AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check ಮುಖದ ಪಾರ್ಶ್ವವಾಯುಗೆ ಕೋವಿಡ್-19 ಲಸಿಕೆ ಕಾರಣ ಎಂದು ಹೇಳಿದ್ದಾರೆಯೇ ಜಸ್ಟಿನ್ ಬೀಬರ್?

ಲಸಿಕೆ ನನ್ನ ಜೀವನವನ್ನು ಹಾಳುಮಾಡಿದೆ. ನಾನು ಈ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಮೊಕದ್ದಮೆ ಹೂಡಲಿದ್ದೇನೆ. ಫಿಜರ್‌ನ ಸಿಇಒ ಅವರ ಕ್ಲೋಸೆಟ್‌ನಲ್ಲಿ ಬಹಳಷ್ಟು ಅಸ್ಥಿಪಂಜರಗಳಿವೆ. ಈಗ ಇದು ಮರುಪಾವತಿಯ ಸಮಯವಾಗಿದೆ ಎಂದು ಜಸ್ಟಿನ್ ಬೀಬರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

Fact Check ಮುಖದ ಪಾರ್ಶ್ವವಾಯುಗೆ ಕೋವಿಡ್-19 ಲಸಿಕೆ ಕಾರಣ ಎಂದು ಹೇಳಿದ್ದಾರೆಯೇ ಜಸ್ಟಿನ್ ಬೀಬರ್?
ವೈರಲ್ ಆಗಿರುವ ಪೋಸ್ಟ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Jul 15, 2022 | 8:56 PM

Share

ಜೂನ್ ತಿಂಗಳಲ್ಲಿ ಪಾಪ್ ಸ್ಟಾರ್ ಜಸ್ಟಿನ್ ಬೀಬರ್ (Justin Bieber) ತಮಗೆ ರಾಮ್ಸೆ ಹಂಟ್ ಸಿಂಡ್ರೋಮ್ ರೋಗ (Ramsay Hunt syndrome diagnosis) ಇರುವುದಾಗಿ ತಮ್ಮ ಅಭಿಮಾನಿಗಳಿಗೆ ಹೇಳಿದ್ದರು. ಇದೊಂದು ಅಪರೂಪದ ವೈದ್ಯಕೀಯ ಸ್ಥಿತಿ ಆಗಿದ್ದು ಇದರಿಂದಾಗಿ ಗಾಯಕನ ಮುಖದ ಒಂದು ಭಾಗಕ್ಕೆ ಪಾರ್ಶ್ವವಾಯು ತಗಲಿದೆ. ವಿಡಿಯೊದಲ್ಲಿ, ಅವರು ತಮ್ಮ ಮುಖದ ಒಂದು ಬದಿಯನ್ನು ಹೇಗೆ ಸರಿಸಲು ಸಾಧ್ಯವಾಗಲಿಲ್ಲ ಎಂಬುದನ್ನು ತೋರಿಸಿದ್ದು, ಕೆಲವು ಸಂಗೀತ ಕಚೇರಿಗಳನ್ನು ರದ್ದುಗೊಳಿಸಲು ಇದೇ ಕಾರಣವೆಂದು ಹೇಳಿದ್ದರು.ಆದರೆ ಬೀಬರ್ ಇದಕ್ಕೆ ಕೋವಿಡ್ -19 ಲಸಿಕೆ (Covid-19 vaccine) ಕಾರಣ ಎಂದು ಹೇಳಿರುವ ಪೋಸ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅನೇಕರು ವ್ಯಾಂಕೋವರ್ ಟೈಮ್ಸ್‌ನ ವರದಿಯನ್ನು ಹಂಚಿಕೊಂಡಿದ್ದಾರೆ, ಕೋವಿಡ್ -19 ಲಸಿಕೆ ಮುಖದಲ್ಲಿ ಶಾಶ್ವತ ಪಾರ್ಶ್ವವಾಯುವಿಗೆ ಕಾರಣವಾಯಿತು ಎಂದು ಬೀಬರ್ ಹೇಳಿಕೊಂಡಿದ್ದಾರೆ ಎಂದು ಇದು ವರದಿ ಮಾಡಿದೆ. ಲಸಿಕೆ ನನ್ನ ಜೀವನವನ್ನು ಹಾಳುಮಾಡಿದೆ. ನಾನು ಈ ಅಪರಾಧಿಗಳನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಮೊಕದ್ದಮೆ ಹೂಡಲಿದ್ದೇನೆ. ಫಿಜರ್‌ನ ಸಿಇಒ ಅವರ ಕ್ಲೋಸೆಟ್‌ನಲ್ಲಿ ಬಹಳಷ್ಟು ಅಸ್ಥಿಪಂಜರಗಳಿವೆ. ಈಗ ಇದು ಮರುಪಾವತಿಯ ಸಮಯವಾಗಿದೆ ಎಂದು ಜಸ್ಟಿನ್ ಬೀಬರ್ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ. ಈ ಬಗ್ಗೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಮಾಡಿದ್ದು ಇದು ಸುಳ್ಳು ಎಂದು ಹೇಳಿದೆ.ತನ್ನ ಮುಖದ ಪಾರ್ಶ್ವವಾಯುಗೆ ಕೋವಿಡ್ -19 ಲಸಿಕೆಗೆ ಕಾರಣವೆಂದು ಬೀಬರ್ ಹೇಳಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಜನರು ಶೇರ್ ಮಾಡುತ್ತಿರುವ ಸುದ್ದಿಯು ವಿಡಂಬನಾತ್ಮಕ ಸುದ್ದಿ.

ಫ್ಯಾಕ್ಟ್ ಚೆಕ್

ಈ ಬಗ್ಗೆ ಜನರು ವ್ಯಾಂಕೋವರ್ ಟೈಮ್ಸ್ ಲೇಖನವನ್ನು ತಮ್ಮ ಮೂಲವಾಗಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಲೇಖನದ ಕೆಳಭಾಗದಲ್ಲಿ, ಈ ವರದಿಯು ವಿಡಂಬನಾತ್ಮಕವಾಗಿದೆ. ಆರೋಗ್ಯ ಅಧಿಕಾರಿಗಳು ಕೋವಿಡ್ -19 ಲಸಿಕೆಗಳನ್ನು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಪರಿಗಣಿಸುತ್ತಾರೆ. ವ್ಯಾಂಕೋವರ್ ಟೈಮ್ಸ್‌ನ ” About Us ” ವಿಭಾಗದಲ್ಲಿ “ವ್ಯಾಂಕೋವರ್ ಟೈಮ್ಸ್ ವೆಸ್ಟ್ ಕೋಸ್ಟ್‌ನಲ್ಲಿ ವಿಡಂಬನೆಗೆ ಅತ್ಯಂತ ವಿಶ್ವಾಸಾರ್ಹ ಮೂಲವಾಗಿದೆ. ಸಂಪ್ರದಾಯವಾದಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಾವು ವಿಡಂಬನಾತ್ಮಕ ಸುದ್ದಿಗಳನ್ನು ಬರೆಯುತ್ತೇವೆ ಎಂದಿದೆ. ಹಾಗಾಗಿ  ಜಸ್ಟೀನ್ ಬೀಬರ್ ಬಗ್ಗೆ  ಜನರು ಶೇರ್  ಮಾಡುತ್ತಿರುವ ಸುದ್ದಿ ವಿಡಂಬನಾತ್ಮಕವೇ ಹೊರತು ನಿಜವಾದ ಸುದ್ದಿ ಅಲ್ಲ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು