ಸೆ 11ರಂದೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಕಾರ್ಯಾರಂಭ: ಈ ದಿನಾಂಕದ ಮೂಲಕ ಅಮೆರಿಕವನ್ನು ಲೇವಡಿ ಮಾಡಿದ ತಾಲಿಬಾನ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 09, 2021 | 8:43 PM

ಸರ್ಕಾರದ ಕಾರ್ಯಾರಂಭಕ್ಕೆ ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಾಲಿಬಾನ್ ಅಮೆರಿಕಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದೆ.

ಸೆ 11ರಂದೇ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಕಾರ್ಯಾರಂಭ: ಈ ದಿನಾಂಕದ ಮೂಲಕ ಅಮೆರಿಕವನ್ನು ಲೇವಡಿ ಮಾಡಿದ ತಾಲಿಬಾನ್
ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆ ಕಟ್ಟಡವನ್ನು ಧ್ವಂಸಗೊಳಿಸಿದ ಮೇಲೆ ತಾಲಿಬಾನ್ ಉಗ್ರರ ದಾಳಿ (ಎಡಚಿತ್ರ). ತಾಲಿಬಾನ್ ಸರ್ಕಾರದ ಮುಖ್ಯಸ್ಥ ಮುಲ್ಲಾ ಮೊಹಮದ್ ಅಕುಂದ್
Follow us on

ಕಾಬೂಲ್: ಅಮೆರಿಕದ ವಿಶ್ವ ವಾಣಿಜ್ಯ ಸಂಸ್ಥೆಯ ಕಟ್ಟಡಗಳನ್ನು ತಾಲಿಬಾನ್ ಉಗ್ರರು ವಿಮಾನ ನುಗ್ಗಿಸಿ, ಉರುಳಿಸಿದ ದಿನಾಂಕ ನೆನಪಿದೆಯೇ? ಅದು ಸೆಪ್ಟೆಂಬರ್ 11, 2001. ಅಮೆರಿಕ ಸೇರಿದಂತೆ ವಿಶ್ವ ಈ ದುರಂತವನ್ನು 9/11 ಎಂದೇ ಗುರುತಿಸುತ್ತದೆ. ಜಾಗತಿಕ ವಿದ್ಯಮಾನದಲ್ಲಿ ಹಲವು ತಲ್ಲಣಗಳಿಗೆ ಮುನ್ನುಡಿ ಬರೆದ 9/11ರಂದೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತ ಆರಂಭವಾಗಲಿದೆ. ಸರ್ಕಾರದ ಕಾರ್ಯಾರಂಭಕ್ಕೆ ಈ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಾಲಿಬಾನ್ ಅಮೆರಿಕಕ್ಕೆ ಮಹತ್ವದ ಸಂದೇಶವೊಂದನ್ನು ರವಾನಿಸಿದೆ.

‘ಈ ದಿನದ ಮಹತ್ವ ನಮಗೆ ಗೊತ್ತಿದೆ. ಸರ್ಕಾರದ ಕಾರ್ಯಾರಂಭಕ್ಕೆ ನಿರ್ದಿಷ್ಟವಾಗಿ ಇದೇ ದಿನ ಆರಿಸಿಕೊಳ್ಳುವ ಮೂಲಕ ಅಮೆರಿಕಕ್ಕೆ ಇರಿಸುಮುರಿಸು ಉಂಟು ಮಾಡುವುದು ನಮ್ಮ ಉದ್ದೇಶ ಆಗಿರಲಿಲ್ಲ’ ಎಂದು ತಾಲಿಬಾನ್​ನ ಹಿರಿಯ ನಾಯಕನೊಬ್ಬನ ವ್ಯಂಗ್ಯವಾಡಿರುವುದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ನಮ್ಮನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕೆಟ್ಟದಾಗಿ ನಡೆಸಿಕೊಂಡಿರುವ ಅವಮಾನ ಇಂದಿಗೂ ಹಸಿರಾಗಿದೆ. ನಮ್ಮ ಸರ್ಕಾರದ ಗೃಹ ಸಚಿವರ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಅಮೆರಿಕದ ಈ ಕ್ರಮಗಳಿಂದ ನಮಗೂ ಇರಿಸುಮುರಿಸು ಉಂಟಾಗಿದೆ ಎಂದು ಆತ ಸ್ಪಷ್ಟಪಡಿಸಿದ್ದಾನೆ.

ಕಾಬೂಲ್ ವಶಪಡಿಸಿಕೊಂಡ ಅಮೆರಿಕ ದೂತಾವಾಸ ಕಚೇರಿಗೆ ನುಗ್ಗಿದ್ದ ತಾಲಿಬಾನಿಗಳು ಕಟ್ಟಡವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ, ಅಲ್ಲಿದ್ದ ಶಿಲ್ಪವೊಂದರ ಮೇಲೆ ತಾಲಿಬಾನ್​ ಧ್ವಜದ ಚಿತ್ರ ಬಿಡಿಸಿದ್ದರು.

ತಾಲಿಬಾನಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನ, ಚೀನಾ, ರಷ್ಯಾ, ಇರಾನ್, ಟರ್ಕಿ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿತ್ತು. ಈ ದೇಶಗಳಿಗೆ ನಾವು ಮಹತ್ವ ನೀಡುತ್ತೇವೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿತ್ತು.

(Afghanistan New Government will be functional on September 11 this has significant message)

ಇದನ್ನೂ ಓದಿ: Opinion: ತಾಲಿಬಾನ್​ ರಾಷ್ಟ್ರಕ್ಕೆ ಜಗತ್ತಿನ ಮನ್ನಣೆ; ಮಕ್ಕಳಿಗೆ ತೋರಿಸಲು ಒಳ್ಳೆಯದು-ಕೆಟ್ಟದು ಪರಿಕಲ್ಪನೆಗಳೇ ಇನ್ನಿಲ್ಲ!

ಇದನ್ನೂ ಓದಿ: Afghan Government ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ:  ನೂತನ ಅಫ್ಘಾನ್ ಸರ್ಕಾರದ ಬಗ್ಗೆ ಏಳು ಪ್ರಮುಖ ಸಂಗತಿಗಳು