Breaking ಶ್ರೀಲಂಕಾದ ಮಾಜಿ ಪಿಎಂ ಮಹಿಂದಾ ರಾಜಪಕ್ಸ ದೇಶ ಬಿಟ್ಟು ಹೋಗಬಾರದು: ಶ್ರೀಲಂಕಾ ಸುಪ್ರೀಂ ಆದೇಶ

ಜುಲೈ 28ರ ವರೆಗೆ ನ್ಯಾಯಾಲಯದ ಅನುಮತಿ ಇಲ್ಲದೆಯೇ ಮಾಜಿ ಸಚಿವರು ದೇಶ ಬಿಟ್ಟು ಹೊರ ಹೋಗಬಾರದು ಎಂದು ಶ್ರೀಲಂಕಾದ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ.

Breaking ಶ್ರೀಲಂಕಾದ ಮಾಜಿ ಪಿಎಂ ಮಹಿಂದಾ ರಾಜಪಕ್ಸ ದೇಶ ಬಿಟ್ಟು ಹೋಗಬಾರದು: ಶ್ರೀಲಂಕಾ ಸುಪ್ರೀಂ ಆದೇಶ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 15, 2022 | 5:33 PM

ಕೊಲಂಬೊ: ಶ್ರೀಲಂಕಾದ (Sri Lanka) ಅಧ್ಯಕ್ಷ ಗೊಟಬಯ ರಾಜಪಕ್ಸ (Supreme Court) ಅವರು ಅಧ್ಯಕ್ಷ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿದ್ದು ಶುಕ್ರವಾರ ರಾಜೀನಾಮೆ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಇದರ ಬೆನ್ನಲ್ಲೇ ಗೊಟಬಯ ಅವರ ಸಹೋದರರಾದ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ (Mahinda Rajapaksa) ಮತ್ತು ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ, ಅವರು ದೇಶ ಬಿಟ್ಟು ಹೋಗದಂತೆ ಸುಪ್ರೀಂಕೋರ್ಟ್ ನಿರ್ಬಂಧ ವಿಧಿಸಿದೆ. ಜುಲೈ 28ರ ವರೆಗೆ ನ್ಯಾಯಾಲಯದ ಅನುಮತಿ ಇಲ್ಲದೆಯೇ ಮಾಜಿ ಸಚಿವರು ದೇಶ ಬಿಟ್ಟು ಹೊರ ಹೋಗಬಾರದು ಎಂದು ಶ್ರೀಲಂಕಾದ ಸುಪ್ರೀಂಕೋರ್ಟ್ ಶುಕ್ರವಾರ ಮಧ್ಯಂತರ ಆದೇಶ ನೀಡಿದೆ ಎಂದು ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿದೆ. ಗೊಟಬಯ ರಾಜಪಕ್ಸ ಅವರು ಈಗಾಗಲೇ ದೇಶ ತೊರೆದು ಮಲ್ಡೀವ್ಸ್ ಗೆ ಹೋಗಿ ಅಲ್ಲಿಂದ ಸಿಂಗಾಪುರದಲ್ಲಿ ಹೋಗಿ ನೆಲೆಸಿದ್ದಾರೆ.

ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಬಿಕ್ಕಟ್ಟು ಉಲ್ಪಣಕ್ಕೆ ರಾಜಪಕ್ಸ ಅವರ ಆಡಳಿತವೇ ಕಾರಣ ಎಂದು ತಿಂಗಳುಗಳಿಂದ ಇಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದು, ಜನಾಕ್ರೋಶ ತೀವ್ರವಾದಾಗ ಗೊಟಬಯ ಪಲಾಯನ ಮಾಡಿದ್ದಾರೆ. ಶ್ರೀಲಂಕಾದ ಸಂಸತ್ ಜುಲೈ 20ರಂದು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿವರೆಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಗೊಟಬಯ ಅವರು ಕಾನೂನಾತ್ಮಕವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೀಕರ್ ಮಹಿಂದಾ ಯಾಪಾ ಅಭೇವರ್ಧನಾ ಸುದ್ದಿಗಾರರರಿಗೆ ಹೇಳಿದ್ದಾರೆ.

ಇದನ್ನೂ ಓದಿ
Image
Gotabaya Rajapaksa ಶ್ರೀಲಂಕಾ ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜಪಕ್ಸ ರಾಜೀನಾಮೆ
Image
BIG NEWS: ಶ್ರೀಲಂಕಾ ಅಧ್ಯಕ್ಷರದ್ದು ಖಾಸಗಿ ಭೇಟಿ, ನಾವು ಆಶ್ರಯ ನೀಡಿಲ್ಲ: ಸಿಂಗಾಪುರ
Image
Gotabaya Rajapaksa: ಶ್ರೀಲಂಕಾದಿಂದ ಪರಾರಿಯಾದ ಗೊಟಬಯ ರಾಜಪಕ್ಸ ವಿರುದ್ಧ ಮಾಲ್ಡೀವ್ಸ್​​ನಲ್ಲೂ ಪ್ರತಿಭಟನೆ

ಪ್ರತಿಭಟನಾಕಾರರು ಶುಕ್ರವಾರ ಅಧ್ಯಕ್ಷರ ಅರಮನೆ ತೊರೆದಿದ್ದಾರೆ. ಕಳೆದ ಶನಿವಾರ ಪ್ರತಿಭಟನಾಕಾರರು ಈ ಅರಮನೆಗೆ ನುಗ್ಗಿ ಅಲ್ಲಿನ ಐಷಾರಾಮಿ ಸವಲತ್ತುಗಳನ್ನು ಅನುಭವಿಸಿ ಸಂಭ್ರಮಾಚರಣೆ ಮಾಡಿದ್ದರು. ಆದರೆ ತಕ್ಷಣವೇ ಫಾರೆನ್ಸಿಕ್ ತಂಡ ಅಲ್ಲಿಗೆ ಬಂದು ಹೆಚ್ಚಿನ ಹಾನಿಯಾಗದಂತೆ ತಡೆಯಲು ಬೆರಳಚ್ಚುಗಳನ್ನು ಸಂಗ್ರಹಿಸಿದೆ.

Published On - 5:03 pm, Fri, 15 July 22