ಅಥೆನ್ಸ್: ಕೌಟುಂಬಿಕ ಹಿಂಸೆಯ (domestic violence) ಪ್ರಕಾರಣಗಳು ಕೇವಲ ಭಾರತದಲ್ಲಿ ಮಾತ್ರ ಜಾಸ್ತಿ ಯಾರಾದರೂ ಅಂದುಕೊಂಡಿದ್ದರೆ ಅದು ಅರ್ಧಸತ್ಯ ಮಾತ್ರ. ವಿಶ್ವದ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲೂ ಡೊಮೆಸ್ಟಿಕ್ ವಯೋಲೆನ್ಸ್ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿವೆ. ಕೋವಿಡ್ ಮಾಹಾಮಾರಿಯ (pandemic) ನಂತರ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಕೆಲಸ ಕಳೆದುಕೊಂಡು ಮನೆಗಳಲ್ಲಿದ್ದು ಹತಾಷರಾಗುತ್ತಿರುವ ಪುರುಷರಲ್ಲಿ ಖಿನ್ನತೆ (depression), ಅಸಹಾಯಕತನ, ಬೇಗುದಿ ಮತ್ತು ಆಭದ್ರತೆ ಹಿಂಸೆಯ ರೂಪದಲ್ಲಿ ಬದಲಾಗುತ್ತಿದೆ ಎಂದು ಮನಶಾಸ್ತ್ರಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಓಕೆ ವಿಷಯಕ್ಕೆ ಬರೋಣ.
ಗ್ರೀಸ್ ದೇಶದ ವ್ತಕ್ತಿಯೊಬ್ಬ ಒಂದು ವರ್ಷದ ಹಿಂದೆ ತನ್ನ ಬ್ರಿಟಿಷ್ ಪತ್ನಿಯನ್ನು ತಮ್ಮ 11-ತಿಂಗಉ ಮಗುವಿನ ಎದುರು ಕೊಂದಿರುವ ಅಪರಾಧದಲ್ಲಿ ಜೀವಾವಧಿ ಸೆರೆವಾಸದ ಶಿಕ್ಷೆಗೆ ಗುರಿಯಾಗಿದ್ದಾನೆ. ಅಥೆನ್ಸ್ ನ್ಯಾಯಾಲಯವೊಂದು ಸೋಮವಾರ ತೀರ್ಪನ್ನು ಪ್ರಕಟಿಸಿದೆ. ಸದರಿ ಪ್ರಕರಣವು ಗ್ರೀಸ್ ದೇಶದಲ್ಲಿ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿತ್ತು ಎನ್ನುವುದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದಾಗಿದೆ. ಪ್ರಕರಣದಲ್ಲಿ ಅಪರಾಧಿ 34-ವರ್ಷ ವಯಸ್ಸಿನ ಬಾಬಿಸ್ ಅನಗ್ನೋಸ್ಟೋಪೌಲಸ್ ಮಾತ್ರ ಸಾಕ್ಷಿಯಾಗಿದ್ದ. ವಿಚಾರಣೆ ಸಂದರ್ಭದಲ್ಲಿ ಕಟ್ಟುಕತೆಯೊಂದನ್ನು ಹೇಳಿ ತಾನು ನಿರಪರಾಧಿಯೆಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಅವನು ಮಾಡಿದ್ದ.
