ಅಫ್ಗಾನಿಸ್ತಾನ ರಕ್ಷಣಾ ಸಚಿವರ ನಿವಾಸದ ಸಮೀಪ ಸರಣಿ ಬಾಂಬ್ ಸ್ಫೋಟ: ಭಾರೀ ಅನಾಹುತದ ಸಾಧ್ಯತೆ

ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ರಕ್ಷಣಾ ಸಚಿವರ ನಿವಾಸದ ಸಮೀಪವೇ ಮಂಗಳವಾರ ರಾತ್ರಿ ಪ್ರಬಲ ಸರಣಿ ಬಾಂಬ್​ಗಳು ಸ್ಫೋಟಿಸಿದ್ದು ವ್ಯಾಪಕ ಅನಾಹುತವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಅಫ್ಗಾನಿಸ್ತಾನ ರಕ್ಷಣಾ ಸಚಿವರ ನಿವಾಸದ ಸಮೀಪ ಸರಣಿ ಬಾಂಬ್ ಸ್ಫೋಟ: ಭಾರೀ ಅನಾಹುತದ ಸಾಧ್ಯತೆ
ಕಾಬೂಲ್​ನಲ್ಲಿ ಬಾಂಬ್ ಸ್ಫೋಟ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 03, 2021 | 11:27 PM

ಕಾಬೂಲ್: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ರಕ್ಷಣಾ ಸಚಿವರ ನಿವಾಸದ ಸಮೀಪವೇ ಮಂಗಳವಾರ ರಾತ್ರಿ ಪ್ರಬಲ ಸರಣಿ ಬಾಂಬ್​ಗಳು ಸ್ಫೋಟಿಸಿದ್ದು ವ್ಯಾಪಕ ಅನಾಹುತವಾಗಿರಬಹುದು ಎಂದು ಅಂದಾಜಿಸಲಾಗಿದೆ. ಸಾವುನೋವಿನ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಅಫ್ಗನ್ ಸರ್ಕಾರದ ಹಲವು ಹಿರಿಯ ಅಧಿಕಾರಿಗಳ ಮನೆಗಳೂ ಇದೇ ಪ್ರದೇಶದಲ್ಲಿವೆ.

ದಾಳಿಯಲ್ಲಿ ಮೃತಪಟ್ಟವರ ನಿಖರ ವಿವರಗಳು ಲಭ್ಯವಾಗಿಲ್ಲ. ಆದರೆ ಪ್ರಬಲ ಸ್ಫೋಟದ ನಂತರ ಸಣ್ಣ ಮಟ್ಟದ ಹಲವು ಸ್ಫೋಟಗಳು ಮತ್ತು ಗುಂಡಿನ ಹಾರಾಟದ ಸದ್ದು ಬಹುದೂರದವರೆಗೂ ಕೇಳಿಸುತ್ತಿತ್ತು. ಆಂತರಿಕ ಇಲಾಖೆಯ ಪ್ರಕಟಣೆಯ ಪ್ರಕಾರ ಪ್ರತಿಷ್ಠಿತ ಶೆರ್​ಪುರ್​ ಸಮೀಪ ಈ ಸ್ಫೋಟ ಸಂಭವಿಸಿದೆ. ರಾಜಧಾನಿಯ ಹಸಿರು ವಲಯ ಎನ್ನಲಾಗುವ ಈ ಪ್ರದೇಶದಲ್ಲಿ ಭದ್ರತೆ ಸದಾ ಇರುತ್ತದೆ. ಕಳೆದ ಕೆಲ ದಿನಗಳಿಂದ ರಾಜಧಾನಿಯಲ್ಲಿ ಸ್ಫೋಟದ ಸದ್ದು ಕೇಳಿಸಿರಲಿಲ್ಲ.

