ಮಾಜಿ ಪ್ರೇಯಸಿಯನ್ನು ಜೀವಸಹಿತ ಸೂಟ್​ಕೇಸ್​​ನಲ್ಲಿ ತುಂಬಿ ಕಾಡಿಗೆ ಎಸೆದಿದ್ದವನಿಗೆ 30 ವರ್ಷ ಜೈಲುಶಿಕ್ಷೆ..

| Updated By: Lakshmi Hegde

Updated on: Sep 25, 2021 | 4:18 PM

ಡಾ ಸಿಲ್ವಾ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಆತನ ಪರ ವಕೀಲರು ಹೇಳಿದರೂ ಪ್ರಾಸಿಕ್ಯೂಟರ್​ ಅದನ್ನು ಒಪ್ಪಲಿಲ್ಲ. ಆತನಿಗೆ ಶಿಕ್ಷೆಯಾಗಲೇಬೇಕು ಎಂದು ವಾದಿಸಿದರು.

ಮಾಜಿ ಪ್ರೇಯಸಿಯನ್ನು ಜೀವಸಹಿತ ಸೂಟ್​ಕೇಸ್​​ನಲ್ಲಿ ತುಂಬಿ ಕಾಡಿಗೆ ಎಸೆದಿದ್ದವನಿಗೆ 30 ವರ್ಷ ಜೈಲುಶಿಕ್ಷೆ..
ಸಾಂದರ್ಭಿಕ ಚಿತ್ರ
Follow us on

ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿ, ನಂತರ ಆಕೆಯನ್ನು ಸೂಟ್​ಕೇಸ್​​ನಲ್ಲಿ ತುಂಬಿ ಕೊಂದಿದ್ದ ವ್ಯಕ್ತಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಈ ಘಟನೆ ನಡೆದದ್ದು ನ್ಯೂಯಾರ್ಕ್​​ನಲ್ಲಿ. ವ್ಯಕ್ತಿಯೊಬ್ಬ ತನ್ನ ಮಾಜಿ ಪ್ರೇಯಸಿಯೊಂದಿಗೆ ಜಗಳ ಮಾಡಿದ್ದಲ್ಲದೆ, ಆಕೆಯ ಕೈಕಾಲು ಕಟ್ಟಿ, ಸೂಟ್​ಕೇಸ್​​ನಲ್ಲಿ ತುಂಬಿದ್ದ. ಆಕೆ ಉಸಿರುಕಟ್ಟಿ ಮೃತಪಟ್ಟಿದ್ದಳು.  ಆರೋಪಿಯನ್ನು ಜೇವಿಯರ್​ ಡಾ ಸಿಲ್ವಾ (26) ಎಂದು ಗುರುತಿಸಲಾಗಿದೆ. ದಕ್ಷಿಣ ಅಮೆರಿಕಾದ ವೆನಿಜುವೆಲಾದಿಂದ 2019ರಲ್ಲಿ ವಲಸೆ ಬಂದವನಾಗಿದ್ದ. 2019ರಲ್ಲಿ ಈತ ಮಾಡಿದ್ದ ಕೊಲೆ ಕೇಸ್​​ನಡಿ ಇದೀಗ ನ್ಯೂಯಾರ್ಕ್​​ನ ವೈಟ್​ ಪ್ಲೇನ್ಸ್​​ನ ಫೆಡರಲ್​ ನ್ಯಾಯಾಲಯದ ನ್ಯಾಯಾಧೀಶ ವಿನ್ಸೆಂಟ್ ಬ್ರಿಚೆಟ್ಟಿ ಎಂಬುವರು ಶಿಕ್ಷೆ ಪ್ರಕಟಿಸಿದ್ದಾರೆ.  

