ನೀವು ಇಂಡಿಯನ್ಸ್ ಮೂರ್ಖರು; ಸಿಂಗಾಪುರದಲ್ಲಿ ಮಹಿಳೆಯನ್ನು ನಿಂದಿಸಿದ ಚೀನಾದ ಕ್ಯಾಬ್ ಡ್ರೈವರ್
ಡ್ರೈವಿಂಗ್ ಮಾಡುವಾಗ ಚಾಲಕ ಮಹಿಳೆ ಮೇಲೆ ರೇಗಾಡುತ್ತಾ, ನೀವು ಇಂಡಿಯನ್, ನಾನು ಚೈನೀಸ್ . ನೀವು ಅತ್ಯಂತ ಕೆಟ್ಟ ರೀತಿಯವರು ಎಂದು ಹೇಳಿದಾಗ, ಹೋಡೆನ್, "ನಾನು ಸಿಂಗಾಪುರ್ ಯುರೇಷಿಯನ್, ಭಾರತೀಯಳಲ್ಲ ಎಂದಿದ್ದಾರೆ. ಆತ ಇಷ್ಟು ಬೈದಾಡಿದ್ದರಿಂದ ನನ್ನ ಮೇಲೆ ಆತ ಹಲ್ಲೆ ನಡೆಸಿದರೂ ನಡೆಸಬಹುದು ಎಂದು ನಾನು ಮಗಳಲ್ಲಿ ಇದನ್ನು ರೆಕಾರ್ಡ್ ಮಾಡುವಂತೆ ಹೇಳಿದೆ ಎಂದು ಹೋಡೆನ್ ಹೇಳಿರುವುದಾಗಿ ಸಿಂಗಾಪುರದ ಬ್ರಾಡ್‌ಶೀಟ್ ಉಲ್ಲೇಖಿಸಿದೆ.
ಸಿಂಗಾಪುರ ಸೆಪ್ಟೆಂಬರ್ 25: ತನ್ನ ಕ್ಯಾಬ್ನಲ್ಲಿ ಪ್ರಯಾಣಿಸುತ್ತಿರುವ ಮಹಿಳೆ ಮತ್ತು ಆಕೆಯ ಮಗಳು ಭಾರತೀಯ (Indian) ಮೂಲದವರು ಎಂದು ಭಾವಿಸಿ ಚೀನಾದ (China) ಚಾಲಕನೊಬ್ಬ ನಿಂದಿಸಿದ್ದಾನೆ. ಮಹಿಳೆ ತನ್ನ ಒಂಬತ್ತು ವರ್ಷದ ಮಗಳೊಂದಿಗೆ ಪ್ರಯಾಣಿಸುತ್ತಿದ್ದಾಗ ಚಾಲಕ ಇದ್ದಕ್ಕಿದ್ದಂತೆ ಕಿರುಚುತ್ತಾ, ‘ನೀವು ಇಂಡಿಯನ್ಸ್, ನೀವು ಮೂರ್ಖರು’ ಎಂದು ಹೇಳಿದ್ದಾನೆ ಎಂದು 46 ವರ್ಷದ ಜಾನೆಲ್ಲೆ ಹೋಡೆನ್ ಹೇಳಿದ್ದಾರೆ. ಜಾನೆಲ್ಲೆ ಯುರೇಷಿಯನ್ ಮೂಲದವರು. ಆಕೆ ಭಾರತೀಯಳು ಎಂದು ಭಾವಿಸಿ ಚಾಲಕ ಕೂಗಾಡಿದ್ದಾನೆ.
ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕ್ಯಾಬ್ ಸವಾರಿಗಾಗಿರುವ ಪ್ಲಾಟ್‌ಫಾರ್ಮ್ ಟಾಡಾದಲ್ಲಿ ರೈಡ್ ಬುಕ್ ಮಾಡಿದಾಗ ಈ ಘಟನೆ ನಡೆದಿದೆ. ಪ್ರಯಾಣ ಸಮಯದಲ್ಲಿ, ಮುಂಬರುವ ಮೆಟ್ರೋ ನಿರ್ಮಾಣದ ಕಾರಣ ರಸ್ತೆಯ ಒಂದು ಭಾಗವನ್ನು ನಿರ್ಬಂಧಿಸಲಾಗಿದ್ದಕ್ಕೆ ಚಾಲಕ ಸಿಟ್ಟುಗೊಂಡಿದ್ದ. ಮಹಿಳೆ ತನ್ನ ಮಗಳೊಂದಿಗೆ ಮಾತನಾಡುತ್ತಿದ್ದಾಗ ಆ ಚಾಲಕ, ನಾನು ಅವನಿಗೆ ತಪ್ಪು ವಿಳಾಸ ಮತ್ತು ತಪ್ಪು ನಿರ್ದೇಶನಗಳನ್ನು ನೀಡಿದ್ದೇನೆ ಎಂದು ನನ್ನ ಮೇಲೆ ಕೂಗಾಡಲು ಪ್ರಾರಂಭಿಸಿದ್ದಾನೆ. ಆತ ಮತ್ತಷ್ಟು ರೇಗಾಡಿದಾಗ ಮಹಿಳೆ ಅದನ್ನು ರೆಕಾರ್ಡ್ ಮಾಡಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
View this post on Instagram
ನಿಮ್ಮ ಮಗಳು 1.35 ಮೀಟರ್‌ಗಿಂತ ಕಡಿಮೆ ಎತ್ತರವಿದ್ದಾಳೆ ಎಂದು ಆ ಚಾಲಕ ಪದೇ ಪದೇ ಹೇಳುತ್ತಾನೆ. ಆಗ ಹೋಡೆನ್ ಇಲ್ಲ ಮಗಳು 1.37 ಮೀಟರ್ ಇದ್ದಾಳೆ ಎಂದು ಹೇಳುತ್ತಿರುವುದು ವಿಡಿಯೊದಲ್ಲಿದೆ. ಆ ಚಾಲಕ ಬಾಲಕಿಯನ್ನುದ್ದೇಶಿಸಿ ಇದು “ಅತ್ಯಂತ ಕಾನೂನುಬಾಹಿರ” ಎಂದು ಹೇಳಿದ್ದಾನೆ. ಇಲ್ಲಿ ಮಕ್ಕಳ ಸುರಕ್ಷತೆಗಾಗಿ ಮಕ್ಕಳ ಸೀಟುಗಳಿರುತ್ತವೆ. ಭೂ ಸಾರಿಗೆ ಪ್ರಾಧಿಕಾರ (LTA) ಪ್ರಕಾರ ಸಿಂಗಾಪುರದ ಎಲ್ಲಾ ವಾಹನಗಳು 1.35 ಮೀಟರ್‌ಗಿಂತ ಕಡಿಮೆ ಎತ್ತರದ ಪ್ರಯಾಣಿಕರಿಗೆ ಬೂಸ್ಟರ್ ಸೀಟ್‌ಗಳನ್ನು ಹೊಂದಿರಬೇಕು ಅಥವಾ ಮಕ್ಕಳ ಸೀಟುಗಳನ್ನು ಹೊಂದಿರಬೇಕು.
ಡ್ರೈವಿಂಗ್ ಮಾಡುವಾಗ ಚಾಲಕ ಮಹಿಳೆ ಮೇಲೆ ರೇಗಾಡುತ್ತಾ, ನೀವು ಇಂಡಿಯನ್, ನಾನು ಚೈನೀಸ್ . ನೀವು ಅತ್ಯಂತ ಕೆಟ್ಟ ರೀತಿಯವರು ಎಂದು ಹೇಳಿದಾಗ, ಹೋಡೆನ್, “ನಾನು ಸಿಂಗಾಪುರ್ ಯುರೇಷಿಯನ್, ಭಾರತೀಯಳಲ್ಲ ಎಂದಿದ್ದಾರೆ. ಆತ ಇಷ್ಟು ಬೈದಾಡಿದ್ದರಿಂದ ನನ್ನ ಮೇಲೆ ಆತ ಹಲ್ಲೆ ನಡೆಸಿದರೂ ನಡೆಸಬಹುದು ಎಂದು ನಾನು ಮಗಳಲ್ಲಿ ಇದನ್ನು ರೆಕಾರ್ಡ್ ಮಾಡುವಂತೆ ಹೇಳಿದೆ ಎಂದು ಹೋಡೆನ್ ಹೇಳಿರುವುದಾಗಿ ಸಿಂಗಾಪುರದ ಬ್ರಾಡ್‌ಶೀಟ್ ಉಲ್ಲೇಖಿಸಿದೆ.
