ಸಿಂಗಪುರ: ಅಫಘಾನಿಸ್ತಾನದ ಸೆಂಟ್ರಲ್ ಬ್ಯಾಂಕಿನ ಮುಖ್ಯಸ್ಥ ದೇಶವನ್ನು ತೊರೆದಿದ್ದ ಸೇನೆಯ ನಿಷ್ಠೆಯನ್ನು ಪ್ರಶ್ನಿಸಿ ದೇಶವು ಅಷ್ಟು ಬೇಗ, ಹೋರಾಟದ ಮನೋಭಾವವನ್ನೂ ಪ್ರದರ್ಶಿಸದೆ ತಾಲಿಬಾನಿಗಳಿಗೆ ಶರಣಾಗಿದ್ದಕ್ಕೆ ಮತ್ತು ದೇಶದಲ್ಲಿ ಉಂಟಾಗಿರುವ ಅಲ್ಲೋಲ ಕಲ್ಲೋಲ ಸ್ಥಿತಿಗೆ ಅಧ್ಯಕ್ಷ ಅಶ್ರಫ್ ಘನಿ ಮತ್ತು ಅವರು ಅನನುಭವಿ ಸಲಹೆಗಾರರರೇ ಕಾರಣವೆಂದು ದೂರಿದ್ದಾರೆ. ಸೋಮವಾರದಂದು ತಮ್ಮ ಟ್ವೀಟ್ಗಳಲ್ಲಿ ಬ್ಯಾಂಕಿನ ಹಂಗಾಮಿ ಗವರ್ನರ್ ಅಜ್ಮಲ್ ಅಹ್ಮದಿ, ತಾಲಿಬಾನಿಗಳು ಕಾಬೂಲ ನಗರವನ್ನು ಪ್ರವೇಶಿಸುವವರೆಗೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದುದ್ದಾಗಿ ಹೇಳಿದ್ದು ಅಮೇರಿಕದಿಂದ ಡಾಲರ್ಗಳು ಬರುವ ಪ್ರಮಾಣ ಕ್ಷೀಣಿಸಿತ್ತು ಎಂದಿದ್ದಾರೆ. ಒಂದು ಸೇನಾ ವಿಮಾನದ ಮೂಲಕ ತಾನು ದೇಶ ಬಿಟ್ಟು ಹೊರಬಂದಿರುವುದಾಗಿ ಅವರು ಹೇಳಿದ್ದಾರೆ.
‘ರವಿವಾರದಂದು ನಾನು ಕೆಲಸ ಆರಂಭಿಸಿದ್ದೆ, ಬೆಳಗ್ಗೆಯಿಂದ ಲಭ್ಯವಾಗುತ್ತಿದ್ದ ವರದಿಗಳು ಅತಂಕವನ್ನು ಹೆಚ್ಚಿಸುತ್ತಲೇ ಹೋದವು. ನಾನು ಬ್ಯಾಂಕ್ ಬಿಟ್ಟು ಹೊರಬರುವ ಮೊದಲು ಜವಾಬ್ದಾರಿಯನ್ನು ನನ್ನ ಡೆಪ್ಯುಟಿಗಳಿಗೆ ವಹಿಸಿದೆ. ಸಿಬ್ಬಂದಿ ಬಿಟ್ಟು ಬರುವಾಗ ಬಹಳ ಯಾತನೆಯಾಯಿತು,’ ಎಂದು ಅಹ್ಮದಿ ಹೇಳಿದ್ದಾರೆ.
‘ಕೆಲಸವನ್ನು ಹೀಗೆ ಕೊನೆಗಾಣಿಸಬಾರದಿತ್ತು. ಆದರೆ ಆಫ್ಘನ್ ನಾಯಕತ್ವದ ಬಗ್ಗೆ ನನಗೆ ಭ್ರಮನಿರಸನ ಉಂಟಾಗಿತ್ತು, ಯಾರ ಗಮನಕ್ಕೂ ತಾರದೆ ಅವರು ದೇಶ ಬಿಟ್ಟು ಹೋಗುತ್ತಿದ್ದ ಅವರನ್ನು ವಿಮಾನ ನಿಲ್ದಾಣಲ್ಲಿ ನೋಡಿದೆ, ಎಂದು ಹೇಳಿರುವ ಅಹ್ಮದಿ ತಾಲಿಬಾನ್ ಬಂಡುಕೋರರು ಕಿಂಚಿತ್ತೂ ಪ್ರತಿರೋಧ ಎದುರಿಸದೆ ಕಾಬೂಲ್ ಪ್ರವೇಶಿಸಿದರು,’ ಎಂದಿದ್ದಾರೆ
13/It did not have to end this way. I am disgusted by the lack of any planning by Afghan leadership. Saw at airport them leave without informing others.
