Sri Lanka Crisis: ಅಭ್ಯಾಸಕ್ಕೆ ಹೋಗಲೂ ಸಾಧ್ಯವಾಗುತ್ತಿಲ್ಲ: ಪೆಟ್ರೋಲ್ಗಾಗಿ ಎರಡು ದಿನ ಕಾದು ಕುಳಿತ ಲಂಕಾ ಕ್ರಿಕೆಟಿಗ
Sri Lanka Crisis: ಲಂಕಾ ಕ್ರಿಕೆಟಿಗ ಚಮಿಕಾ ಕರುಣರತ್ನೆ (Chamika Karunaratne) ಈ ಬಗ್ಗೆ ಮಾತನಾಡಿದ್ದು ಅಭ್ಯಾಸ ನಡೆಸಲು ಕೂಡ ಸಾಧ್ಯವಾಗುತ್ತಿಲ್ಲ, ಪೆಟ್ರೋಲ್ಗಾಗಿ (Petrol) ಎರಡು ದಿನಗಳಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಶ್ರೀಲಂಕಾದಲ್ಲಿ (Sri Lanka) ಕ್ರಿಕೆಟ್ ಆಟಗಾರರು ಕೂಡ ಪರದಾಡುವ ಸ್ಥಿತಿ ಉಂಟಾಗಿದೆ. ಲಂಕಾ ಕ್ರಿಕೆಟಿಗ ಚಮಿಕಾ ಕರುಣರತ್ನೆ (Chamika Karunaratne) ಈ ಬಗ್ಗೆ ಮಾತನಾಡಿದ್ದು ಅಭ್ಯಾಸ ನಡೆಸಲು ಕೂಡ ಸಾಧ್ಯವಾಗುತ್ತಿಲ್ಲ, ಪೆಟ್ರೋಲ್ಗಾಗಿ (Petrol) ಎರಡು ದಿನಗಳಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇವರು, “ಅದೃಷ್ಟದಿಂದ ಎರಡು ದಿನ ಕಾದು ಈಗ ನನಗೆ ಪೆಟ್ರೋಲ್ ಸಿಕ್ಕಿದೆ. ಕ್ರಿಕೆಟ್ ಪಂದ್ಯದ ಅಭ್ಯಾಸಕ್ಕೆ ತೆರಳು ಕೂಡ ನನಗೆ ಸಾಧ್ಯವಾಗುತ್ತಿಲ್ಲ,” ಎಂದು ಹೇಳಿದ್ದಾರೆ. ಚಮಿಕಾ 2019 ರಲ್ಲಿ ಶ್ರೀಲಂಕಾ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಮುಂದಿನ ತಿಂಗಳು ಆಗಸ್ಟ್ನಲ್ಲಿ ಶ್ರೀಲಂಕಾದಲ್ಲಿ ಏಷ್ಯಾಕಪ್ 2022 ಆಯೋಜಿಸಲಾಗಿದೆ. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಪಂದ್ಯವಳಿ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಚಮಿಕಾ, “ಏಷ್ಯಾಕಪ್ ಬರುತ್ತಿದೆ ಹಾಗೂ ಲಂಕಾ ಪ್ರೀಮಿಯರ್ ಲೀಗ್ ಕೂಡ ಇದೇ ವರ್ಷ ನಡೆಯಲಿದೆ. ನನಗೆ ಏನು ಆಗಲಿದೆ ಎಂದು ಹೇಳಲು ಆಗುತ್ತಿಲ್ಲ. ನಾನು ಕೊಲಂಬೊಕ್ಕೆ ತೆರಳಿ ಅಲ್ಲಿ ಅಭ್ಯಾಸ ನಡೆಸಿ ಕ್ಲಬ್ ಸೀಸನ್ಗಳಲ್ಲಿ ಆಡಬೇಕಷ್ಟೆ. ಪೆಟ್ರೋಲ್ಗಾಗಿ ಎರಡು ದಿನ ಸಾಲಿನಲ್ಲಿ ನಿಂತಿದ್ದೇನೆ. ಅದೃಷ್ಟದಿಂದ ಇಂದು ಸಿಕ್ಕಿತು. ಆದರೆ, ಇದು ಎರಡು ಮೂರು ದಿನಕ್ಕಷ್ಟೆ ಬರಬಹುದು,” ಎಂದಿದ್ದಾರೆ.
“ನಾವು ಏಷ್ಯಾಕಪ್ಗೆ ತಯಾರಾಗಿದ್ದೇವೆ. ನನಗನಿಸುವ ಪ್ರಕಾರ ಅದೊಂದು ದೊಡ್ಡ ಈವೆಂಟ್. ನಾವು ಆಸ್ಟ್ರೇಲಿಯಾ ಜೊತೆಗೆ ಇಲ್ಲಿ ಪಂದ್ಯವನ್ನು ಆಡಿದ್ದು ಉತ್ತಮವಾಗಿತ್ತು. ಏಷ್ಯಾಕಪ್ಗೆ ತಯಾರಿ ಕೂಡ ನಡೆಯುತ್ತಿದೆ. ಶ್ರೀಲಂಕಾದಲ್ಲಿ ಎಲ್ಲವೂ ಸರಿಯಾಗಿ ಸಾಗುತ್ತಿಲ್ಲ. ಒಳ್ಳೆಯ ಜನರು ಬಂದರೆ ಒಳ್ಳೆಯದು ನಡೆಯುತ್ತದೆ ಎಂಬ ನಂಬಿಕೆಯಿದೆ,” ಎಂಬುದು ಚಮಿಕಾ ಮಾತು.
ಶ್ರೀಲಂಕಾ vs ಪಾಕಿಸ್ತಾನ:
ಆರ್ಥಿಕ ಬಿಕ್ಕಟ್ಟಿನ ನಡುವೆ ಶ್ರೀಲಂಕಾ ಕ್ರಿಕೆಟ್ ತಂಡ ಗಲ್ಲೆ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಇಂದು ಆರಂಭವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ದಿಮುತ್ ಕರುಣರತ್ನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಕೇವಲ 1 ರನ್ ಗಳಿಸಿ ಶಾಹಿನ್ ಅಫ್ರಿದಿ ಬೌಲಿಂಗ್ನಲ್ಲಿ ಔಟಾಗಿದ್ದಾರೆ. ಸದ್ಯ ಕ್ರೀಸ್ನಲ್ಲಿ ಓಶಾಡ ಫೆರ್ನಾಂಡೊ ಹಾಗೂ ಕುಸಲ್ ಮೆಂಡಿಸ್ ಇದ್ದು ಎಚ್ಚರಿಕೆಯ ಆಟ ಪ್ರದರ್ಶಿಸುತ್ತಿದ್ದಾರೆ.
Published On - 11:12 am, Sat, 16 July 22