ನಾನು ಕಪ್ಪು ಚರ್ಮದವಳಾಗಿದ್ದರೂ,ಭಾರತೀಯಳಾಗಿದ್ದರೂ ಅಥವಾ ಆಗಿರದೇ ಇದ್ದರೂ ಇದು ಸರಿಯಲ್ಲ. ಆತ ಜನಾಂಗೀಯ ನಿಂದನೆ ಮಾಡಿದ. ಘಟನೆಯ ನಂತರ ತನ್ನ ಮಗು ಕೂಡ ನಡುಗಿ ಹೋಯ್ತು ಎಂದು ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ
‘ವೇಕ್ ಅಪ್ ಸಿಂಗಾಪುರ್ ಇನ್‌ಸ್ಟಾಗ್ರಾಮ್’ ಪೋಸ್ಟ್‌ನಲ್ಲಿನ ಕಾಮೆಂಟ್‌ಗಳಲ್ಲಿ ಟಾಡಾ ಸಿಂಗಾಪುರ್ (ಕ್ಯಾಬ್ ಕಂಪನಿ) ಈ ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಹೇಳಿದೆ. ನಾವು ವರ್ಣಭೇದ ನೀತಿ, ತಾರತಮ್ಯ ಅಥವಾ ನಿಂದನೆಯನ್ನು ಸಹಿಸುವುದಿಲ್ಲ. ನಮ್ಮ ತಂಡವು ಈ ವಿಷಯವನ್ನು ತನಿಖೆ ಮಾಡುತ್ತಿದೆ. ಇದನ್ನು ನಮ್ಮ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು ಎಂದು ಕಾಮೆಂಟ್ ಹೇಳಿದೆ.
ದಿ ಸ್ಟ್ರೈಟ್ಸ್ ಟೈಮ್ಸ್ ಸಂಸ್ಥೆಯು ಘಟನೆಯ ಬಗ್ಗೆ ತಿಳಿದಿತ್ತು ಎಂದು ಟಾಡಾ ವಕ್ತಾರರು ಹೇಳಿದ್ದಾರೆ. ಜನಾಂಗೀಯ ಭಿನ್ನಾಭಿಪ್ರಾಯಗಳನ್ನು ಸೂಚಿಸುವ ಟೀಕೆಗಳು ಅಥವಾ ಕಾಮೆಂಟ್‌ಗಳು ನೇರವಾಗಿ ಟಾಡಾ ಸಮುದಾಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ. ಇದು ನಮ್ಮ ಕಂಪನಿಯ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ. ನಾವು ಸಂಪೂರ್ಣವಾಗಿ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದೇವೆ. ಸಂದರ್ಭಗಳನ್ನು ಅರ್ಥಮಾಡಿಕೊಳ್ಳಿ ಮತ್ತು ನಮ್ಮ ಸಂಶೋಧನೆಗಳ ಆಧಾರದ ಮೇಲೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಟಾಡಾ ಯಾವುದೇ ಸಂದರ್ಭಗಳಲ್ಲಿ ಜನಾಂಗೀಯ ಕಾಮೆಂಟ್‌ಗಳನ್ನು ಅಥವಾ ಟೀಕೆಗಳನ್ನು ಕ್ಷಮಿಸುವುದಿಲ್ಲ ಮತ್ತು ಸಮಸ್ಯೆಯನ್ನು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಪರಿಹರಿಸಲು ಬದ್ಧವಾಗಿದೆ ಎಂದು ಹೇಳಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Mon, 25 September 23