Philippines Earthquake: ಫಿಲಿಪೈನ್ಸ್​​ನಲ್ಲಿ ಪ್ರಬಲ ಭೂಕಂಪ; 7.1 ತೀವ್ರತೆ ದಾಖಲು, ಏರ್​ಪೋರ್ಟ್​ ರನ್​ ವೇ ಬಳಿ ಸಣ್ಣ ಬಿರುಕು

ಭೂಕಂಪದ ತೀವ್ರತೆ ನೋಡಿ ಮೊದಲು ಇದು ಸುನಾಮಿಯ ಮುನ್ನೆಚ್ಚರಿಕೆ ಎಂದು ಹೇಳಲಾಗಿತ್ತು. ಆದರೆ ನಂತರ ಫಿಲಿಪೈನ್ಸ್​ನ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಅದನ್ನು ತಳ್ಳಿಹಾಕಿದೆ.

Philippines Earthquake: ಫಿಲಿಪೈನ್ಸ್​​ನಲ್ಲಿ ಪ್ರಬಲ ಭೂಕಂಪ; 7.1 ತೀವ್ರತೆ ದಾಖಲು, ಏರ್​ಪೋರ್ಟ್​ ರನ್​ ವೇ ಬಳಿ ಸಣ್ಣ ಬಿರುಕು
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Aug 12, 2021 | 12:45 PM

ಫಿಲಿಪೈನ್ಸ್​​ನಲ್ಲಿ ಇಂದು ಪ್ರಬಲ ಭೂಕಂಪ (Philippines Earthquake) ಉಂಟಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.1ರಷ್ಟು ದಾಖಲಾಗಿದೆ ಎಂದು ಯುಎಸ್​ ಭೂವೈಜ್ಞಾನಿಕ ಸಮೀಕ್ಷೆ ಸಂಸ್ಥೆ (U.S. Geological Survey (USGS) ತಿಳಿಸಿದೆ. ಈ ಭೂಕಂಪದಿಂದ ಅಂತ ದೊಡ್ಡಮಟ್ಟದ ಹಾನಿಯಾಗಲಿಲ್ಲ, ಯಾರ ಜೀವವೂ ಹೋದ ಬಗ್ಗೆ ವರದಿಯಾಗಿಲ್ಲ. ಭೂಮಿಯ 65.6 ಕಿಮೀ ಆಳದಲ್ಲಿ ಕಂಪನ ಆಗಿದ್ದು, ದಾವೋ ನಗರದ ಆಗ್ನೇಯದಲ್ಲಿರುವ ಫಿಲಿಪೈನ್ ಸಾಗರ ಭೂಕಂಪದ ಕೇಂದ್ರ (Epicentre) ವಾಗಿದೆ. ಭೂಕಂಪದ ತೀವ್ರತೆ ನೋಡಿದರೆ ಅಪಾರ ಹಾನಿಯಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಅಂಥ ದೊಡ್ಡ ಮಟ್ಟದ ಹಾನಿಯೇನೂ ಆಗಿಲ್ಲ. ಯಾವುದೇ ಕಟ್ಟಡ, ಮನೆಗಳೂ ಕುಸಿದುಬಿದ್ದಿಲ್ಲ ಎಂದು ಸ್ಥಳೀಯ ಆಡಳಿತ ಅಧಿಕಾರಿ ರಿಚಾರ್ಡೋ ಜಲದ್​ ತಿಳಿಸಿದ್ದಾರೆ.

ಈ ಭೂಕಂಪ ಸ್ಥಳೀಯ ವಿಮಾನ ನಿಲ್ದಾಣಗಳು, ಸಾಗರದ ಬಂದರುಗಳು ಸೇರಿ ಮತ್ತಿತರ ಪ್ರಮುಖ ಸ್ಥಳಗಳ ಮೇಲೆ ಅಂಥ ದೊಡ್ಡಮಟ್ಟದ ಪ್ರಭಾವ ಬೀರಲಿಲ್ಲ. ಆದಾಗ್ಯೂ ದಕ್ಷಿಣದ ದಾವೊ ಓರಿಯಂಟಲ್ ಪ್ರಾಂತ್ಯದಲ್ಲಿ ಇರುವ ವಿಮಾನ ನಿಲ್ದಾಣದ ರನ್​ ವೇ ಬಳಿ ಸಣ್ಣಮಟ್ಟದ ಬಿರುಕು ಕಾಣಿಸಿಕೊಂಡಿದೆ. ಹಾಗಂತ ಯಾವುದೇ ಪ್ರಯಾಣಿಕರಿಗೂ ತೊಂದರೆ ಆಗಿಲ್ಲ ಎಂದೂ ತಿಳಿಸಿದ್ದಾರೆ.

ಭೂಕಂಪದ ತೀವ್ರತೆ ನೋಡಿ ಮೊದಲು ಇದು ಸುನಾಮಿಯ ಮುನ್ನೆಚ್ಚರಿಕೆ ಎಂದು ಹೇಳಲಾಗಿತ್ತು. ಆದರೆ ನಂತರ ಫಿಲಿಪೈನ್ಸ್​ನ ಭೂಕಂಪಶಾಸ್ತ್ರ ಅಧ್ಯಯನ ಕೇಂದ್ರ ಅದನ್ನು ತಳ್ಳಿಹಾಕಿದೆ. ಸುನಾಮಿ ಸಂಭವಿಸುವ ಅಪಾಯ ಇಲ್ಲ ಎಂದು ಹೇಳಿದೆ. ಫಿಲಿಪೈನ್ಸ್​ನ ಭೌಗೋಳಿಕೆ ರಚನೆ ಪ್ರಕಾರ, ಇಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿರುತ್ತದೆ.

ಇದನ್ನೂ ಓದಿ: ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ

Crypto Currency: ಕಳುವು ಮಾಡಿದ್ದ ಕ್ರಿಪ್ಟೊಕರೆನ್ಸಿ ಹಿಂತಿರುಗಿಸಿದ ಹ್ಯಾಕರ್ಸ್; ಕದಿಯೋದು ಸುಲಭ ಕ್ಯಾಶ್ ಮಾಡಿಸೋದು ಕಷ್ಟ ಏಕೆ?

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