ಸ್ಫೋಟದ ಹೊಣೆಯನ್ನು ಸದ್ಯದ ಮಟ್ಟಿಗೆ ಯಾರೂ ಹೊತ್ತಿಲ್ಲ. ಆದರೆ ಅಫ್ಗಾನಿಸ್ತಾನದಲ್ಲಿ ತಾಲೀಬಾನಿಗಳ ಪ್ರಭಾವ ಮತ್ತು ಮೇಲುಗೈ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಲ್ಲಿನ ಸರ್ಕಾರದ ಮೇಲೆ ಒತ್ತಡ ಬೀಳುತ್ತಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ಭಾಗದ ಹಲವು ಪ್ರಾಂತೀಯ ರಾಜಧಾನಿಗಳಿಗೆ ತಾಲೀಬಾನ್ ಮುತ್ತಿಗೆ ಹಾಕಿದೆ. ಈ ಸ್ಫೋಟದ ಮೂಲಕ ರಾಜಧಾನಿಯಲ್ಲಿಯೂ ದಾಳಿ ನಡೆಸುವ ಸಾಮರ್ಥ್ಯ ತನಗಿದೆ ಎಂದು ಬಿಂಬಿಸಿಕೊಳ್ಳಲು ತಾಲೀಬಾನ್ ಯತ್ನಿಸುತ್ತಿರಬಹುದು ಎಂದು ವಿಶ್ಲೇಷಿಸಲಾಗಿದೆ.

ತಾಲೀಬಾನ್​ ಜೊತೆಗೆ ಇತರ ಕೆಲ ಉಗ್ರಗಾಮಿ ಸಂಘಟನೆಗಳೂ ಅಫ್ಗಾನಿಸ್ತಾನದಲ್ಲಿ ಸಕ್ರಿಯವಾಗಿವೆ. ಕಾಬೂಲ್​ನಲ್ಲಿ ಈಚೆಗೆ ಆಗಿದ್ದ ಕೆಲ ಸ್ಫೋಟಗಳ ಹೊಣೆಗಾರಿಕೆಯನ್ನು ಇಸ್ಲಾಮಿಕ್ ಸ್ಟೇಟ್​ ಸಂಘಟನೆ ಹೊತ್ತುಕೊಂಡಿತ್ತು. ಆದರೆ ಸರ್ಕಾರ ಈ ಸ್ಫೋಟಗಳಿಗೆ ತಾಲೀಬಾನ್ ಕಾರಣ ಎಂದು ದೂರಿತ್ತು. ಪಾಕಿಸ್ತಾನದ ಕುಮ್ಮಕ್ಕಿನಿಂದ ತಾಲೀಬಾನ್ ಪ್ರಬಲವಾಗಿದ್ದು, ವ್ಯಾಪಕವಾಗಿ ದಾಳಿಗಳನ್ನು ಸಂಘಟಿಸುತ್ತಿದೆ ಎಂದು ಅಂತರರಾಷ್ಟ್ರೀಯ ವಿದ್ಯಮಾನಗಳ ಹಲವು ವಿಶ್ಲೇಷಕರು ಹೇಳಿದ್ದಾರೆ.

(Afghanistan Bomb Blast Kabul in witnessed many bomb blasts in posh Sherpur)

ಇದನ್ನೂ ಓದಿ: Tv9 Exclusive: ಅಫ್ಗಾನಿಸ್ತಾನದಿಂದ ಟಿವಿ9 ಗ್ರೌಂಡ್​ ರಿಪೋರ್ಟ್​: ಶಾಂಕ್ ವಾಯುನೆಲೆ ಸಮೀಪ ಅಫ್ಗನ್-ತಾಲೀಬಾನ್ ಸಂಘರ್ಷ

ಇದನ್ನೂ ಓದಿ: ತಾಲೀಬಾನ್​ ಜೊತೆಗೆ ಮಾತುಕತೆ ಮುರಿದುಬಿದ್ದರೆ ಭಾರತದ ಸೇನಾ ಸಹಾಯ ಕೋರುತ್ತೇವೆ: ಅಫ್ಗನ್ ಸರ್ಕಾರ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