ಪಾಕಿಸ್ತಾನದ ರೆಸ್ಟೋರೆಂಟ್​ನಲ್ಲಿ ನೀರಿನ ಬಾಟಲಿ ಬದಲು ಮಕ್ಕಳಿಗೆ ಆ್ಯಸಿಡ್ ನೀಡಿದ ಮ್ಯಾನೇಜರ್ ಬಂಧನ

ರೆಸ್ಟೋರೆಂಟ್​ನಲ್ಲಿ ನೀರಿನ ಬದಲು ಆ್ಯಸಿಡ್ ಬಾಟಲಿ ನೀಡಿದ ಮ್ಯಾನೇಜರ್​ ಅನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್​ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಇಬ್ಬರು ಮಕ್ಕಳಿಗೆ ನೀರಿನ ಬಾಟಲಿಯಲ್ಲಿ ಆ್ಯಸಿಡ್ ಕೊಟ್ಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ರೆಸ್ಟೋರೆಂಟ್​ನಲ್ಲಿ ನೀರಿನ ಬಾಟಲಿ ಬದಲು ಮಕ್ಕಳಿಗೆ ಆ್ಯಸಿಡ್ ನೀಡಿದ ಮ್ಯಾನೇಜರ್ ಬಂಧನ
Water
Follow us
TV9 Web
| Updated By: ನಯನಾ ರಾಜೀವ್

Updated on: Oct 04, 2022 | 10:35 AM

ರೆಸ್ಟೋರೆಂಟ್​ನಲ್ಲಿ ನೀರಿನ ಬದಲು ಆ್ಯಸಿಡ್ ಬಾಟಲಿ ನೀಡಿದ ಮ್ಯಾನೇಜರ್​ ಅನ್ನು ಲಾಹೋರ್ ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್​ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಇಬ್ಬರು ಮಕ್ಕಳಿಗೆ ನೀರಿನ ಬಾಟಲಿಯಲ್ಲಿ ಆ್ಯಸಿಡ್ ಕೊಟ್ಟಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 27 ರಂದು ಐತಿಹಾಸಿಕ ಗ್ರೇಟರ್ ಇಕ್ಬಾಲ್ ಪಾರ್ಕ್‌ನ ಪೊಯೆಟ್ ರೆಸ್ಟೋರೆಂಟ್ ನಲ್ಲಿ ಈ ಘಟನೆ ಸಂಭವಿಸಿದೆ. ಮಕ್ಕಳು ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಮುಹಮ್ಮದ್ ಆದಿಲ್ ಅವರು ಪೊಯೆಟ್ ರೆಸ್ಟೋರೆಂಟ್‌ನಲ್ಲಿ ಕುಟುಂಬ ಹುಟ್ಟುಹಬ್ಬದ ಪಾರ್ಟಿಯನ್ನು ಆಯೋಜಿಸಿದ್ದರು. ಸಿಬ್ಬಂದಿಯು ನೀರಿನ ಬಾಟಲಿ ಕೊಟ್ಟ ಬಳಿಕ ಮಕ್ಕಳು ಅದರಲ್ಲಿ ಕೈತೊಳೆದುಕೊಂಡರು, ಸ್ವಲ್ಪ ಸಮಯದ ನಂತರ ಮಕ್ಕಳು ಅಳಲು ಆರಂಭಿಸಿದರು. ಆಮೇಲೆ ಕೈಗಳನ್ನು ನೋಡಿದ ಬಳಿಕ ಅದು ನೀರಾಗಿರಲಿಲ್ಲ, ಬದಲಾಗಿ ಆ್ಯಸಿಡ್ ಆಗಿತ್ತು ಎಂಬುದು ತಿಳಿದುಬಂದಿದೆ. ಕೈಗಳಲ್ಲಿ ಸುಟ್ಟ ಗಾಯಗಳಾಗಿತ್ತು. ಬೊಮ್ಮೆಗಳು ಬಂದಿದ್ದವು.

ಇದೇ ವೇಳೆ ಅವರ ಎರಡೂವರೆ ವರ್ಷದ ಮಗು ವಾಜಿಹಾ ಮತ್ತೊಂದು ನೀರಿನ ಬಾಟಲಿಯಲ್ಲಿದ್ದ ಆ್ಯಸಿಡ್ ಕುಡಿದಿದ್ದರಿಂದ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಳು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಾಜಿಹಾ ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸರು ರೆಸ್ಟೋರೆಂಟ್ ಮ್ಯಾನೇಜರ್ ಮತ್ತು ಇತರ ಐದು ಉದ್ಯೋಗಿಗಳ ವಿರುದ್ಧ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 336 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

“ನಾವು ರೆಸ್ಟೋರೆಂಟ್ ಮ್ಯಾನೇಜರ್ ಮುಹಮ್ಮದ್ ಜಾವೇದ್ ಅವರನ್ನು ಬಂಧಿಸಿದ್ದೇವೆ ಮತ್ತು ದೂರುದಾರರು ಸೂಚಿಸಿದ ಇತರರನ್ನು ಬಂಧಿಸಲು ದಾಳಿ ನಡೆಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿ ತಾಹಿರ್ ವಕಾಸ್ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ರೆಸ್ಟೋರೆಂಟ್​ ಅನ್ನು ತೆರೆಯುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಇತರೆ ದೇಶಗಳ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