I asked the palace if there was an evacuation plan/charter flights. After 7 years of service, I was met with silence https://t.co/lBu3YksfWO
— Ajmal Ahmady (@aahmady) August 16, 2021
ಕೇವಲ ಒಂದು ವಾರದ ಹಿಂದೆ ದೂರದ ಪ್ರಾಂತೀಯ ರಾಜಧಾನಿ ಜರಾನಿಯನ್ನು ವಶಪಡಿಸಿಕೊಂಡ ನಂತರ ತಾಲಿಬಾನಿಗಳು ಕಾಬೂಲ್ಗೆ ಬಂದಿದ್ದು ವಿಸ್ಮಯ ಮೂಡಿಸುತ್ತದೆ ಎಂದು ಅಹ್ಮದಿ ಹೇಳಿದ್ದಾರೆ.
11/I knew right then my flight would be cancelled and there would be chaos.
As expected employees & military left posts. Everyone ran through gates to on Kam Air flight. 300+ passengers boarded for a 100-seat plane.
The plane had no fuel or pilot. We all hoped it would depart https://t.co/ArzBBV3hRU
— Ajmal Ahmady (@aahmady) August 16, 2021
ಕೇವಲ ಒಂದು ವರ್ಷದ ಹಿಂದೆ 43 ವರ್ಷ ವಯಸ್ಸಿನ ಅಹ್ಮದಿ ಅವರನ್ನು ಅಫಘಾನಿಸ್ತಾನದ ಸೆಂಟ್ರಲ್ ಬ್ಯಾಂಕಿನ್ ಹಂಗಾಮಿ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು. ಸರ್ಕಾರದ ವೆಬ್ಸೈಟ್ನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ ಅವರು ಹಿಂದೆ ಯುಎಸ್ ಟ್ರೆಜರಿ ಮತ್ತು ವಿಶ್ವಬ್ಯಾಂಕ್ನಲ್ಲಿ ಕೆಲಸ ಮಾಡಿದ್ದರು.
ಸರ್ಕಾರದ ಪರವಿರುವ ಸೇನಾ ನಾಯಕರು, ಉತ್ತರ ಅಫಘಾನಿಸ್ತಾನದಲ್ಲಿ ಮಿಲಿಟರಿ ಪಡೆಗಳು ಪ್ರತಿರೋಧ ತೋರದೆ ಶರಣಾಗಿದ್ದು ಪಿತೂರಿಯ ಭಾಗವಾಗಿದೆ ಎಂದ ಹೇಳರುವವುದನ್ನು ಉಲ್ಲೇಖಿಸಿರುವ ಅಹ್ಮದಿ, ‘ನಂಬಲು ಕಷ್ಟವಾಗುತ್ತಿದೆ, ಅದರೆ ಆಫ್ಘನ್ ರಾಷ್ಟ್ರೀಯ ಭಧ್ರತಾ ಪಡೆಗಳು ಅದು ಹೇಗೆ ಪೋಸ್ಟ್ ಗಳನ್ನು ತೆರವು ಮಾಡಿದವು ಎನ್ನುವ ಬಗ್ಗೆ ಸಂಶಯ ಮೂಡುವುದಂತೂ ಸತ್ಯ,’ ಎಂದಿದ್ದಾರೆ.
‘ಅರ್ಥವಾಗದೆ ಉಳಿದಿರುವ ವಿಷಯಗಳು ಬಹಳಷ್ಟಿವೆ,’ ಎಂದು ಅವರು ಹೇಳಿದ್ದಾರೆ.
ರಾಯಿಟರ್ಸ್ ಸುದ್ದಿಸಂಸ್ಥೆ ಕಳಿಸಿದ ಈಮೇಲ್ಗಳಿಗೆ ಅಹ್ಮದಿ ಉತ್ತರಿಸಿಲ್ಲ. ಅವರು ಕಾಮೆಂಟ್ಗಳನ್ನು ಪೋಸ್ಟ್ ಮಾಡಿರುವುದು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಎಂದು ಅವರೊಂದಿಗೆ ಮೇಲ್ ವ್ಯವಹಾರ ಇಟ್ಟುಕೊಂಡಿರುವ ವಿಶ್ವಬ್ಯಾಂಕ್ ಮೂಲವೊಂದು ಖಚಿತಪಡಿಸಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಜನಸ್ತೋಮ ಮತ್ತು ಅಲ್ಲೋಲ ಕಲ್ಲೋಲದ ನಡುವೆ ತಾನು ಮಿಲಿಟರಿ ವಿಮಾನವನ್ನು ಹತ್ತಿದ್ದಾಗಿ ಅಹ್ಮದಿ ಹೇಳಿಕೊಂಡಿದ್ದಾರೆ. ಅಸಲಿಗೆ ಅವರು ಬೇರೊಂದು ಕಮರ್ಷಿಯಲ್ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರಂತೆ. ಅದರೆ ಆ ವಿಮಾನ ಜನರಿಂದ ತುಂಬಿ ತುಳುಕುತ್ತಿದ್ದುದ್ದರಿಂದ ಅದನ್ನು ಬಿಟ್ಟಿ ಮಿಲಿಟರಿ ವಿಮಾನ ಹತ್ತಿರುವುದಾಗಿ ಅವರು ಹೇಳಿದ್ದಾರೆ. ಆದರೆ, ಯಾವ ದೇಶಕ್ಕೆ ಹೋಗಿದ್ದಾರೆ ಎನ್ನುವ ಬಗ್ಗೆ ತಿಳಿಸಿಲ್ಲ.
‘ಅಧ್ಯಕ್ಷರು ದೇಶದಿಂದ ಪಲಾಯನಗೈದಿರುವ ಸುದ್ದಿ ಹಬ್ಬಿದ ಕೆಲವೇ ನಿಮಿಷಗಳಲ್ಲಿ ದೇಶದಲ್ಲಿ ಅರಾಜಕತೆ ಉಂಟಾಗುತ್ತದೆ ಎನ್ನುವುದು ನನಗೆ ಖಾತ್ರಿಯಾಗಿತ್ತು. ಅಧಿಕಾರ ಹಸ್ತಾಂತರದಂಥ ಪ್ರಕ್ರಿಯೆ ಪೂರ್ಣಗೊಳಿಸದೆ ಅವರು ದೇಶ ತೊರೆದು ಹೋಗಿರುವುದಕ್ಕೆ ನಾನು ಅವರನ್ನು ಕ್ಷಮಿಸುವುದಿಲ್ಲ,’ ಎಂದು ಅಹ್ಮದಿ ಹೇಳಿದ್ದಾರೆ.
‘ಅವರಲ್ಲಿ ಅದ್ಭುತವಾದ ಐಡಿಯಾಗಳಿದ್ದವು. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಅವರಿಗೆ ಸಾಧ್ಯವಾಗಲಿಲ್ಲ. ಅದರಲ್ಲಿ ನನ್ನ ಕಾಣಿಕೆಯೂ ಇದ್ದರೆ ದೋಷದಲ್ಲಿ ನನ್ನ ಪಾಲೂ ಇದೆ,’ ಎಂದು ಅಹ್ಮದಿ ಹೇಳಿದ್ದಾರೆ.
ಇದನ್ನೂ ಓದಿ: Afghanistan Crisis: ಪ್ರಮುಖ ನಗರಗಳನ್ನು ವಶಪಡಿಸಿಕೊಂಡ ತಾಲೀಬಾನ್; ಅಫ್ಘಾನಿಸ್ತಾನದಲ್ಲಿನ ಪ್ರಮುಖ ಬೆಳವಣಿಗೆಗಳು ಏನೇನು?