ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ

ಮದುವೆಮನೆಯನ್ನು ಸೂತಕದ ಮನೆಯನ್ನಾಗಿಸಿದ ಸಿಡಿಲು; ಸೆಕೆಂಡ್​ಗಳ ಅಂತರದಲ್ಲಿ 16 ಮಂದಿ ಸಾವು, ವರನಿಗೆ ಗಾಯ
ಪ್ರಾತಿನಿಧಿಕ ಚಿತ್ರ

Dhaka: ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ ಬೋಟ್​ನಿಂದ ಇಳಿದರು.

TV9kannada Web Team

| Edited By: Lakshmi Hegde

Aug 04, 2021 | 5:03 PM

ಸಂಭ್ರಮದಿಂದ ನಡೆಯುತ್ತಿದ್ದ ಮದುವೆಮನೆ, ಸಿಡಿಲು ಬಡಿದ (lightning Strike) ಪರಿಣಾಮ ಸೂತಕದ ಮನೆಯಂತಾಗಿದೆ. ದುರ್ಘಟನೆ ನಡೆದದ್ದು ಬಾಂಗ್ಲಾದೇಶ (Banglasesh)ದ ಢಾಕಾದಲ್ಲಿ. ಒಂದೇ ಸೆಕೆಂಡ್​ನಲ್ಲಿ ಮೂರ್ನಾಲ್ಕು ಬಾರಿ ಸಿಡಿಲು ಬಡಿದು, ಮದುವೆ ಮನೆಯಲ್ಲಿ ಇದ್ದ, 16 ಜನರು ಮೃತಪಟ್ಟಿದ್ದಾರೆ. ವರ ಗಂಭೀರವಾಗಿ ಗಾಯಗೊಂಡಿದ್ದು, ವಧು ಪಾರಾಗಿದ್ದಾಳೆ.

ಇನ್ನೂ ಮದುವೆ ಕಾರ್ಯಕ್ರಮ ಶುರುವಾಗಿರಲಿಲ್ಲ. ಪಾರ್ಟಿ ನಡೆಯಲಿರುವ ಸ್ಥಳಕ್ಕೆ ವರ ಮತ್ತು ಅವನ ಕಡೆಯವರು ಒಂದಷ್ಟು ಜನ ಬೋಟ್​ನಲ್ಲಿ ಹೊರಟಿದ್ದರು. ಆಗ ಒಮ್ಮೆಲೇ ಗುಡುಗು ಶುರುವಾದ ಕಾರಣ ಶಿಬ್​ಗಂಜ್​ ಪಟ್ಟಣದ ಸಮೀಪ, ಆಶ್ರಯ ಪಡೆಯಲು ಬೋಟ್​ನಿಂದ ಇಳಿದರು. ಆದರೆ ಅಷ್ಟರಲ್ಲಿ ಸಿಡಿಲು ಬಡಿದ 16 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ. ಈ ವೇಳೆ ವಧು ಅಲ್ಲಿ ಇಲ್ಲದ ಕಾರಣ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾನ್ಸೂನ್​ ಮಾರುತಗಳ ಆರ್ಭಟಕ್ಕೆ ಬಾಂಗ್ಲಾದೇಶ ತತ್ತರಿಸುತ್ತಿದೆ. ಆಗ್ನೇಯ ಜಿಲ್ಲೆಯಾದ ಕಾಕ್ಸ್ ಬಜಾರ್​​ನಲ್ಲಿ ಒಂದು ವಾರದಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತತ್ಪರಿಣಾಮ ಸುಮಾರು 20 ಜನರ ಜೀವ ಹೋಗಿದೆ. ಅದರಲ್ಲಿ ಆರು ಮಂದಿ ರೊಹಿಂಗ್ಯಾ ನಿರಾಶ್ರಿತರು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಬಿ.ವೈ.ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕೈ ಕೊಯ್ದುಕೊಂಡ ಅಭಿಮಾನಿ..

ಅಟ್ಲೀ-ಶಾರುಖ್​ ಖಾನ್​ ಸಿನಿಮಾದ ಬಗ್ಗೆ ಹೊಸ​ ಅಪ್​ಡೇಟ್​; ಆಗಸ್ಟ್ 15ಕ್ಕೆ ಅಭಿಮಾನಿಗಳಿಗೆ ಸಿಗುತ್ತಿದೆ ಸರ್​ಪ್ರೈಸ್

Follow us on

Related Stories

Most Read Stories

Click on your DTH Provider to Add TV9 Kannada