80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ

Nigeria: ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ.

80 ಮಕ್ಕಳು ಕಿಡ್ನ್ಯಾಪ್​ ಆಗಿ ತಿಂಗಳಾಯಿತು..ನಿಲ್ಲುತ್ತಿಲ್ಲ ಪಾಲಕರ ರೋಧನೆ; ಹಣಕ್ಕಾಗಿ ದುಷ್ಕರ್ಮಿಗಳ ಬೇಡಿಕೆ
ಅಪಹರಣಗೊಂಡ ಮಕ್ಕಳ ಪಾಲಕರ ದುಃಖ
Follow us
TV9 Web
| Updated By: Lakshmi Hegde

Updated on: Aug 05, 2021 | 3:11 PM

ನೈಜೀರಿಯಾದ ಉತ್ತರದಲ್ಲಿರುವ ವಸತಿ ಶಾಲೆಯೊಂದರಿಂದ ದುಷ್ಕರ್ಮಿಗಳು 80 ಮಕ್ಕಳನ್ನು ಅಪಹರಣ ಮಾಡಿ ಒಂದು ತಿಂಗಳೇ ಕಳೆಯಿತು. ಪಾಲಕರ ರೋಧನೆ ನೋಡಲಾಗುತ್ತಿಲ್ಲ. ಆದರೆ ಅಪಹರಣಕಾರರು ಅವರನ್ನಿನ್ನೂ ಬಿಟ್ಟಿಲ್ಲ. ಈಗ ಅಪಹರಣಾಕಾರರು ಮಕ್ಕಳನ್ನು ಬಿಡಬೇಕು ಎಂದರೆ ಹಣ ಬೇಕು ಎನ್ನುತ್ತಿದ್ದಾರೆ. ಪ್ರತಿ ಮಗುವಿಗೆ 1 ಮಿಲಿಯನ್​ ನೈರಾ (1.50 ಲಕ್ಷ ರೂ.ಗೂ ಅಧಿಕ)ಗಳನ್ನು ವಿಮೋಚನಾ ಮೊತ್ತವನ್ನಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಕ್ಕಳ ಬಿಡುಗಡೆಗಾಗಿ ಪಾದ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿದ್ದಾರೆ. ಅವರ ಮೂಲಕವೇ ಅಪಹರಣಕಾರರು ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ ಎಂದು ವರದಿಯಾಗಿದೆ.

ಇದೀಗ ಅಪಹರಣಗೊಂಡಿರುವ ಮಕ್ಕಳು ಕಡುನಾ ಜಿಲ್ಲೆಯ ಬೆಥೆಲ್​ ಬಾಪ್ಟಿಸ್ಟ್​ ಹೈಸ್ಕೂಲ್​ನವರಾಗಿದ್ದಾರೆ. ಕಳೆದ ಡಿಸೆಂಬರ್​ನಿಂದ ಒಂದಲ್ಲ ಒಂದು ಶಾಲೆಯ ಮಕ್ಕಳನ್ನು ಅಪಹರಿಸಿ, ಹಣದೋಚಲಾಗುತ್ತಿದೆ. ಇದೀಗ ಮಕ್ಕಳ ಅಪಹರಣ ನಡೆದ 10ನೇ ಶಾಲೆ ಇದಾಗಿದೆ. ಒಟ್ಟು 80 ವಿದ್ಯಾರ್ಥಿಗಳು ಅಪಹರಣ ಆಗಿದ್ದಾರೆ. ಪ್ರತಿ ವಿದ್ಯಾರ್ಥಿಗೆ 1 ಮಿಲಿಯನ್​ ನೈರಾಗಳಷ್ಟು ಹಣ ಬೇಕು ಎಂದು ದುಷ್ಕರ್ಮಿಗಳು ಕೇಳುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶಾಲೆಯಿಂದ ಒಟ್ಟು 108 ವಿದ್ಯಾರ್ಥಿಗಳನ್ನು ಅಪಹರಣ ಮಾಡಲಾಗಿತ್ತು. ಕಿಡ್ನ್ಯಾಪ್​ ಮಾಡಿದ ಎರಡೇ ದಿನಕ್ಕೆ 28 ವಿದ್ಯಾರ್ಥಿಗಳನ್ನು ಅವರು ಬಿಟ್ಟರು. ಆದರೆ ಉಳಿದ 80 ಮಂದಿ ಅವರ ಬಳಿಯೇ ಇದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಧರ್ಮಗುರು ರೆವರೆಂಡ್ ಇಟೆ ಜೋಸೆಫ್ ಹಯಾಬ್ ತಿಳಿಸಿದ್ದಾರೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

ಉತ್ತರ ನೈಜೀರಿಯಾದಲ್ಲಿ ಈತ್ತೀಚೆಗೆ ಮಕ್ಕಳನ್ನು ಅಪಹರಣ ಮಾಡುವ ಕೃತ್ಯ ತುಂಬ ಹೆಚ್ಚಾಗುತ್ತಿದೆ. ಶಸ್ತ್ರಧಾರಿಗಳ ಗುಂಪು ಹೀಗೆ ಶಾಲೆಗಳಿಂದ ಮಕ್ಕಳನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಡುತ್ತಿದೆ. ಇದನ್ನು ಮೊದಲು ಪ್ರಾರಂಭಿಸಿದ್ದು ನೈಜೀರಿಯಾದ ಜಿಹಾದಿಗಳ ಗುಂಪು ಬೋಕೋ ಹರಾಮ್​. ಈಗೀಗ ಹಣಕ್ಕಾಗಿ ಕಿಡ್ನ್ಯಾಪ್​ ಮಾಡುವ ದರೋಡೆಕೋರರ ಗುಂಪು ಹಲವಾರು ಹುಟ್ಟುಕೊಂಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Arvind Bellad: ನಾಳೆ ಧಾರವಾಡ ಬಂದ್ ಇಲ್ಲ; ಶಾಸಕ ಅರವಿಂದ ಬೆಲ್ಲದಗೆ ಸಚಿವ ಸ್ಥಾನ ದೊರೆಯದ್ದಕ್ಕೆ ಬಂದ್ ಎಂದು ವೈರಲ್ ಆದದ್ದು ಸುಳ್ಳುಸುದ್ದಿ

80 schoolchildren Kidnapped In Nigeria Kidnappers Demand Money to release

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