ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಅಮೆರಿಕನ್ನರನ್ನು ಸ್ಥಳಾಂತರ ಮಾಡುವ ಕಾರ್ಯ ಆಗಸ್ಟ್ 31ರೊಳಗೆ ಮುಕ್ತಾಯಗೊಳ್ಳಲಿದೆ ಎಬ ಆಶಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ನಿನ್ನೆ ವೈಟ್ಹೌಸ್ನಲ್ಲಿ ಮಾತನಾಡಿದ ಅವರು, ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರ ಬೆದರಿಕೆಯ ಬಗ್ಗೆ ಉಲ್ಲೇಖಿಸಿದ್ದಾರೆ ಹಾಗೂ ಸದ್ಯ ಯುದ್ಧ ಸನ್ನಿವೇಶವಿರುವ ಅಫ್ಘಾನಿಸ್ತಾನದಲ್ಲಿ ಇನ್ನೂ ಹಲವು ರೀತಿಯ ಅಪಾಯಗಳು ಎದುರಾಗಬಹುದು ಎಂದು ಹೇಳಿದ್ದಾರೆ. ಭಯೋತ್ಪಾದಕರು ಈ ಪರಿಸ್ಥಿತಿಯನ್ನು ಬಳಸಿಕೊಂಡು, ಮುಗ್ಧ ಅಫ್ಘಾನರು ಹಾಗೂ ಯುಎಸ್ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಹುದು ಎಂಬುದು ನನಗೆ ಗೊತ್ತಿದೆ. ಐಸಿಸ್ ಉಗ್ರರು ಅಥವಾ ಇನ್ಯಾವುದೇ ಭಯೋತ್ಪಾದಕರ ಬೆದರಿಕೆ ಬಗ್ಗೆ ನಾವು ಸದಾ ಮುನ್ನೆಚ್ಚರಿಕೆ ವಹಿಸಿ, ಜಾಗರೂಕರಾಗಿದ್ದೇವೆ. ಇದೆಲ್ಲದರ ಮಧ್ಯೆ ಆಗಸ್ಟ್ 31ರೊಳಗೆ ಅಫ್ಘಾನ್ನಲ್ಲಿರುವ ಅಮೆರಿಕನ್ನರ ಸ್ಥಳಾಂತರ ಕಾರ್ಯ ಮುಗಿಯುವ ಭರವಸೆ ಇದೆ ಎಂದು ತಿಳಿಸಿದ್ದಾರೆ.
ಸಾವು-ನೋವಿನ ಹೊರತಾಗಿ ಸ್ಥಳಾಂತರ ಸಾಧ್ಯವಿಲ್ಲ
ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಲ್ಲಿ ಪ್ರತಿನಿತ್ಯ ಅನೇಕ ಜನ ಸೇರುತ್ತಾರೆ. ಅದೆಷ್ಟೊ ಮಂದಿ ಪ್ರಾಣ ಹಾನಿಯಾಗಿದೆ. ಗಾಯಗೊಂಡವರಿದ್ದಾರೆ..ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋ ಬೈಡನ್ , ಪ್ರತಿನಿತ್ಯ ಕಾಬೂಲ್ ಏರ್ಪೋರ್ಟ್ನ ದೃಶ್ಯವನ್ನು ನಾವೆಲ್ಲ ನೋಡುತ್ತಿದ್ದೇವೆ. ಅಲ್ಲಿನ ಸಾವು-ನೋವು, ನೂಕುನುಗ್ಗಲು ನೋಡಿ ಮನಸಿಗೆ ತುಂಬ ನೋವಾಗುತ್ತದೆ. ಆದರೆ ಬೇರೆ ದಾರಿಯಿಲ್ಲ. ಈ ಸಾವು-ನೋವಿಲ್ಲದೆ, ನಾಜೂಕಾಗಿ ಜನರ ಸ್ಥಳಾಂತರ ಪ್ರಕ್ರಿಯೆ ನಡೆಸಲು ಸಾಧ್ಯವಿಲ್ಲ. ಎಷ್ಟೇ ಕಷ್ಟವಾದರೂ ಅಲ್ಲಿಂದ ಹೊರಡಬೇಕು ಎಂದೇ ಜನರು ಭಾವಿಸುತ್ತಿದ್ದಾರೆ. ಇವತ್ತು ಹೋಗದಿದ್ದರೆ, ಇನ್ಯಾವತ್ತೂ ಸಾಧ್ಯವಿಲ್ಲ ಎಂಬ ಆತುರದಲ್ಲಿ ಜನರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮುನ್ನುಗ್ಗುತ್ತಿದ್ದಾರೆ ಎಂದು ಹೇಳಿದರು.
ಅಮೆರಿಕವನ್ನು ಟೀಕಿಸಿದ್ದ ತಾಲಿಬಾನ್
ಪ್ರತಿನಿತ್ಯ ಕಾಬೂಲ್ ಏರ್ಪೋರ್ಟ್ನಲ್ಲಿ ಪ್ರಯಾಣಿಕರ ನೂಕುನುಗ್ಗಲು, ಪ್ರಾಣಹಾನಿ ಆಗುತ್ತಿರುವ ಬಗ್ಗೆ ತಾಲಿಬಾನಿಗಳು ಅಮೆರಿಕವನ್ನು ಟೀಕಿಸಿದ್ದರು. ಅಮೆರಿಕಕ್ಕೆ ಸೂಪರ್ ಪವರ್ ಇದೆ..ಅತ್ಯಾಧುನಿಕವಾದ ವ್ಯವಸ್ಥೆಯೂ ಇದೆ. ಆದರೆ ಕಾಬೂಲ್ ಏರ್ಪೋರ್ಟ್ನಲ್ಲಿ ಕಾನೂನು ಸುವ್ಯವಸ್ಥೆ ಆದೇಶ ತರಲು ವಿಫಲವಾಗಿದೆ. ಇಡೀ ಅಫ್ಘಾನಿಸ್ತಾನದಲ್ಲಿ ಕಾಬೂಲ್ ಏರ್ಪೋರ್ಟ್ ಹೊರತುಪಡಿಸಿ, ಉಳಿದೆಲ್ಲ ಪ್ರದೇಶಗಳಲ್ಲೂ ಶಾಂತಿ ಇದೆ ಎಂದು ತಾಲಿಬಾನ್ನ ಅಮೀರ್ ಖಾನ್ ಎಂಬಾತ ಹೇಳಿಕೆ ನೀಡಿದ್ದ.
ಇದನ್ನೂ ಓದಿ: ತ್ರಿಷಾ ನಂತರ ಮತ್ತೋರ್ವ ಹೀರೋಯಿನ್ ಖಾಸಗಿ ವಿಡಿಯೋ ಲೀಕ್; ನರಕದಲ್ಲಿ ನಿಮಗೆ ವಿಶೇಷ ವ್ಯವಸ್ಥೆ ಇದೆ ಎಂದ ನಟಿ
ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆಗಳು; ಕೊರೊನಾ ಭೀತಿಯ ನಡುವೆಯೂ ಕಲಿಕೆಯ ಸಂಭ್ರಮ ಶುರು
(Afghanistan evacuation will conclude by August 31 says US President Joe Biden)
Published On - 9:44 am, Mon, 23 August 21