ಬುಕ್​ಸ್ಟೋರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದ 24ವರ್ಷದ ಯುವತಿ ವ್ಯಾಲೆರಿ ರೆಯೆಸ್ ಯ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಡಾ ಸಿಲ್ವಾ ವಿರುದ್ಧ ಕಳೆದವರ್ಷ ಪ್ರಕರಣ ದಾಖಲಾಗಿತ್ತು. ಡಾ ಸಿಲ್ವಾ ಒಬ್ಬ ಸ್ವಾರ್ಥಿ, ಆಸೆಬುರುಕ ಎಂದು ರೆಯೆಸ್​ ತಾಯಿ ಕೂಡ ಕೋರ್ಟ್​ಗೆ ಹೇಳಿದ್ದರು. ತನಗೂ ಮತ್ತು ರೆಯೆಸ್​ಗೂ ಸಂಬಂಧವಿತ್ತು. ಆದರೆ ಬ್ರೇಕ್​ಅಪ್​ ಆಯ್ತು..ಅದಾದ 9 ತಿಂಗಳ ನಂತರ ಅವಳ ಅಪಾರ್ಟ್​ಮೆಂಟ್​ನಲ್ಲೇ ನಮ್ಮಿಬ್ಬರಿಗೂ ಸಿಕ್ಕಾಪಟೆ ಜಗಳ ಆಯ್ತು ಎಂಬುದನ್ನು ಡಾ ಸಿಲ್ವಾ ಕೋರ್ಟ್ ಎದುರು ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನ್ನ ಕೃತ್ಯದ ಬಗ್ಗೆ ರೆಯೆಸ್​ ತಾಯಿಯ ಬಳಿ ಅಳುತ್ತ ಕ್ಷಮೆಯನ್ನೂ ಕೇಳಿದ್ದಾನೆ.

ಇನ್ನು ಡಾ ಸಿಲ್ವಾ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ ಎಂದು ಆತನ ಪರ ವಕೀಲರು ಹೇಳಿದರೂ ಪ್ರಾಸಿಕ್ಯೂಟರ್​ ಅದನ್ನು ಒಪ್ಪಲಿಲ್ಲ. ಯುವತಿಯನ್ನು ಸೂಟ್​ಕೇಸ್​ನಲ್ಲಿ ಹಾಕುವಾಗ ಆತ ಪಶ್ಚಾತ್ತಾಪ ಪಡಲಿಲ್ಲ. ಅಷ್ಟೇ ಅಲ್ಲ, ಆಕೆಯದ್ದೇ ಡೆಬಿಟ್​ ಕಾರ್ಡ್​ ಬಳಸಿ 5000 ಡಾಲರ್​ಗಳಷ್ಟು ಹಣ ವಿತ್​ಡ್ರಾ ಮಾಡಿದ್ದಾನೆ. ಅವಳ ಐಪ್ಯಾಡ್​ ಕೂಡ ಮಾರಾಟ ಮಾಡಿದ್ದಾನೆ ಎಂದು ನ್ಯಾಯಾಧೀಶರಿಗೆ ಹೇಳಿದ್ದರು.  ಮಾಜಿ ಪ್ರೇಯಸಿಯೊಂದಿಗೆ ಜಗಳವಾಡಿದ ಡಾ ಸಿಲ್ವಾ ಸೂಟ್​ಕೇಸ್​ನಲ್ಲಿ ತುಂಬಿ ಗ್ರೀನ್​ವಿಚ್​ ಕಾಡಿನಲ್ಲಿ ಎಸೆದಿದ್ದ. ಅದು ಒಂದು ವಾರದ ಬಳಿಕ ವ್ಯಕ್ತಿಯೊಬ್ಬರಿಗೆ ಸಿಕ್ಕಿತ್ತು. ಅಷ್ಟರಲ್ಲಾಗಲೇ ರೆಯೆಸ್​ ಉಸಿರುಕಟ್ಟಿ ಮೃತಪಟ್ಟಿದ್ದಳು. ಅಲ್ಲಿಂದ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದರು.

ಇದನ್ನೂ ಓದಿ: ‘ಸೋಜುಗಾದ ಸೂಜುಮಲ್ಲಿಗೆ..’ ಸಿಂಗರ್​ ಅನನ್ಯಾ ಭಟ್​ ಈಗ ಹೀರೋಯಿನ್​; ‘ಸೇನಾಪುರ’ಕ್ಕೆ ಸಂಗೀತವೂ ಅವರದ್ದೇ

ಈ ವರ್ಷದ ಸಾಗರ ಛಾಯಾಗ್ರಹಣ ಪ್ರಶಸ್ತಿಗಳು ಪ್ರಕಟ; ಕಣ್ಮನ ಸೆಳೆಯುವ ಚಿತ್ರಗಳು ಇಲ್ಲಿವೆ

(A man who stuffed his girlfriend in a suitcase was sentenced to 30 years in prison at New York)

Published On - 4:18 pm, Sat, 25 September 21