Air India: ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ತುರ್ತು ಭೂಸ್ಪರ್ಶ

TV9 Digital Desk

| Edited By: ಅಕ್ಷಯ್​ ಪಲ್ಲಮಜಲು​​

Updated on:Feb 03, 2023 | 10:23 AM

ಅಬುಧಾಬಿಯಿಂದ ಹೊರಡಿದ್ದು ಏರ್ ಇಂಡಿಯನ್ ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಯಾವುದೇ ರೀತಿಯ ಅಪಾಯ ಪ್ರಕರಣಗಳು ಕಂಡುಬಂದಿಲ್ಲ.

Air India: ಏರ್ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ, ತುರ್ತು ಭೂಸ್ಪರ್ಶ
ಏರ್ ಇಂಡಿಯಾ (ಸಾಂದರ್ಭಿಕ ಚಿತ್ರ)

ಅಬುಧಾಬಿಯಿಂದ (Abu Dhabi) ಹೊರಡಿದ್ದು ಏರ್ ಇಂಡಿಯಾ (Air India) ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ವಿಮಾನವು ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಯಾವುದೇ ರೀತಿಯ ಅಪಾಯ ಪ್ರಕರಣಗಳು ಕಂಡುಬಂದಿಲ್ಲ, ಒಂದು ಕ್ಷಣಕ್ಕೆ ಜನ ಭಯಗೊಂಡಿದ್ದಾರೆ. ಅಬುಧಾಬಿಯಿಂದ ಕ್ಯಾಲಿಕಟ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. ಸಮುದ್ರ ಮಟ್ಟದಿಂದ ಸುಮಾರು 1,000 ಅಡಿ ಎತ್ತರದಲ್ಲಿ ಜ್ವಾಲೆ ಪತ್ತೆಯಾಗಿದೆ. ಶುಕ್ರವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂಜಿನ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(DGCA) ಹೇಳಿಕೆಯ ಪ್ರಕಾರ, “ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ B737-800 ವಿಮಾನ VT-AYC ಆಪರೇಟಿಂಗ್ ಫ್ಲೈಟ್ IX 348 (ಅಬುಧಾಬಿ-ಕ್ಯಾಲಿಕಟ್ ) ನಂ.1 ಇಂಜಿನ್ ಫ್ಲ್ಯಾಮ್‌ಔಟ್‌ನಿಂದ ಏರ್‌ಟರ್ನ್‌ಬ್ಯಾಕ್‌ನಲ್ಲಿ 1000 ಅಡಿಗಳಲ್ಲಿ ಎತ್ತರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.

ಅಬುಧಾಬಿಯಿಂದ ಕ್ಯಾಲಿಕಟ್‌ಗೆ ಹೊರಟಿದ್ದ ವಿಮಾನವು ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಹಿಂತಿರುಗಿತು. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ. ಒಂದು ವಾರದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಎರಡನೇ ಘಟನೆ ಇದು. ಜನವರಿ 29 ರಂದು, ಶಂಕಿತ ಹೈಡ್ರಾಲಿಕ್ ವೈಫಲ್ಯದ ನಂತರ ಶಾರ್ಜಾದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.

ಇದನ್ನೂ ಓದಿ: Air India Alcohol Service Policy: ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ: ವಿಮಾನದಲ್ಲಿ ಮದ್ಯಪಾನ ಪೂರೈಕೆ ನಿಯಮ ಬದಲಿಸಿದ ಏರ್​ ಇಂಡಿಯಾ

ರಾತ್ರಿ 8.04ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗುವುದು ಘೋಷಣೆ ಮಾಡಲಾಯಿತು. ರಾತ್ರಿ 8.36ಕ್ಕೆ ಮತ್ತೆ ತನ್ನ ಕಾರ್ಯಚರಣೆಯನ್ನು ಪ್ರಾರಂಭಿಸಿದ. ಶಾರ್ಜಾದಿಂದ IX 412 ವಿಮಾನದಲ್ಲಿದ್ದ ಎಲ್ಲಾ 193 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (CIAL) ತಿಳಿಸಿದೆ.

ಜನವರಿ 23 ರಂದು, ತಿರುವನಂತಪುರದಿಂದ ಮಸ್ಕತ್, ಓಮನ್‌ಗೆ ಮತ್ತೊಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಅದರ ಆನ್‌ಬೋರ್ಡ್ ಕಂಪ್ಯೂಟರ್ ಸಿಸ್ಟಮ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಟೇಕ್-ಆಫ್ ಆಗಿರುವ ಘಟನೆಯು ಕೂಡ ನಡೆದಿದೆ. ಆರಂಭಿಕ ವಿಮಾನ, IX 549, ಕೇರಳದ ರಾಜ್ಯ ರಾಜಧಾನಿಯಿಂದ 8.30 ಕ್ಕೆ ಟೇಕ್ ಆಫ್ ಆಗಿದ್ದು, ಪೈಲಟ್‌ಗಳಲ್ಲಿ ಒಬ್ಬರು ತಾಂತ್ರಿಕ ದೋಷವನ್ನು ಗಮನಿಸಿದ ನಂತರ 9.17 AM ಕ್ಕೆ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada