ಸ್ವಿಸ್​ ಬ್ಯಾಂಕ್​​ನಲ್ಲಿ ಅಕ್ರಮ ಆಸ್ತಿ; ಸಾವಿರಾರು ಆರೋಪಿಗಳ ಪಟ್ಟಿಯಲ್ಲಿದೆ ಪಾಕಿಸ್ತಾನ ಐಎಸ್​ಐ ಮಾಜಿ ಮುಖ್ಯಸ್ಥನ ಹೆಸರು !

ಸ್ವಿಸ್​ ಬ್ಯಾಂಕ್​​ನಲ್ಲಿ ಅಕ್ತರ್​ ಅಬ್ದುರ್​ ಖಾನ್ ಮೂವರು ​ ಮಕ್ಕಳ ಹೆಸರಲ್ಲಿ ಖಾತೆಯಿದ್ದು, ಅದರಲ್ಲಿ ಹಣ 3.7 ಮಿಲಿಯನ್ ಡಾಲರ್​​ಗೆ ಏರಿಕೆಯಾಗಿದೆ ಎಂದು ಸ್ವಿಸ್​ ಬ್ಯಾಂಕ್​​ನಿಂದ ಲೀಕ್​ ಆದ ಡಾಟಾದಲ್ಲಿ ಗೊತ್ತಾಗಿದೆ

ಸ್ವಿಸ್​ ಬ್ಯಾಂಕ್​​ನಲ್ಲಿ ಅಕ್ರಮ ಆಸ್ತಿ; ಸಾವಿರಾರು ಆರೋಪಿಗಳ ಪಟ್ಟಿಯಲ್ಲಿದೆ ಪಾಕಿಸ್ತಾನ ಐಎಸ್​ಐ ಮಾಜಿ ಮುಖ್ಯಸ್ಥನ ಹೆಸರು !
ಪಾಕಿಸ್ತಾನ ಐಎಸ್​ಐ ಮಾಜಿ ಮುಖ್ಯಸ್ಥ
Follow us
TV9 Web
| Updated By: Lakshmi Hegde

Updated on:Feb 22, 2022 | 2:57 PM

ಸ್ವಿಸ್​ ಬ್ಯಾಂಕ್​​ನಲ್ಲಿ ಅಕ್ರಮ ಆಸ್ತಿ ಕೂಡಿಟ್ಟ ಸಾವಿರಾರು ಜನರಲ್ಲಿ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ ಐಎಸ್​ಐನ (ISI) ಮಾಜಿ ಮುಖ್ಯಸ್ಥನ ಹೆಸರೂ ಇದೆ. ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಜಿಯಾ-ಉಲ್-ಹಕ್​​ನ (Zia-ul-Haq) ಆಪ್ತರಲ್ಲಿ ಒಬ್ಬರಾಗಿದ್ದ ಜನರಲ್​ ಅಕ್ತರ್​ ಅಬ್ದುಲ್​ ರೆಹಮಾನ್ ಖಾನ್​ ಹೆಸರು ಆರೋಪಿಗಳ ಪಟ್ಟಿಯಲ್ಲಿ ಇದೆ ಎಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದೆ. ಅಂದಹಾಗೇ ಜಿಯಾ ಉಲ್​ ಹಕ್​ ಮತ್ತು ಅಕ್ತರ್​ ಅಬ್ದುರ್​ ರೆಹಮಾನ್​ ಖಾನ್​ ಇಬ್ಬರೂ ಸಹ 1988ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು, ಇವರ ಸಾವಿನ ಬಗ್ಗೆ ಇನ್ನೂ ನಿಗೂಢತೆ ಇದೆ. ಅಫ್ಘಾನಿಸ್ತಾನದಲ್ಲಿರುವ ರಷ್ಯನ್ನರ ವಿರುದ್ಧ ಹೋರಾಡುತ್ತಿದ್ದ ಮುಜಾಹಿದ್ದೀನ್​​ಗಳಿಗೆ (ಇಸ್ಲಾಂಮಿಕ್​ ಗೆರಿಲ್ಲಾಗಳು) ಯುಎಸ್​ ಮತ್ತು ಅದರ ಮಿತ್ರ ರಾಷ್ಟ್ರಗಳಿಂದ ಬಿಲಿಯನ್​ಗಳಷ್ಟು ಡಾಲರ್​ ಹಣ ಹರಿಯಲು ಅಕ್ತರ್​ ಸಹಾಯ ಮಾಡುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.  ಅಂದರೆ ಈ ದೇಶಗಳು ಪಾಕಿಸ್ತಾನಕ್ಕೆ ಆರ್ಥಿಕ ಸಹಾಯಾರ್ಥವಾಗಿ ನೀಡುತ್ತಿದ್ದ ಹಣವನ್ನು ಮುಜಾಹಿದ್ದೀನ್​ಗಳಿಗೆ ತಲುಪುವಂತೆ ಮಾಡುತ್ತಿದ್ದರು.

