‘ನೀನು ಮಹಿಳೆ, ಮನೆಗೆ ಹೋಗು’ ಎಂದರು; ತಾಲಿಬಾನ್ ಆಡಳಿತದ ಕರಾಳ ಅನುಭವ ಬಿಚ್ಚಿಟ್ಟ ಅಫ್ಘಾನಿಸ್ತಾನದ ಟಿವಿ ನಿರೂಪಕಿ
ನಾನು ಆರ್‌ಟಿಎಗೆ ಹೋಗಿದ್ದೆ ಆದರೆ ಆಡಳಿತ ಬದಲಾಗಿದೆ ಎಂದು ಅವರು ನನಗೆ ಹೇಳಿದರು. ನಿಮಗೆ ಅನುಮತಿ ಇಲ್ಲ, ಮನೆಗೆ ಹೋಗಿ" ಎಂದು ಅವರು ನನ್ನಲ್ಲಿ ಹೇಳಿದರು
ದೆಹಲಿ: ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಕಾಬೂಲ್‌ನಲ್ಲಿ ಮಹಿಳೆಯರು ಬುಧವಾರದಿಂದ ಅಧ್ಯಕ್ಷರ ಅರಮನೆಯ ಹೊರಗೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ದೇಶವನ್ನು ತಾಲಿಬಾನ್ ಕೈಯಲ್ಲಿ ಬಿಟ್ಟು ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದೇಶದಿಂದ ಪಲಾಯನ ಮಾಡಿದ ನಂತರ ತಮ್ಮ ಧ್ವನಿಯನ್ನು ಕಂಡುಕೊಳ್ಳಲು ಮಹಿಳೆಯರು ಹೆಣಗಾಡುತ್ತಿದ್ದಾರೆ. ಏತನ್ಮಧ್ಯೆ. ತಾಲಿಬಾನ್ ಅಫ್ಘಾನ್ ಮಹಿಳೆಯರ ಹಕ್ಕುಗಳ ರಕ್ಷಣೆಯ ಭರವಸೆ ನೀಡಿದ್ದರೂ, ಶರಿಯಾ ಕಾನೂನಿನ ವ್ಯಾಪ್ತಿಯಲ್ಲಿ ಮಾತ್ರ ಎಂದು ಹೇಳಿದೆ. ಆದರೆ ಇಲ್ಲಿನ ಮಹಿಳೆಯರ ಪರಿಸ್ಥಿತಿ ಬೇರೆಯೇ ಇದೆ.
ಅಫ್ಘಾನಿಸ್ತಾನದ ಟಿವಿ ಸ್ಟೇಷನ್ ಆರ್‌ಟಿಎ ಪಾಷ್ಟೋದಲ್ಲಿ ಕೆಲಸ ಮಾಡುತ್ತಿರುವ ನಿರೂಪಕಿ ಶಬ್ನಮ್ ದವ್ರನ್ ಅವರ ಕಚೇರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ಇದಕ್ಕೆ ಕಾರಣ ಆಡಳಿತದ ಬದಲಾವಣೆ. ದವ್ರನ್ ತನ್ನ ಎಂದಿನ ಶಿಫ್ಟ್ ಸಮಯದಲ್ಲಿ ತನ್ನ ಕಚೇರಿಗೆ ಬಂದಿದ್ದಳು. ಆಕೆಯ ಬಳಿ ಕಂಪನಿಯ ಗುರುತಿನ ಚೀಟಿ ಕೂಡಾ ಇತ್ತು. ಆದರೆ, ಆಕೆಯನ್ನು ಕಚೇರಿ ಆವರಣಕ್ಕೆ ಪ್ರವೇಶಿಸಲು ಬಿಡಲಿಲ್ಲ. “ನಾನು ಆರ್‌ಟಿಎಗೆ ಹೋಗಿದ್ದೆ ಆದರೆ ಆಡಳಿತ ಬದಲಾಗಿದೆ ಎಂದು ಅವರು ನನಗೆ ಹೇಳಿದರು. ನಿಮಗೆ ಅನುಮತಿ ಇಲ್ಲ, ಮನೆಗೆ ಹೋಗಿ” ಎಂದು ಅವರು ನನ್ನಲ್ಲಿ ಹೇಳಿದರು ಎಂದು ದವ್ರನ್ ವಿಡಿಯೊವೊಂದರಲ್ಲಿ ಹೇಳಿದ್ದಾರೆ.
Shabnam Dawran, Afghanistan’s National Radio Television news presenter: “I went to #RTA but they told me that the regime has changed. you are not allowed, go home”. pic.twitter.com/xJ4XcpamRo
— Muslim Shirzad (@MuslimShirzad) August 18, 2021
ಆಕೆಯ ವಿಡಿಯೊ ತಾಲಿಬಾನ್ ಸುಳ್ಳುಗಳ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದೆ. ದೇಶದಲ್ಲಿ ಈ ಹೊಸ ಅವಧಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವುದಾಗಿ ಗುಂಪು ಹೇಳಿಕೊಂಡಿದೆ. ಮಹಿಳೆಯರು ಮೊಣಕಾಲು ಮುಚ್ಚಿರಬೇಕು, ಪುರುಷರ ಸಾಥ್ ಇಲ್ಲದೆಯೇ ಮಾರುಕಟ್ಟೆ, ಕಲಿಕೆಗೆ ಅಥವಾ ಕೆಲಸಕ್ಕೆ ಹೋಗಲು ಮಹಿಳೆಯರಿಗೆ ಅನುಮತಿ ನೀಡುತ್ತೇವೆ ಎಂದು ತಾಲಿಬಾನ್ ಹೇಳಿತ್ತು.
ಆದಾಗ್ಯೂ, ದೇಶದ ಮಹಿಳೆಯರು ವಿಭಿನ್ನ ವಾಸ್ತವವನ್ನು ಬಹಿರಂಗಪಡಿಸಿದ್ದಾರೆ. ಶಬ್ನಮ್ ದವ್ರನ್ ಅವರ ವಿಡಿಯೊವು ತಾಲಿಬಾನ್ ಜಗತ್ತಿಗೆ ತೋರಿಸುತ್ತಿರುವುದಕ್ಕಿಂತ ವಾಸ್ತವವು ತುಂಬಾ ಭಿನ್ನವಾಗಿದೆ ಎಂದು ತೋರಿಸುತ್ತದೆ. ಈ ವಿಡಿಯೊ 2001 ರ ಮೊದಲು ದೇಶದಲ್ಲಿ ತಾಲಿಬಾನ್ ಆಳ್ವಿಕೆಯ ಬಗ್ಗೆ ಜಗತ್ತಿಗೆ ನೆನಪಿಸಿದೆ.
ಇದನ್ನೂ ಓದಿ: ಕಂದಹಾರ್ ಮತ್ತು ಹೆರಾತ್‌ನಲ್ಲಿ ಮುಚ್ಚಿದ ಭಾರತೀಯ ರಾಯಭಾರ ಕಚೇರಿಯಲ್ಲಿ ತಾಲಿಬಾನ್ ದಾಳಿ: ಗುಪ್ತಚರ ಸಂಸ್ಥೆ ಮಾಹಿತಿ
ಇದನ್ನೂ ಓದಿ: Afghanistan: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಸಿಲುಕಿರುವ ಆರು ಕನ್ನಡಿಗರು
(Afghan female anchor says Taliban denied entry into her office watch video)