Afghanistan ಅಫ್ಘಾನಿಸ್ತಾನದ ಶಿಕ್ಷಣ ಕೇಂದ್ರದಲ್ಲಿ ಬಾಂಬ್​​ ಸ್ಫೋಟ: 53 ಮಂದಿ ಸಾವು

ಕಾಬೂಲ್‌ನ ಹಜಾರಾ ಕ್ವಾರ್ಟರ್‌ನಲ್ಲಿ ಶುಕ್ರವಾರದ ತರಗತಿಯ ಬಾಂಬ್ ಸ್ಫೋಟದಿಂದ ಸಾವಿಗೀಡಾದವರ ಸಂಖ್ಯೆ ಏರಿಕೆ ಆಗಿದೆ. ಈ ಸ್ಫೋಟದಲ್ಲಿ 53 ಮಂದಿ ಸಾವನ್ನಪ್ಪಿದ್ದಾರೆ, ಕನಿಷ್ಠ 46 ಹುಡುಗಿಯರು ಮತ್ತು 110 ಯುವತಿಯರು ಗಾಯಗೊಂಡಿದ್ದಾರೆ.

Afghanistan ಅಫ್ಘಾನಿಸ್ತಾನದ ಶಿಕ್ಷಣ ಕೇಂದ್ರದಲ್ಲಿ ಬಾಂಬ್​​ ಸ್ಫೋಟ: 53 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Updated By: ರಶ್ಮಿ ಕಲ್ಲಕಟ್ಟ

Updated on: Oct 03, 2022 | 8:11 PM

ಕಾಬೂಲ್: ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್‌ನಲ್ಲಿರುವ (Kabul) ಶಿಕ್ಷಣ ಕೇಂದ್ರದಲ್ಲಿ ನಡೆದ ಸ್ಫೋಟದಲ್ಲಿ 53 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ ಕನಿಷ್ಠ 46 ಹುಡುಗಿಯರು ಇದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ. ಕಾಬೂಲ್‌ನ ಹಜಾರಾ ಕ್ವಾರ್ಟರ್‌ನಲ್ಲಿ ಶುಕ್ರವಾರದ ತರಗತಿಯ ಬಾಂಬ್ ಸ್ಫೋಟದಿಂದ ಸಾವಿಗೀಡಾದವರ ಸಂಖ್ಯೆ ಏರಿಕೆ ಆಗಿದೆ. ಈ ಸ್ಫೋಟದಲ್ಲಿ 53 ಮಂದಿ ಸಾವನ್ನಪ್ಪಿದ್ದಾರೆ, ಕನಿಷ್ಠ 46 ಹುಡುಗಿಯರು ಮತ್ತು 110 ಯುವತಿಯರು ಗಾಯಗೊಂಡಿದ್ದಾರೆ. ನಮ್ಮ ಮಾನವ ಹಕ್ಕುಗಳ ತಂಡವು ಅಪರಾಧವನ್ನು ದಾಖಲಿಸುವುದನ್ನು ಮುಂದುವರೆಸಿದೆ ಎಂದು ಯುಎನ್ ಮಿಷನ್ ಟ್ವೀಟ್ ಮಾಡಿದೆ.  ಇಲ್ಲಿಯವರೆಗೆ ಸ್ಫೋಟ ಮತ್ತು ಸಾವುನೋವುಗಳ ಕುರಿತು ಯಾವುದೇ ಹೆಚ್ಚುವರಿ ವಿವರಗಳಿಲ್ಲ. ಸ್ಫೋಟದ ಕುರಿತು ತಾಲಿಬಾನ್ ಅಧಿಕಾರಿಗಳು ಇನ್ನೂ ಹೇಳಿಕೆ ನೀಡಿಲ್ಲ. ಈ ದಾಳಿಯಲ್ಲಿ ಸಂಸ್ಥೆಯ ಸುಮಾರು 100 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಅನೇಕ ಮಾಧ್ಯಮ ವರದಿಗಳಿವೆ, ಆದಾಗ್ಯೂ, ಅಫ್ಘಾನಿಸ್ತಾನದ ಯುಎನ್ ಮಿಷನ್ ಕಾಬೂಲ್‌ನಲ್ಲಿರುವ ತನ್ನ ಮಾನವ ಹಕ್ಕುಗಳ ತಂಡಗಳು ಹಜಾರಾ ನೆರೆಹೊರೆಯಲ್ಲಿನ ಕಾಲೇಜು ದಾಳಿಯ ನಿಖರವಾದ ದಾಖಲೆಯನ್ನು ಸ್ಥಾಪಿಸಲು ಸಹಾಯ ಮಾಡುತ್ತಿದೆ ಎಂದು ಹೇಳಿದೆ.


ಶನಿವಾರ, ಕಾಜ್ ಎಜುಕೇಷನಲ್ ಸೆಂಟರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಅಲ್ಪಸಂಖ್ಯಾತ ಹಜಾರಾ ಸಮುದಾಯದ ಮಹಿಳೆಯರು ಕಾಬೂಲನಲ್ಲಿ ಪ್ರತಿಭಟನೆ ನಡೆಸಿದ್ದಾರೆ.  ಕಪ್ಪು ಬಟ್ಟೆ ಧರಿಸಿದ ಮಹಿಳಾ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ನರಮೇಧದ ವಿರುದ್ಧ ಘೋಷಣೆಗಳನ್ನು ಕೂಗಿದರು ಎಂದು ಪಜ್ವೋಕ್ ಆಫ್ಘನ್ ನ್ಯೂಸ್ ವರದಿ ಮಾಡಿದೆ.

ಜಾಗತಿಕ ಆಕ್ರೋಶಕ್ಕೆ ಕಾರಣವಾದ ಕಾಬೂಲ್‌ನ ವಜೀರ್ ಅಕ್ಬರ್ ಖಾನ್ ಪ್ರದೇಶದ ಬಳಿ ಸ್ಫೋಟ ಸಂಭವಿಸಿದ ಕೆಲವು ದಿನಗಳ ನಂತರ ಈ ಸ್ಫೋಟ ಸಂಭವಿಸಿದೆ. ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ಇತ್ತೀಚೆಗೆ ನಡೆದ ಸ್ಫೋಟವನ್ನು ತೀವ್ರವಾಗಿ ಖಂಡಿಸಲಾಯಿತು.

ಕಳೆದ ವರ್ಷ ಯುಎಸ್ ಬೆಂಬಲಿತ ನಾಗರಿಕ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ತನ್ನ ಆಳ್ವಿಕೆಯ ಒಂದು ವರ್ಷವನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಈ ಸರಣಿ ಸ್ಫೋಟಗಳು ಸಂಭವಿಸಿವೆ. ಮಾನವ ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸಲು ತಾಲಿಬಾನ್ ಅನೇಕ ಪ್ರತಿಜ್ಞೆಗಳನ್ನು ಮುರಿದಿದೆ ಎಂದು ಹಕ್ಕುಗಳ ಗುಂಪುಗಳು ಹೇಳಿವೆ.

Published On - 7:59 pm, Mon, 3 October 22