ಇಬ್ಬರು ವ್ಯಕ್ತಿಗಳು ತನ್ನ ಮೇಲೆ 10 ಸಲ ಅತ್ಯಾಚಾರ ನಡೆಸಿರೆಂದು ಸುಳ್ಳು ದೂರು ಸಲ್ಲಿಸಿದ ಬ್ರಿಟಿಷ್ ಮಹಿಳೆ 5-ವರ್ಷ ಸೆರೆವಾಸ!

ಸಿಸಿಟಿವಿ ಫುಟೇಜ್ ಮತ್ತು ಪೋನ್ ಡಾಟಾ ಸಂಗ್ರಹಿಸಿದ ಪೊಲೀಸರಿಗೆ ಕ್ಯಾಥಿ ತನ್ನ ದೂರಿನಲ್ಲಿ ತಿಳಿಸಿದ ಸ್ಥಳ ಮತ್ತು ಸಮಯದಲ್ಲಿ ಅವಳು ಆರೋಪಿಸಿದ ವ್ಯಕ್ತಿಗಳು ಆ ಪ್ರದೇಶದಲ್ಲಿ ಇರಲೇ ಇಲ್ಲ ಅನ್ನೋದನ್ನು ಪತ್ತೆ ಮಾಡಿದ್ದಾರೆ.

ಇಬ್ಬರು ವ್ಯಕ್ತಿಗಳು ತನ್ನ ಮೇಲೆ 10 ಸಲ ಅತ್ಯಾಚಾರ ನಡೆಸಿರೆಂದು ಸುಳ್ಳು ದೂರು ಸಲ್ಲಿಸಿದ ಬ್ರಿಟಿಷ್ ಮಹಿಳೆ 5-ವರ್ಷ ಸೆರೆವಾಸ!
ಕ್ಯಾಥಿ ರಿಚರ್ಡ್ಸನ್​
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2022 | 8:05 AM

ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಹತ್ತು ಸಲ ಅತ್ಯಾಚಾರ (rape) ನಡೆಸಿದರು ಅಂತ ಸುಖಾಸುಮ್ಮನೆ ಆರೋಪಗಳನ್ನು ಮಾಡಿ ಪೊಲೀಸರು ಸುಮಾರು 60 ತನಿಖೆಗಳನ್ನು ಕೈಗೆತ್ತಿಕೊಳ್ಳುವಂತೆ ಮಾಡಿದ ಮಹಿಳೆಗೆ 5-ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ. ಕ್ಯಾಥಿ ರಿಚರ್ಡ್ಸನ್ (Cathy Richardson) ಹೆಸರಿನ 35-ವರ್ಷ ವಯಸ್ಸಿನ ಮಹಿಳೆ 2021 ರಲ್ಲಿ ಜನೆವರಿಯಿಂದ ಮೇವರೆಗೆ 10 ಸಲ ತನ್ನ ಮೇಲೆ ಆತ್ಯಾಚಾರ ನಡೆಯಿತು ಅಂತ ದೂರುಗಳನ್ನು ಸಲ್ಲಿಸಿದ್ದರಿಂದ ಆಕೆ ಆರೋಪಿಸಿದ ಇಬ್ಬರ ಪೈಕಿ ಒಬ್ಬನನ್ನು ಬಂಧಿಸಲಾಗಿತ್ತು ಮತ್ತು ಅವನನ್ನು ಫೊರೆನ್ಸಿಕ್ ಟೆಸ್ಟ್ಗೆ (Forensic Test) ಒಳಪಡಿಸಲಾಗಿತ್ತು.

ಸಿಸಿಟಿವಿ ಫುಟೇಜ್ ಮತ್ತು ಪೋನ್ ಡಾಟಾ ಸಂಗ್ರಹಿಸಿದ ಪೊಲೀಸರಿಗೆ ಕ್ಯಾಥಿ ತನ್ನ ದೂರಿನಲ್ಲಿ ತಿಳಿಸಿದ ಸ್ಥಳ ಮತ್ತು ಸಮಯದಲ್ಲಿ ಅವಳು ಆರೋಪಿಸಿದ ವ್ಯಕ್ತಿಗಳು ಆ ಪ್ರದೇಶದಲ್ಲಿ ಇರಲೇ ಇಲ್ಲ ಅನ್ನೋದನ್ನು ಪತ್ತೆ ಮಾಡಿದ್ದಾರೆ.

ಎಸ್ಸೆಕ್ಸ್ ವೆಸ್ಟ್ಕ್ಲಿಫ್ ನಿವಾಸಿ ಕ್ಯಾಥಿಯನ್ನು ಕಳೆದ ವರ್ಷ ಮೇ 28ರಂದು ಬಂಧಿಸಲಾಗಿತ್ತು ಮತ್ತು ನಂತರ ಆಕೆಯ ವಿರುದ್ದ ನ್ಯಾಯದ ಪ್ರಕ್ರಿಯೆಗೆ ಅಡಚಣೆ ಉಂಟು ಮಾಡಿದ ಆರೋಪ ಕೂಡ ಹೊರಿಸಲಾಗಿತ್ತು.

