ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆರ್ಥಿಕ ಸಂಕಷ್ಟವನ್ನು ತಾಲಿಬಾನ್ ಎದುರಿಸುತ್ತಿದೆ. ವಿಶ್ವದ ಹಲವು ದೇಶಗಳು ಅಫ್ಘಾನ್ಗೆ ಸಹಾಯ ಮಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಾಗಾಗಿ ಬ್ಯಾಂಕ್ನಿಂದ ಹಣ ಡ್ರಾ ಮಾಡಿಕೊಳ್ಳಲು ಮಿತಿಯನ್ನು ಕೂಡ ಹೇರಲಾಗಿದೆ. ಈಗ ನ್ಯೂಯಾರ್ಕ್ ಪೋಸ್ಟ್ನ ವರದಿಯೊಂದರ ಪ್ರಕಾರ ಬಹುತೇಕ ತಾಲಿಬಾನ್ ಹೋರಾಟಗಾರರು ತಿಂಗಳಿನ ವೇತನ ಪಡೆದಿಲ್ಲ. ತಾಲಿಬಾನ್ ಆಳ್ವಿಕೆಯನ್ನು ಅಫ್ಘಾನ್ ಒಪ್ಪಿಕೊಳ್ಳುತ್ತಿಲ್ಲ ಅಥವಾ ಆಕ್ಷೇಪಿಸುತ್ತಿವೆ. ಹೀಗಾಗಿ, ಅಫ್ಘಾನ್ ಆರ್ಥಿಕ ಹೊಡೆತ ಪಡೆದುಕೊಂಡಿದೆ.
ವಿಶ್ವಬ್ಯಾಂಕ್ (World Bank) ಕೂಡಾ ಹಣ ನೀಡುವುದಿಲ್ಲ ಎಂದು ಈ ಮೊದಲು ಸ್ಪಷ್ಟಪಡಿಸಿದೆ. ಐಎಂಎಫ್ ಹಣಕಾಸು ನೆರವು ನಿಲ್ಲಿಸಿದೆ. ಇನ್ನೊಂದೆಡೆ ಅಮೆರಿಕಾದ ಬ್ಯಾಂಕ್ಗಳಲ್ಲಿರುವ ಅಫ್ಘಾನಿಸ್ತಾನದ (Afghanistan) ಹಣವೂ ಜಪ್ತಿಯಾಗಿದೆ. ಹೀಗಾಗಿ ಸದ್ಯ ಅಫ್ಘಾನಿಸ್ತಾನದಲ್ಲಿ ಹಣಕ್ಕೆ ಹಾಹಾಕಾರ ಆರಂಭವಾದಂತಾಗಿದೆ. ಆರ್ಥಿಕತೆ ಸೊರಗಿದೆ.
ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ನಿವಾಸದಲ್ಲಿ 6.5 ಮಿಲಿಯನ್ ಡಾಲರ್ ಹಣ ಹಾಗೂ 18 ಚಿನ್ನದ ಇಟ್ಟಿಗೆಗಳು ಸಿಕ್ಕಿದೆ ಎಂಬ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ. ಈ ಮೊದಲು ಇಬ್ಬರು ಅಪರಿಚಿತರು ಎರಡು ಸೂಟ್ಕೇಸ್ನಲ್ಲಿ ಹಣ ಮತ್ತು ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ, ಅದು ಅಮರುಲ್ಲಾ ಸಲೇಹ್ ನಿವಾಸದಿಂದ ತೆಗೆದುಕೊಂಡು ಹೋಗುತ್ತಿರುವ ಸಂಪತ್ತು ಎನ್ನಲಾಗಿತ್ತು.
۱/۴ احمدالله وثیق، معاون کمیسیون فرهنگی طالبان در صحبت با روزنامه اطلاعات روز، کشف ۶.۵ میلیون دالر پول نقد و ذخیرهگاه سلاح از خانهی امرالله صالح در ولایت پنجشیر را رد کرد. وثیق جزئیات بیشتر ارائه نکرد. pic.twitter.com/4tbW6337nI
— اطلاعات روز | Etilaatroz (@Etilaatroz) September 13, 2021
ವಿರೋಧಿಗಳ ಜೊತೆಗಿನ ಶೂಟೌಟ್ನಲ್ಲಿ ತಾಲಿಬಾನ್ ಪ್ರಮುಖ ನಾಯಕನೊಬ್ಬ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ನಿನ್ನೆಯಷ್ಟೇ ತಾಲಿಬಾನ್ ಅಲ್ಲಗಳೆದಿತ್ತು. ಅಫ್ಘಾನಿಸ್ತಾನದ ಕಾಬೂಲ್ನಿಂದ ಅಮೆರಿಕಾ ಹಿಂತೆರಳಿದ ಬಳಿಕ, ಒಂದು ತಿಂಗಳ ಅವಧಿಯಲ್ಲಿ ತಾಲಿಬಾನ್ನಲ್ಲಿ ಆಂತರಿಕ ಬಿರುಕು ಮೂಡಿದೆ ಎಂಬ ವದಂತಿಗಳು ಕೇಳಿಬಂದಿತ್ತು. ಈ ಬಗ್ಗೆ ತಾಲಿಬಾನ್ ವಕ್ತಾರ ಸುಲೈಲ್ ಶಹೀನ್ ಸ್ಪಷ್ಟೀಕರಣ ನೀಡಿದ್ದ. ತಾಲಿಬಾನ್ನ ಮಾಜಿ ರಾಜಕೀಯ ಮುಖ್ಯಸ್ಥ ಹಾಗೂ ಕಳೆದ ವಾರ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಎಂದು ನೇಮಕ ಆಗಿರುವ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ಸುಲೈಲ್ ಶಹೀನ್ ತಳ್ಳಿ ಹಾಕಿದ್ದ. ಘನಿ ಬರಾದಾರ್ ವಾಯ್ಸ್ ಮೆಸೇಜ್ ಒಂದನ್ನು ಇದಕ್ಕೆ ಪುರಾವೆ ಎಂಬಂತೆ ನೀಡಿದ್ದ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈ ಕಟ್, ಕಾನೂನು ಬಾಹಿರ ಸಂಭೋಗ ಮಾಡಿದವರ ಮೇಲೆ ಕಲ್ಲೆಸೆತ: ಶಿಕ್ಷೆ ರೂಪಿಸಲೆಂದೇ ಸಚಿವಾಲಯ