ತನ್ನ 15 ದಿನದ ಹೆಣ್ಣು ಮಗುವಿನ ಚಿಕಿತ್ಸೆಗೆ ಹಣವಿಲ್ಲ ಎಂದು ಜೀವಂತ ಸಮಾಧಿ ಮಾಡಿದ ತಂದೆ

ಈ ಹೇಯ ಕೃತ್ಯಕ್ಕೆ ಇಡೀ ಮನುಷ್ಯ ಕುಲವೇ ನಾಚಿಕೆಪಡಬೇಕು, ಮಗುವಿನ ಚಿಕಿತ್ಸೆಗೆ ಹಣವಿಲ್ಲ ಎಂದು ತನ್ನ 15 ದಿನದ ಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ. ಇದೀಗ ಈ ಪೊಲೀಸರ ಮುಂದೆ ಬಂದು ತಪ್ಪೊಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಈ ಘಟನೆ ಎಲ್ಲಿ ನಡೆದಿದೆ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ತನ್ನ 15 ದಿನದ ಹೆಣ್ಣು ಮಗುವಿನ ಚಿಕಿತ್ಸೆಗೆ ಹಣವಿಲ್ಲ ಎಂದು ಜೀವಂತ ಸಮಾಧಿ ಮಾಡಿದ ತಂದೆ
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Jul 08, 2024 | 10:49 AM

ಪಾಕಿಸ್ತಾನದಲ್ಲಿ ಹೃದಯ ವಿದ್ರಾವಕವಾದ ಘಟನೆಯೊಂದು ನಡೆದಿದೆ. ಮನುಷ್ಯ ಕುಲವೇ ನಾಚಿಕೆ ಪಡೆಬೇಕು ಈ ಹೇಯ ಕೃತ್ಯಕ್ಕೆ. ನೌಶಹ್ರೋ ಫಿರೋಜ್​​ ಎಂಬ ವ್ಯಕ್ತಿ ತನ್ನ ಮಗುವನ್ನು ಜೀವಂತ ಸಮಾಧಿ ಮಾಡಿದ್ದಾನೆ ಎಂದು ಎಆರ್​​ವೈ ಸುದ್ದಿ ಸಂಸ್ಥೆ ಈ ಘಟನೆಯ ಬಗ್ಗೆ ವರದಿ ಮಾಡಿದೆ. ಈ ಬಗ್ಗೆ ಆ ವ್ಯಕ್ತಿಯೋ ಪೊಲೀಸರ ಮುಂದೆ ಬಂದು ಬಾಯಿ ಬಿಟ್ಟಿದ್ದಾನೆ. ತನಿಖೆ ವೇಳೆ ಫಿರೋಜ್​​ ನಾನೇ ನನ್ನ ಕೈಯಾರೆ ಮಗುವನ್ನು ಜೀವಂತ ಸಮಾಧಿ ಮಾಡಿದ್ದೇನೆ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

ತನ್ನ 15 ದಿನ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣವಿಲ್ಲ ಎಂದು, ಗೋಣಿ ಚೀಲದಲ್ಲಿ ಕಟ್ಟಿ ಹೂತಿಟ್ಟಿರುವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಮಗುವನ್ನು ಹೆಣ್ಣು ಎಂದು ಗುರುತಿಸಲಾಗಿದ್ದು. ಪೊಲೀಸರು ನೌಶಹ್ರೋ ಫಿರೋಜ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಲಯದ ಆದೇಶದ ಮೇರೆಗೆ ಮರಣೋತ್ತರ ಪರೀಕ್ಷೆಗಾಗಿ ಮಗುವನ್ನು ಸಮಾಧಿಯಿಂದ ಹೊರ ತೆಗೆದು ವಿಧಿವಿಜ್ಞಾನ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಮಾರು ಒಂದು ದಶಕಗಳ ಹಿಂದೆ ಇಂತಹದೇ ಒಂದು ಘಟನೆ ಪಾಕಿಸ್ತಾನದ ಪಂಜಾಬ್​​ ಪ್ರಾಂತ್ಯದಲ್ಲಿ ನಡೆದಿತ್ತು. ಈ ಘಟನೆಯಲ್ಲಿ ತಂದೆಯೊಬ್ಬ ತನ್ನ ಎರಡು ದಿನದ ಮಗುವಿನ ಮುಖವನ್ನು ವಿರೂಪಗೊಳಿಸಿ ಜೀವಂತ ಸಮಾಧಿ ಮಾಡಿದ್ದಾನೆ. ನಂತರ ಆ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: 2025ಕ್ಕೆ ಯುದ್ಧ, 5079ರಲ್ಲಿ ಪ್ರಪಂಚ ಅಂತ್ಯ, ಭೂಮಿ ನಾಶ, ಆಘಾತಕಾರಿ ಭವಿಷ್ಯ ನುಡಿದ ಬಾಬಾ ವಂಗಾ

ಮನೆ ಕೆಲಸದಾಕೆಗೆ ದೈಹಿಕ ಹಿಂಸೆ ನೀಡಿದ ದಂಪತಿ

ಇದೊಂದು ಪ್ರತ್ಯೇಕ ಘಟನೆ ದಂಪತಿ ತನ್ನ ಮನೆಯ 13 ವರ್ಷದ ಕೆಲಸದಾಕೆಯನ್ನು ನಿಂದಿಸಿ, ವಿವಸ್ತ್ರಗೊಳಿಸಿ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಈ ಘಟನೆ ಲಾಹೋರ್​​ನ ಡಿಫೆನ್ಸ್​​ ಬಿ ಪ್ರದೇಶದಲ್ಲಿ ನಡೆದಿದೆ. ಈ ಬಗ್ಗೆ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಹಸ್ಸಾಂ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಹಸ್ಸಾಂ ಪತ್ನಿ ನಾಪತ್ತೆಯಾಗಿದ್ದು, ಆಕೆಗಾಗು ಹುಡುಕಾಟ ನಡೆಸಲಾಗಿದೆ.

ದೂರಿನ ಪ್ರಕಾರ, ಬಾಲಕಿಯ ತಾಯಿ ನನ್ನ ಮಗಳನ್ನು ಪದೇ ಪದೇ ದೈಹಿಕವಾಗಿ ಹಿಂಸೆ ನೀಡಲಾಗಿದೆ. ಕಳ್ಳತನ ಆರೋಪ ಮಾಡಿ ಅವಳನ್ನು ವಿವಸ್ತ್ರಗೊಳಿದ್ದಾರೆ. ಹಾಗೂ ನನ್ನ ಮಗಳ ಕೈ ಮತ್ತಿ ಕಾಲನ್ನು ಮುರಿದಿದ್ದಾರೆ ಎಂದು ಹೇಳಲಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