ಸ್ವಿಸ್​ ಬ್ಯಾಂಕ್​​ನಲ್ಲಿ ಅಕ್ತರ್​ ಅಬ್ದುರ್​ ಖಾನ್ ಮೂವರು ​ ಮಕ್ಕಳ ಹೆಸರಲ್ಲಿ ಖಾತೆಯಿದ್ದು, ಅದರಲ್ಲಿ ಹಣ 3.7 ಮಿಲಿಯನ್ ಡಾಲರ್​​ಗೆ ಏರಿಕೆಯಾಗಿದೆ ಎಂದು ಸ್ವಿಸ್​ ಬ್ಯಾಂಕ್​​ನಿಂದ ಲೀಕ್​ ಆದ ಡಾಟಾದಲ್ಲಿ ಗೊತ್ತಾಗಿದೆ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿಯಲ್ಲಿ ಉಲ್ಲೇಖಿಸಿದೆ. ಹಾಗೇ, ಸ್ವಿಸ್​ ಬ್ಯಾಂಕ್​​ನಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಅಕ್ರಮ ಆಸ್ತಿ ಮಾಡಿದ್ದಾಗ್ಯೂ ಕೂಡ ಅಕ್ತರ್​ ಎಂದಿಗೂ ಸಿಕ್ಕಿಬೀಳಲಿಲ್ಲ. ಇವರಷ್ಟೇ ಅಲ್ಲ, ಜೋರ್ಡನ್​ ದೇಶದ ಕಿಂಗ್​ ಅಬ್ದುಲ್ಲಾ II, ಈಜಿಪ್ಟ್​ ಮಾಜಿ ಅಧ್ಯಕ್ಷ ಹೋಸ್ನಿ ಮುಬಾರಕ್​ ಪುತ್ರ ಸೇರಿ ಹಲವ ಹೆಸರು ಈ ಲಿಸ್ಟ್​​ನಲ್ಲಿದೆ. ಸ್ವಿಜರ್​ಲ್ಯಾಂಡ್​​ನ ಎರಡನೇ ದೊಡ್ಡ ಸಾಲದಾತ ಸಂಸ್ಥೆಯಾದ ಕ್ರೆಡಿಟ್​ ಸ್ಯೂಸ್​ ಸೆಯಿಂದ ಸೋರಿಕೆಯಾದ ಮಾಹಿತಿಯಲ್ಲಿ ಬಹಿರಂಗವಾಗಿದೆ.

ಸ್ಯೂಸ್ ಸೀಕ್ರೆಟ್ಸ್ ಎಂದು ಕರೆಯಲ್ಪಡುವ ಈ ಸ್ಫೋಟಕ ವಿಚಾರವನ್ನು  ಅನಾಮಧೇಯ ಮೂಲವೊಂದು ಜರ್ಮನ್ ಪತ್ರಿಕೆಯಾದ Suddeutsche Zeitung ಗೆ  ನೀಡಿದೆ. ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರಿಗಳ ಸಂಪತ್ತುಗಳನ್ನು ಬಯಲಿಗೆಳೆಯಲು ಈ ಮಾಹಿತಿ ಕೊಡುತ್ತಿರುವುದಾಗಿ  ಮಾಹಿತಿ ನೀಡಿದ ಅನಾಮಧೇಯ ವ್ಯಕ್ತಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಹಿಮಾಚಲ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; 6 ಮಂದಿ ದುರ್ಮರಣ, 12ಕ್ಕೂ ಹೆಚ್ಚು ಜನರಿಗೆ ಗಾಯ

Published On - 1:27 pm, Tue, 22 February 22

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?