ಸ್ಯಾಲಿಸ್ ಬರಿ ಕ್ರೌನ್ ಕೋರ್ಟ್ ನಲ್ಲಿ ಕ್ಯಾಥಿ ತನ್ನ ವಿರುದ್ಧ ಹೇರಲಾಗಿದ್ದ 10 ಆರೋಪಗಳನ್ನು ಅಂಗೀಕರಿಸಿದಳು.

ಸದರಿ ತನಿಖೆಯ ನೇತೃತ್ವ ವಹಿಸಿದ್ದ ಪೊಲೀಸ್ ಅಧಿಕಾರಿ ಜೇಮ್ಸ್ ಹೋಮ್ಸ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ‘ನಮ್ಮಲ್ಲಿಗೆ ರೇಪ್ ಅಥವಾ ಲೈಂಗಿಕ ದೌರ್ಜನ್ಯದ ದೂರು ಬಂದಾಗ ನಾವು ಮಾಡುವ ಮೊದಲ ಕೆಲಸವೆಂದರೆ ದೂರುದಾರ/ಳ ಮಾತನ್ನು ನಂಬುವುದು.’

‘ಇವು ಬಹಳ ಗಂಭೀರ ಸ್ವರೂಪದ ಅಪರಾಧಗಳು ಮತ್ತು ಅದಕ್ಕೆ ಬಲಿಯಾದವರು ತೀವ್ರ ಯಾತನೆಯನ್ನು ಅನುಭವಿಸುತ್ತಾರೆ. ಸಂತ್ರಸ್ತರ ಬೆಂಬಲಕ್ಕೆ ನಿಂತು ತನಿಖೆ ಕೈಗೆತ್ತಿಕೊಳ್ಳುವ ಪರಿಣಿತರ ತಂಡ ನಮ್ಮಲ್ಲಿದೆ.’

‘ಕ್ಯಾಥಿ ರಿಚರ್ಡ್ಸನ್ ನಮ್ಮಲ್ಲಿಗೆ ಬಂದು ದೂರು ಸಲ್ಲಿಸಿದಾಗ ಬೇರೆಯವರಂತೆ ಆಕೆಯನ್ನೂ ನಾವು ನಂಬಿ ಸಹಾನುಭೂತಿಯಿಂದಲೇ ತನಿಖೆ ಕೈಗೆತ್ತಿಕೊಂಡೆವು.’ ‘ಆದರೆ ಆಕೆಯ ಆರೋಪಗಳು ಸತ್ಯಕ್ಕೆ ದೂರ ಮತ್ತು ನಿರಾಧಾರ ಸ್ವರೂಪದವು ಅಂತ ಗ್ರಹಿಸಲು ನಮಗೆ ಹೆಚ್ಚು ದಿನ ಬೇಕಾಗಲಿಲ್ಲ.’

‘ಆಕೆಯ ದಾವೆಗಳು ವಾಸ್ತವದಲ್ಲಿ ಅತ್ಯಾಚಾರಕ್ಕೊಳಗಾಗಿ ಸಹಾಯಕ್ಕೆ ನಮ್ಮಲ್ಲಿಗೆ ಬರುವ ಸಂತ್ರಸ್ತರಿಗೆ ಮತ್ತು ಯಾವುದೇ ತಪ್ಪು ಮಾಡದೆ ಅವಳಿಂದ ಅರೋಪಕ್ಕೊಳಗಾದ ಆ ಇಬ್ಬರು ವ್ಯಕ್ತಿಗಳಿಗೆ ಕಳಂಕವನ್ನುಂಟು ಮಾಡಿವೆ.’

ಆಕೆಯ ದೂರುಗಳ ಹಿನ್ನೆಲೆಯಲ್ಲಿ ನಾವು ಹಲವಾರು ಬಾರಿ ತನಿಖೆಯನ್ನು ನಡೆಸಿ ನಮ್ಮ ಅಮೂಲ್ಯ ಸಮಯ ಮತ್ತು ಸಂಪನ್ಮೂಲಗಳನ್ನು ಹಾಳುಮಾಡಿಕೊಂಡೆವು. ಅವಳಿಗಾಗಿ ವ್ಯರ್ಥಗೊಳಿಸಿದ ಸಮಯವನ್ನು ನಾವು ನೈಜ ಪ್ರಕರಣಗಳ ತನಿಖೆಗೆ ಬಳಸಬಹುದಿತ್ತು.’

‘ಈ ಪ್ರಕರಣವು ನಮ್ಮ ಸಹಾಯ ಕೇಳಿಕೊಂಡು ಬರುವ ಸಂತ್ರಸ್ತರ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು ಎಂಬ ವಿಶ್ವಾಸ ನನ್ನಲ್ಲಿದೆ,’

‘ನಾವು ದೂರುದಾರರನ್ನು ನಂಬುತ್ತೇವೆ ಮತ್ತು ಅವರ ಬೆಂಬಲಕ್ಕೆ ನಿಲ್ಲುತ್ತೇವೆ, ಅವರ ಪ್ರಕರಣವನ್ನು ಅದೇ ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತೇವೆ ಎಂಬ ಆಶ್ವಾಸನೆಯನ್ನು ಈ ಮೂಲಕ ನೀಡುತ್ತೇನೆ, ಎಂದು ಹೋಮ್ಸ್ ಹೇಳಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್