Ashraf Ghani: ಅಫ್ಘಾನಿಸ್ತಾನ ಬಿಟ್ಟ ಮೇಲೆ ಮೊದಲ ವಿಡಿಯೋ ಬಿಡುಗಡೆ ಮಾಡಿದ ಅಶ್ರಫ್​ ಘನಿ; ಹೇಳಿದ್ದೇನು?

ಅಶ್ರಫ್​ ಘನಿ ದೇಶ ಬಿಟ್ಟು ಹೋಗುವಾಗ ಸರ್ಕಾರದ ಸುಮಾರು 169 ಮಿಲಿಯನ್ ಡಾಲರ್​ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಜಕಿಸ್ತಾನದಲ್ಲಿರುವ ಅಫ್ಘಾನ್​ ರಾಯಭಾರಿ ಆರೋಪ ಮಾಡಿದ್ದರು. ಅದನ್ನು ಇಂದು ಘನಿ ಪರೋಕ್ಷವಾಗಿ ಅಲ್ಲಗಳೆದಿದ್ದಾರೆ.

Ashraf Ghani: ಅಫ್ಘಾನಿಸ್ತಾನ ಬಿಟ್ಟ ಮೇಲೆ ಮೊದಲ ವಿಡಿಯೋ ಬಿಡುಗಡೆ ಮಾಡಿದ ಅಶ್ರಫ್​ ಘನಿ; ಹೇಳಿದ್ದೇನು?
ಅಶ್ರಫ್​ ಘನಿ
Edited By:

Updated on: Aug 19, 2021 | 6:27 PM

ಅಫ್ಘಾನಿಸ್ತಾನವನ್ನು ಬಿಟ್ಟು ಓಡಿ ಹೋದ ಅಧ್ಯಕ್ಷ ಅಶ್ರಫ್​ ಘನಿ (Ashraf Ghani), ನಿನ್ನೆ ಬುಧವಾರ ತಡರಾತ್ರಿ ತಮ್ಮ ಫೇಸ್​ಬುಕ್ (Facebook)​ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ತಾವು ಅಫ್ಘಾನ್​​ನ್ನು ಬಿಟ್ಟು ಬಂದಿದ್ದನ್ನು ಇಲ್ಲಿಯೂ ಕೂಡ ಸಮರ್ಥಿಸಿಕೊಂಡೇ ಮಾತನಾಡಿದ್ದಾರೆ. ಹಾಗೊಮ್ಮೆ ನಾನು ಅಫ್ಘಾನ್ (Afghanistan)​ ಬಿಟ್ಟು ಬರದೆ ಇದ್ದರೆ, ಅಲ್ಲಿ ರಕ್ತಪಾತವೇ ಆಗಿರುತ್ತಿತ್ತು ಎಂದೇ ಪುನರುಚ್ಚರಿಸಿದ್ದಾರೆ. ಹಾಗೇ ಅಶ್ರಫ್​ ಘನಿ, ಸರ್ಕಾರದ ಮಿಲಿಯನ್​ಗಟ್ಟಲೆ ಡಾಲರ್​ ಹಣವನ್ನು ಕೊಳ್ಳೆ ಹೊಡೆದಿದ್ದಾರೆ ಎಂದು ತಜಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ರಾಯಭಾರಿ ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ. ಹಾಗೇ, ತಾವು ಸದ್ಯ ಯುನೈಟೆಡ್​ ಅರಬ್​ ಎಮಿರೇಟ್ಸ್​​ನಲ್ಲಿ (UAE) ಇರುವುದಾಗಿಯೂ ತಿಳಿಸಿದ್ದಾರೆ.

ಅಶ್ರಫ್​ ಘನಿ ವಿಡಿಯೋ ಸಂದೇಶದಲ್ಲಿ ಅಫ್ಘಾನಿಸ್ತಾನ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು. ಹಾಗೇ, ಶಾಂತಿ ಪ್ರಕ್ರಿಯೆಯ ವಿಫಲತೆಯಿಂದಲೇ ಇವತ್ತು ತಾಲಿಬಾನ್ ಅಫ್ಘಾನಿಸ್ತಾವನ್ನು ಕಸಿದುಕೊಳ್ಳುವಂತಾಯಿತು ಎಂದೂ ಹೇಳಿದರು.

ಇನ್ನು ಅಶ್ರಫ್​ ಘನಿ ದೇಶ ಬಿಟ್ಟು ಹೋಗುವಾಗ ಸರ್ಕಾರದ ಸುಮಾರು 169 ಮಿಲಿಯನ್ ಡಾಲರ್​ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಜಕಿಸ್ತಾನದಲ್ಲಿರುವ ಅಫ್ಘಾನ್​ ರಾಯಭಾರಿ ಆರೋಪ ಮಾಡಿದ್ದರು. ಅದನ್ನು ಇಂದು ಘನಿ ಪರೋಕ್ಷವಾಗಿ ಅಲ್ಲಗಳೆದಿದ್ದಾರೆ. ನಾನು ದೇಶ ಬಿಡುವಾಗ ನನ್ನ ಕೈಯಲ್ಲಿ ಒಂದು ಜೊತೆ ಸಾಂಪ್ರದಾಯಿಕ ಉಡುಗೆಗಳಿದ್ದವು, ಅದು ಬಿಟ್ಟರೆ ನಾನು ಧರಿಸಿದ್ದ ಉಡುಗೆ ಮತ್ತು ಚಪ್ಪಲಿಗಳನ್ನಷ್ಟೇ ನನ್ನ ಜತೆ ತಂದಿದ್ದೇನೆ ಎಂದೂ ಹೇಳಿಕೊಂಡಿದ್ದಾರೆ.   ಯಾವ ಹಣವನ್ನೂ ನನಗೆ ವರ್ಗಾಯಿಸಲಿಲ್ಲ. ಎಲ್ಲ ಆರೋಪಗಳೂ ಆಧಾರ ರಹಿತ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನನ್ನು ಹೊರಹಾಕಲಾಗಿದೆ..
ನನ್ನನ್ನು ಅಫ್ಘಾನಿಸ್ತಾನದಿಂದ ಹೊರಹಾಕಲಾಗಿದೆಯೇ ಹೊರತು, ಪಲಾಯನ ಮಾಡಿಲ್ಲ ಎಂದು ಅಶ್ರಫ್​ ಘನಿ ಇಂದಿನ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನನ್ನನ್ನು ಅಲ್ಲಿಂದ ಹೊರದೂಡಲಾಗಿದೆ. ಹಾಗೂ ಒಮ್ಮೆ ನಾನು ಅಲ್ಲಿಯೇ ಉಳಿದುಕೊಂಡಿದ್ದರೆ ನೇಣಿಗೆ ಏರಿಸುತ್ತಿದ್ದರು ಎಂದಿದ್ದಾರೆ.  ತಾಲಿಬಾನ್​ ಕಾಬೂಲ್​ಗೆ ಪ್ರವೇಶ ಮಾಡಬಾರದು ಎಂಬ ಒಪ್ಪಂದ ಇದೆ. ಅದನ್ನು ಮೀರಿ ಇಂದು ಅವರು ಕಾಬೂಲ್​ಗೆ ಕಾಲುಹಾಕಿದ್ದಾರೆ. ನಾನು ಶಾಂತಿಯುತವಾಗಿಯೇ ಅಧಿಕಾರ ಬಿಟ್ಟುಕೊಡಲು ಸಿದ್ಧನಿದ್ದೆ. ಆದರೆ ತಾಲಿಬಾನಿಗಳು ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಘನಿ ಇಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Workouts After Long Break: ತಿಂಗಳುಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ವ್ಯಾಯಾಮ ಮಾಡಲು ಈ ನಿಯಮಗಳನ್ನು ಪಾಲಿಸಿ

ಅಫ್ಘಾನಿಸ್ತಾನದಲ್ಲಿ ಕಟ್ಟರ್ ಷರಿಯಾ ಕಾನೂನು ಜಾರಿ ಸಾಧ್ಯತೆ, ಮನೆಯಿಂದ ಹೊರ ಬರಲು ಹೆದರುತ್ತಿರುವ ಮಹಿಳೆಯರು

Published On - 8:54 am, Thu, 19 August 21