ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು.

ತಾಲಿಬಾನ್​ ಉಗ್ರರಿಂದ ರಾಕೆಟ್​ ದಾಳಿ ನಡೆದ ಬೆನ್ನಲ್ಲೇ ಅಫ್ಘಾನಿಸ್ತಾನ ಭದ್ರತಾ ಪಡೆಯಿಂದ ವಾಯುದಾಳಿ; 254 ಉಗ್ರರ ಹತ್ಯೆ
ಕಂದಹಾರ್ ಏರ್​ಪೋರ್ಟ್​
Follow us
TV9 Web
| Updated By: Lakshmi Hegde

Updated on: Aug 01, 2021 | 12:18 PM

ಕಂದಹಾರ್​: ನಿನ್ನೆ ರಾತ್ರಿ ಅಫ್ಘಾನಿಸ್ತಾನದ ಕಂದಹಾರ್​​ ಏರ್​ಪೋರ್ಟ್ (Kandahar Airport)​ ಮೇಲೆ ತಾಲಿಬಾನ್​ ಉಗ್ರರು (Taliban Fighters) ಮೂರು ರಾಕೆಟ್ ದಾಳಿ (Rocket Struck) ನಡೆಸಿದ ಬೆನ್ನಲ್ಲೇ ಇಂದು ಅಫ್ಘಾನಿಸ್ತಾನ ರಕ್ಷಣಾ ಪಡೆಗಳು ತಾಲಿಬಾನ್​ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿದ್ದಾಗಿ ವರದಿಯಾಗಿದೆ. ತಾಲಿಬಾನ್​ ಉಗ್ರರ ಒಟ್ಟು 13 ವಿವಿಧ ನೆಲೆಗಳ ಮೇಲೆ ಏರ್​ಸ್ಟ್ರೈಕ್​ ನಡೆದಿದ್ದು, 254 ತಾಲಿಬಾನ್​ ಉಗ್ರರು ಹತರಾಗಿದ್ದಾರೆ ಮತ್ತು 97 ಉಗ್ರರು ಗಾಯಗೊಂಡಿದ್ದಾರೆ ಎಂದೂ ಹೇಳಲಾಗಿದೆ.

ಶನಿವಾರ ರಾತ್ರಿ ದಕ್ಷಿಣ ಅಫ್ಘಾನ್​ನ ಕಂದಹಾರ್ ಏರ್​ಪೋರ್ಟ್ ಗುರಿಯಾಗಿಸಿ ಮೂರು ರಾಕೆಟ್​ ದಾಳಿ ನಡೆದಿತ್ತು. ಅದರಲ್ಲಿ ಎರಡು ರನ್ ವೇ ಮೇಲೆ ಅಪ್ಪಳಿಸಿತ್ತು. ಹೀಗಾಗಿ ಈ ಏರ್​ಪೋರ್ಟ್​ಗೆ ಹೋಗುವ ಮತ್ತು ಬರುವ ಎಲ್ಲ ವಿಮಾನಗಳನ್ನೂ ರದ್ದು ಮಾಡಿದ್ದಾಗಿ ಕಂದಹಾರ್ ಏರ್​ಪೋರ್ಟ್ ಮುಖ್ಯಸ್ಥ ಮಸೂದ್​ ಪಶ್ತೂನ್​ ತಿಳಿಸಿದ್ದಾರೆ. ಇನ್ನು ಕಂದಹಾರ್​ ಮೇಲೆ ನಡೆದ ರಾಕೆಟ್​ ದಾಳಿಯಿಂದ ಯಾವುದೇ ಸಾವು ನೋವು ಆಗಿರಲಿಲ್ಲ.

ಅಫ್ಘಾನಿಸ್ತಾನದಿಂದ ಯುಎಸ್​ ಸೇನೆಯ ಬಹುತೇಕ ಸೈನಿಕರು ಹಿಂದೆ ಸರಿದಿದ್ದಾರೆ. ಈ ಮಧ್ಯೆ ತಾಲಿಬಾನ್​ ಉಗ್ರರು ಮತ್ತು ಅಫ್ಘಾನಿಸ್ತಾನ ಭದ್ರತಾ ಪಡೆಗಳ ನಡುವಿನ ಹಿಂಸಾಚಾರವೂ ಜಾಸ್ತಿಯಾಗಿದೆ. ಕಳೆದ ತಿಂಗಳು ಅಧ್ಯಕ್ಷರ ಭವನದ ಎದುರು ಈದ್​ ಪ್ರಾರ್ಥನೆ ನಡೆಯುತ್ತಿರುವಾ ಆ ಪ್ರದೇಶದ ಮೇಲೆಯೂ ಮೂರು ರಾಕೆಟ್​ಗಳು ಬಂದು ಲ್ಯಾಂಡ್ ಆಗಿದ್ದವು.

ಇದನ್ನೂ ಓದಿ: ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್