ಅಥೆನ್ಸ್ ನಗರದ ಹೊರವಲಯದಲ್ಲಿರುವ ತನ್ನ ಮನೆಗೆ ಕಳ್ಳರು ನುಗ್ಗಿ ಹಣ ದೋಚಿಕೊಂಡು ಹೋಗುವ ಮೊದಲು ತಮ್ಮ ಪತ್ನಿ ಕೆರೋಲೀನ್ ಕ್ರೌಚ್ ಳನ್ನು ಉಸಿರುಗಟ್ಟಿಸಿ ಸಾಯಿಸಿದರು ಮತ್ತು ತಮ್ಮ ನಾಯಿ ರಾಕ್ಸಿಯನ್ನೂ ಕೊಂದರು ಎಂದು ಅವನು ಹೇಳಿದ್ದ. ವೃತ್ತಿಪರ ಹೆಲಿಕಾಪ್ಟರ್ ಪೈಲಟ್ ಅಗಿರುವ ಬಾಬಿಸ್ ಮನೆ ಮುಂದಿನ ಸಿಸಿಟಿವಿ ಫುಟೇಜ್ ಮತ್ತು 20ರ ಪ್ರಾಯದವಳಾಗಿದ್ದ ಅವನ ಹೆಂಡತಿ ಕೈಗೆ ಕಟ್ಟಿಕೊಂಡಿದ್ದ ಸ್ಮಾರ್ಟ್ ವಾಚ್ ಅವನ ಸುಳ್ಳನ್ನು ಬಯಲು ಮಾಡಿದವು. ಈ ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ನಂತರ ಬಾಬಿಸ್ ತಾನೇ ಕೊಲೆ ಮಾಡಿದ್ದು ಅಂತ ತಪ್ಪೊಪ್ಪಿಕೊಂಡ.
ವಿಚಾರಣೆ ನಡೆಯುವಾಗ ಅವನು; ಮೇ 11, 2021 ರಂದು ಕೆರೋಲೀನ್ ಳನ್ನು ಕೊಲ್ಲುವ ಮೊದಲು ತಮ್ಮಿಬ್ಬರ ನಡುವೆ ಜಗಳವಾಗಿತ್ತು ಅಂತ ಹೇಳಿದ. ಮಾಡಿದ ಹೇಯ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ ಅಂತಲೂ ತಪ್ಪೊಪ್ಪಿಗೆಯಲ್ಲಿ ಹೇಳಿದ. ಪತ್ನಿಯನ್ನು ಕೊಲೆ ಮಾಡಿದ್ದಕ್ಕೆ ಕೋರ್ಟ್ ಬಾಬಿಸ್ ಗೆ ಜೀವಾವಧಿ ಸೆರೆವಾಸದ ಶಿಕ್ಷೆ ಪ್ರಕಟಿಸಿತ್ತಲ್ಲದೆ ಅವರ ನಾಯಿಯನ್ನು ಕೊಂದಿದ್ದಕ್ಕೆ 10 ವರ್ಷಗಳ ಹೆಚ್ಚುವರಿ ಶಿಕ್ಷೆಯನ್ನು ಸಹ ವಿಧಿಸಿತು ಎಂದು ಅಥೆನ್ಸ್ ನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಅತ್ಯಂತ ಹೇಯವಾಗಿರುವ ಈ ಮಾನವ ದುರಂತದಲ್ಲಿ ನ್ಯಾಯದ ವಿತರಣೆಯಾಗಿದೆ ಮತ್ತು ಕೊಲೆಗಡುಕ ಬದುಕಿರುವವರಗೆ ಸೆರೆಯಲ್ಲಿ ಕೊಳೆಯತ್ತಾನೆ. ಆದರೆ ಅವನ ಕ್ರೌರ್ಯಕ್ಕೆ ಕೆರೋಲೀನ್ ಬಲಿಯಾಗಿದ್ದಾಳೆ, ಅದರೆ ಅವಳ ತಾಯಿ ಮತ್ತು ಮಗಳಿಗೆ ನ್ಯಾಯ ಒದಗಿಸುವುದು ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ ಎಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಹೇಳಿದರು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: Russia Ukraine War: ಪುಟಿನ್ ಅಧಿಕಾರ ಚ್ಯುತಿಗೆ ರಷ್ಯಾದಲ್ಲಿ ತೀವ್ರ ಪ್ರಯತ್ನ, ಮಿಲಿಟರಿ ಕ್ರಾಂತಿ ಸಾಧ್ಯತೆ; ಉಕ್ರೇನ್