗಮನಹರಿಸಲು ಎರಡು ದೇಶಗಳಲ್ಲಿನ ಸರ್ಕಾರಗಳು; ಶಿಕ್ಷಣ ಮತ್ತು ಉದ್ಯಮಗಳ ನಡುವೆ ನಿಕಟ ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲು ಕ್ರಿಟಿಕಲ್ ಮತ್ತು ಎಮರ್ಜಿಂಗ್ ಟೆಕ್ನಾಲಜೀಸ್ (ICET) ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಕಾರ್ಯಯೋಜನೆ ಸ್ವಾಗತಾರ್ಹ ಮತ್ತು ಅತ್ಯಗತ್ಯ ಹೆಜ್ಜೆ ಎಂದು ಸದರಿ ಶಾಸನ ಶಾಸನ ಹೇಳುತ್ತದೆ.

ಇಂಜಿನಿಯರ್‌ಗಳು ಮತ್ತು ಕಂಪ್ಯೂಟರ್ ವಿಜ್ಞಾನಿಗಳ ನಡುವಿನ ಇಂಥ ಸಹಯೋಗಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಮತ್ತು ಪ್ರಪಂಚದಾದ್ಯಂತದ ಇತರ ಪ್ರಜಾಪ್ರಭುತ್ವಗಳಲ್ಲಿ ಕ್ರಿಯಾಶೀಲತೆಯನ್ನು ಉತ್ತೇಜಿಸಲು ಮತ್ತು ತಾಂತ್ರಿಕ ಪ್ರಗತಿಯನ್ನು ಸುಗಮಗೊಳಿಸುವುದರ ತೊತೆಗೆ ರಷ್ಯಾ ಮತ್ತು ಚೀನಾದ ತಂತ್ರಜ್ಞಾನವನ್ನು ಹಿಂದಿಕ್ಕಲು ಸಹಾಯ ಮಾಡುತ್ತದೆ ಎಂದು ಶಾಸನ ವಿವರಿಸುತ್ತದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada