ಬಯೋಮೆಟ್ರಿಕ್ ಡಿವೈಸ್ಗಳು ತಾಲಿಬಾನಿಗಳ ವಶಕ್ಕೆ; ಯುಎಸ್ ಸರ್ಕಾರ, ಸೇನೆಗೆ ಸಹಾಯ ಮಾಡುತ್ತಿದ್ದ ಅಫ್ಘಾನಿಗಳಿಗೆ ಆತಂಕ
ಯುಎಸ್ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್ ಮಾಡಿದಾಗ, ಒಸಮಾ ಬಿನ್ ಲಾಡೆನ್ನ್ನು ಪತ್ತೆಹಚ್ಚಲೂ ಈ ಡಿವೈಸ್ಗಳೇ ಸಹಾಯ ಮಾಡಿದ್ದು.
ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಇದೀಗ ಯುಎಸ್ ಸೇನೆ ಬಳಸುತ್ತಿದ್ದ ಬಯೋಮೆಟ್ರಿಕ್ ಡಿವೈಸ್( Biometrics Devices)ಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಚಾರವಾಗಿದೆ. ಯುಎಸ್ ಸರ್ಕಾರಕ್ಕಾಗಿ ಮತ್ತು ಯುಎಸ್-ಅಫ್ಘಾನ್ ಎರಡೂ ಸೇನಾ ಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್ ಪ್ರಜೆಗಳನ್ನು ಗುರುತಿಸಲು ಈ ಬಯೋಮೆಟ್ರಿಕ್ ಉಪಕರಣಗಳ ಬಳಕೆ ಮಾಡಲಾಗುತ್ತಿತ್ತು. ಇದೀಗ ಈ ಡಿವೈಸ್ ವಶಪಡಿಸಿಕೊಂಡಿರುವ ತಾಲಿಬಾನ್ ಇದರಲ್ಲಿರುವ ಮಾಹಿತಿಯನ್ನು ಬಳಸಿಕೊಂಡು ಅಂಥ ಪ್ರಜೆಗಳ ಮೇಲೆ ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಬಯೋಮೆಟ್ರಿಕ್ ಡಿವೈಸ್ಗಳ ಹೆಸರು HIIDE (Handheld Interagency Identity Detection Equipment). ಕಳೆದವಾರ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಕ್ರಮಣ ಮಾಡಿದ ಸಂದರ್ಭದಲ್ಲೇ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಈ ಡಿವೈಸ್ನಲ್ಲಿ ಯುಎಸ್ ಸರ್ಕಾರ ಮತ್ತು ಎರಡೂ ಸೇನಾಪಡೆಗಳಿಗಾಗಿ ಕೆಲಸ ಮಾಡುತ್ತಿರುವ ಅಫ್ಘಾನ್ ಜನರ ಐರಿಸ್ ಸ್ಕ್ಯಾನ್ (ಕಣ್ಣಿನ ಸ್ಕ್ಯಾನ್), ಫಿಂಗರ್ಪ್ರಿಂಟ್ಸ್ ಮತ್ತು ಅವರ ವೈಯಕ್ತಿಕ ಮಾಹಿತಿಗಳು ಇವೆ. ಹೀಗಾಗಿ ಉಗ್ರರು ಅಂಥವರ ಡೇಟಾಬೇಸ್ನ್ನು ಸಲೀಸಲಾಗಿ ಪಡೆಯಬಹುದಾಗಿದೆ.
ಯುಎಸ್ ದಶಕಗಳ ಕಾಲ ಉಗ್ರರ ವಿರುದ್ಧ ನಡೆಸಿದ ಯುದ್ಧದಲ್ಲಿ ಈ ಬಯೋಮೆಟ್ರಿಕ್ ಸಾಧನಗಳು ಪ್ರಮುಖ ಪಾತ್ರ ವಹಿಸಿದವುಗಳಾಗಿವೆ. 2011ರಲ್ಲಿ ಪಾಕಿಸ್ತಾನದಲ್ಲಿ ರೈಡ್ ಮಾಡಿದಾಗ, ಒಸಮಾ ಬಿನ್ ಲಾಡೆನ್ನ್ನು ಪತ್ತೆಹಚ್ಚಲೂ ಈ ಡಿವೈಸ್ಗಳೇ ಸಹಾಯ ಮಾಡಿದ್ದು. ಆದರೆ ಈ ಡಿವೈಸ್ನ್ನು ಅಫ್ಘಾನಿಸ್ತಾನದ ಶೇ.80ರಷ್ಟು ಅಂದರೆ 25 ಮಿಲಿಯನ್ ಜನರ ಬಯೋಮೆಟ್ರಿಕ್ ಡಾಟಾ ಸಂಗ್ರಹ ಮಾಡಲು ಬಳಕೆ ಮಾಡಲಾಗುತ್ತಿತ್ತು ಎಂದೂ ವರದಿಯಾಗಿದೆ. ಒಟ್ಟಾರೆ ತಾಲಿಬಾನ್ ಉಗ್ರರ ವಿರುದ್ಧ ಹೋರಾಟಕ್ಕೆ ಯುಎಸ್ ಮತ್ತು ಅಫ್ಘಾನ್ ಸೇನೆಗೆ ಸಹಾಯ ಮಾಡಿದ ಪ್ರತಿಯೊಬ್ಬರ ಮಾಹಿತಿಯೂ ಇದರಲ್ಲಿದ್ದು, ಅದನ್ನೇ ಇಟ್ಟುಕೊಂಡು ಉಗ್ರರು ಮತ್ತಷ್ಟು ಕ್ರೌರ್ಯ ಮೆರೆಯಬಹುದು ಎಂಬ ಆತಂಕ ಶುರುವಾಗಿದೆ.
ಇದನ್ನೂ ಓದಿ: ಕಾಬೂಲ್ನಿಂದ ಭಾರತಕ್ಕೆ ಮರಳಿದ ಐಟಿಬಿಪಿ ಸ್ನಿಫರ್ ಶ್ವಾನಗಳು
ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ; ಬಡವ, ಶ್ರೀಮಂತ ಕಾರಣ ಕೊಡುತ್ತಿರುವ ಆರೋಪಿಗಳು