AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಬೂಲ್ ವಿಮಾನ ನಿಲ್ದಾಣದಲ್ಲಿ 1 ನೀರಿನ ಬಾಟಲಿಗೆ 3,000, ಒಂದು ಪ್ಲೇಟ್ ಅನ್ನಕ್ಕೆ 7,000 ರೂ!

ಕಾಬೂಲ್ ವಿಮಾನ ನಿಲ್ದಾಣದೊಳಗೆ 1 ನೀರಿನ ಬಾಟಲಿಗೆ 40 ಡಾಲರ್ (3 ಸಾವಿರ ರೂ), ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್(7,000 ರೂ.) ಇದೆ. ಯಾರ ಬಳಿ ಅಮೆರಿಕದ ಕರೆನ್ಸಿ ಇದೆಯೋ ಅವರು ಮಾತ್ರ ಇಲ್ಲಿ ಆಹಾರ, ನೀರನ್ನು ಖರೀದಿ ಮಾಡಬಹುದು.

ಕಾಬೂಲ್ ವಿಮಾನ ನಿಲ್ದಾಣದಲ್ಲಿ 1 ನೀರಿನ ಬಾಟಲಿಗೆ 3,000, ಒಂದು ಪ್ಲೇಟ್ ಅನ್ನಕ್ಕೆ 7,000 ರೂ!
ಅಫ್ಘಾನಿಸ್ತಾನ
TV9 Web
| Edited By: |

Updated on:Aug 26, 2021 | 4:13 PM

Share

ಕಾಬೂಲ್: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅನ್ನು ಆಕ್ರಮಿಸಿಕೊಂಡ ಬಳಿಕ ಅಫ್ಘಾನ್ ಚಿತ್ರಣವೇ ಬದಲಾಗಿ ಹೋಗಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಸಾವಿರಾರು ಜನರು ತಮ್ಮ ದೇಶಗಳಿಗೆ ವಾಪಾಸ್ ಹೋಗಿದ್ದಾರೆ. ಅಫ್ಘಾನ್​ನ ಪ್ರಜೆಗಳು ತಮ್ಮ ಮಕ್ಕಳನ್ನು ಕಟ್ಟಿಕೊಂಡು ಬೇರೆ ದೇಶಕ್ಕೆ ತೆರಳಲು ಕಾಬೂಲ್​ನಲ್ಲಿ ಹೇಗಾದರೂ ಯಾವುದಾದರೂ ವಿಮಾನ ಹತ್ತಿ ಹೋಗಲು ಪರದಾಡಿರುವ ವಿಡಿಯೋಗಳು ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಿದ್ದರೆ, ಕಾಬೂಲ್ ವಿಮಾನ ನಿಲ್ದಾಣದ ಈಗಿನ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಅಚ್ಚರಿಯ ಮಾಹಿತಿ.

ಮೂಲಗಳ ಪ್ರಕಾರ ಸುಮಾರು 10 ಲಕ್ಷ ಜನರು ಅಫ್ಘಾನಿಸ್ತಾನವನ್ನು ಬಿಟ್ಟು ಬೇರೆ ದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದುವರೆಗೂ ಕೇವಲ 82,300 ಜನರನ್ನು ಮಾತ್ರ ಸ್ಥಳಾಂತರ ಮಾಡಲಾಗಿದೆ. ಉಳಿದವರು ಆ ನರಕದಿಂದ ಪಾರಾಗುವ ದಿನಕ್ಕಾಗಿ ಎದುರು ನೋಡುತ್ತಿದ್ದಾರೆ. ಇವರಲ್ಲಿ ಬಹುತೇಕರು ವಿದೇಶೀ ಪ್ರಜೆಗಳಾಗಿದ್ದಾರೆ ಎಂದು ಈ ಕುರಿತು ಜೀ ನ್ಯೂಸ್ ವಿಶೇಷ ವರದಿಯನ್ನು ತಯಾರಿಸಿದೆ.

ಅಫ್ಘಾನಿಸ್ತಾನದ ಪ್ರಜೆಗಳು ಕೂಡ ತಮ್ಮನ್ನು ಕರೆದೊಯ್ಯಲು ಯಾವುದಾದರೂ ವಿಮಾನದಲ್ಲಿ ಜಾಗವಿರಬಹುದು ಎಂಬ ನಿರೀಕ್ಷೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಾ ಇದ್ದಾರೆ. ಹಲವು ದಿನಗಳಿಂದ ಕದಲದೆ ಅದೇ ಜಾಗದಲ್ಲಿ ಕುಳಿತು ವಿಮಾನಕ್ಕಾಗಿ ಕಾಯುತ್ತಿರವವರು ಕೂಡ ಇದ್ದಾರೆ. ಅವರಲ್ಲಿ ಅನೇಕರ ಬಳಿ ಊಟ, ನೀರು ಕೊಳ್ಳಲು ಕೂಡ ಹಣವಿಲ್ಲ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪ್ರತಿಯೊಂದು ವಸ್ತುವೂ ದುಬಾರಿಯಾಗಿರುವುದರಿಂದ ಸಾಮಾನ್ಯ ಜನರಿಗೆ ಅವುಗಳನ್ನು ಕೊಳ್ಳಲು ಸಾಧ್ಯವಿಲ್ಲ.

ಕಾಬೂಲ್ ವಿಮಾನ ನಿಲ್ದಾಣದೊಳಗೆ 1 ನೀರಿನ ಬಾಟಲಿಗೆ 40 ಡಾಲರ್ (3 ಸಾವಿರ ರೂ), ಒಂದು ಪ್ಲೇಟ್ ಅನ್ನಕ್ಕೆ 100 ಡಾಲರ್(7,000 ರೂ.) ಇದೆ. ಯಾರ ಬಳಿ ಅಮೆರಿಕದ ಕರೆನ್ಸಿ ಇದೆಯೋ ಅವರು ಮಾತ್ರ ಇಲ್ಲಿ ಆಹಾರ, ನೀರನ್ನು ಖರೀದಿ ಮಾಡಬಹುದು. ಇದರಿಂದ ಮುಕ್ಕಾಲು ಭಾಗ ಜನರು ಹಸಿದುಕೊಂಡೇ ವಿಮಾನಕ್ಕಾಗಿ ಕಾಯುತ್ತಾ ಕೂರುವಂತಾಗಿದೆ.

ಮೂಲಗಳ ಪ್ರಕಾರ, ಸುಮಾರು 50 ಸಾವಿರ ಜನರು ಇನ್ನೂ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದಾರೆ. ವಿಮಾನ ನಿಲ್ದಾಣದಲ್ಲಿ ಇರುವ ಜನಸಂದಣಿಯನ್ನು ನೋಡಿದರೆ ಸದ್ಯಕ್ಕಂತೂ ಅವರಿಗೆಲ್ಲ ವಿಮಾನದಲ್ಲಿ ಸೀಟ್ ಸಿಗುವುದು ಅನುಮಾನ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಕ್ರಮಣದ ನಂತರ, ಪರಿಸ್ಥಿತಿ ಹದಗೆಡುತ್ತಿದ್ದು ಅಲ್ಲಿ ಸಿಲುಕಿರುವ ಜನರು ಶೀಘ್ರವೇ ದೇಶ ತೊರೆಯಲು ಹಾತೊರೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಜನರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಈ ನಡುವೆ ಅಮೆರಿಕ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರಲು ತನ್ನ ದೇಶದ ಪ್ರಜೆಗಳಿಗೆ ಸೂಚನೆ ನೀಡಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಯೋತ್ಪಾದಕರ ದಾಳಿಯ ಬೆದರಿಕೆ ಹೆಚ್ಚಿರುವ ಕಾರಣ ಅಮೆರಿಕದ ಪ್ರಜೆಗಳು ಸುರಕ್ಷಿತ ಸ್ಥಳಗಳಲ್ಲಿ ಉಳಿಯಬೇಕು ಮತ್ತು ಕಾಬೂಲ್ ವಿಮಾನ ನಿಲ್ದಾಣಕ್ಕೆ ಹೋಗಬಾರದು ಎಂದು ಅಮೆರಿಕ ಎಚ್ಚರಿಸಿದೆ. ಅಮೆರಿಕದ ಹೊರತಾಗಿ, ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕೂಡ ತಮ್ಮ ನಾಗರಿಕರಿಗೆ ಇದೇ ಎಚ್ಚರಿಕೆ ನೀಡಿವೆ. ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ವಿದೇಶಿ ಪ್ರಜೆಗಳ ಮೇಲೆ ಭಯೋತ್ಪಾದಕರ ದಾಳಿ ಹೆಚ್ಚಾಗಿದೆ ಎಂದು ಕಾಬೂಲ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಹೇಳಿದೆ.

ಇದನ್ನೂ ಓದಿ: Afghanistan Crisis: 6 ವರ್ಷ ಅಮೆರಿಕ ಸೇನೆಯ ಬಂಧಿಯಾಗಿದ್ದಾತ ಅಫ್ಘಾನಿಸ್ತಾನದ ಮುಂದಿನ ರಕ್ಷಣಾ ಸಚಿವ!

ನೇಲ್ ಪಾಲಿಶ್ ಹಚ್ಚಿದರೆ ಅಫ್ಘಾನಿಸ್ತಾನದ ಮಹಿಳೆಯರ ಬೆರಳೇ ಕಟ್!; ತಾಲಿಬಾನ್ ಹೊಸ ನಿಯಮ

(Afghanistan Crisis Afghans to Pay Rs 3000 for a water bottle, Rs 7000 for plate of rice in Kabul Airport)

Published On - 4:13 pm, Thu, 26 August 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