ರಷ್ಯಾದ ಗನ್​ಪೌಡರ್​ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, ಬೆಂಕಿ; 16 ಮಂದಿ ದುರ್ಮರಣ

ಮಸ್ಕೋದಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 270 ಕಿಮೀ (167 ಮೈಲುಗಳು) ದೂರದಲ್ಲಿರುವ  ಗನ್​ಪೌಡರ್​ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದಾಗಿ ರಷ್ಯಾದ ತುರ್ತುಸಂದರ್ಭ ಸಚಿವಾಲಯವೂ ಮಾಹಿತಿ ನೀಡಿದೆ.

ರಷ್ಯಾದ ಗನ್​ಪೌಡರ್​ ಕಾರ್ಖಾನೆಯಲ್ಲಿ ಭೀಕರ ಸ್ಫೋಟ, ಬೆಂಕಿ; 16 ಮಂದಿ ದುರ್ಮರಣ
ರಷ್ಯಾ ಕಾರ್ಖಾನೆ ಸ್ಫೋಟ
Follow us
TV9 Web
| Updated By: Lakshmi Hegde

Updated on: Oct 22, 2021 | 3:57 PM

ರಷ್ಯಾದ ಪಶ್ಚಿಮ ರಿಯಾಜಾನ್​ ಪ್ರಾಂತ್ಯದಲ್ಲಿರುವ ಒಂದು ಗನ್​ಪೌಡರ್​ (ರಾಕೆಟ್​, ಗನ್​, ಗ್ರೆನೇಡ್​ ಇತ್ಯಾದಿ ಸಾಧನಗಳಲ್ಲಿ ಬಳಸುವ ರಾಸಾಯನಿಕ ಸ್ಫೋಟಕ ಪುಡಿ) ಕಾರ್ಖಾನೆಯಲ್ಲಿ ಸ್ಫೋಟವುಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಟಿಎಎಸ್​ಎಸ್​ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಾರ್ಖಾನೆಯಲ್ಲಿ ಕೆಲವು ಯಂತ್ರಗಳಲ್ಲಿ ತಾಂತ್ರಿಕ ದೋಷವುಂಟಾಗಿತ್ತು. ಆದರೆ ಅದನ್ನು ಅಲ್ಲಿನ ಸಿಬ್ಬಂದಿ ಗಮನಿಸಲಿಲ್ಲ. ಈ ತಾಂತ್ರಿಕ ದೋಷವೇ ದೊಡ್ಡಮಟ್ಟದ ದುರಂತಕ್ಕೆ ಕಾರಣವಾಯಿತು ಎಂದು ಮೂಲಗಳು ತಿಳಿಸಿದ್ದಾಗಿ ನ್ಯೂಸ್ ಏಜೆನ್ಸಿ ಹೇಳಿದೆ.  

ಮಸ್ಕೋದಿಂದ ಆಗ್ನೇಯ ದಿಕ್ಕಿನಲ್ಲಿ ಸುಮಾರು 270 ಕಿಮೀ (167 ಮೈಲುಗಳು) ದೂರದಲ್ಲಿರುವ  ಗನ್​ಪೌಡರ್​ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದಾಗಿ ರಷ್ಯಾದ ತುರ್ತುಸಂದರ್ಭ ಸಚಿವಾಲಯವೂ ಮಾಹಿತಿ ನೀಡಿದೆ. ದುರಂತ ನಡೆದ ತಕ್ಷಣ 170 ತುರ್ತುಪರಿಸ್ಥಿತಿ ಕಾರ್ಯಕರ್ತರು, 50 ರಕ್ಷಣಾ ವಾಹನಗಳು, ಅಗ್ನಿಶಾಮಕ ದಳಗಳ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಮೊದಲು ಏಳು ಜನರ ಶವ ಪತ್ತೆಯಾಗಿ, 9 ಮಂದಿ ನಾಪತ್ತೆಯಾಗಿದ್ದರು. ಆದರೆ ಒಂದು ತಾಸುಗಳ ಬಳಿಕ ಅಷ್ಟೂ ಮಂದಿಯ ಮೃತದೇಹ ಸಿಕ್ಕಿದೆ ಎಂದೂ ಸಚಿವಾಲಯ ಮಾಹಿತಿ ನೀಡಿದೆ. ರಕ್ಷಣಾ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಅಲ್ಲಿನ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: Suhana Khan: ಶಾರುಖ್ ಪುತ್ರಿ ಸುಹಾನಾರಂತೆಯೇ ಇರುವ ಈ ಯುವತಿ ಯಾರು?; ನೆಟ್ಟಿಗರ ಕುತೂಹಲಕ್ಕೆ ಇಲ್ಲಿದೆ ಉತ್ತರ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