AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cricket Australia: ತಾಲಿಬಾನಿಗರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಡಕ್ ಎಚ್ಚರಿಕೆ: ಆಸೀಸ್-ಅಫ್ಘಾನ್ ಐತಿಹಾಸಿಕ ಟೆಸ್ಟ್ ರದ್ದು?

ಕ್ರಿಕೆಟ್ ಆಸ್ಟ್ರೇಲಿಯಾ ತಾಲಿಬಾನಿಗರಿಗೆ ವಾರ್ನಿಂಗ್ ನೀಡಿದೆ. ಮುಂಬರುವ ನವೆಂಬರ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೋಬರ್ಟ್​ನಲ್ಲಿ ನಡೆಯಬೇಕಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್​ ಪಂದ್ಯವನ್ನು ರದ್ದುಗೊಳಿತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

Cricket Australia: ತಾಲಿಬಾನಿಗರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಖಡಕ್ ಎಚ್ಚರಿಕೆ: ಆಸೀಸ್-ಅಫ್ಘಾನ್ ಐತಿಹಾಸಿಕ ಟೆಸ್ಟ್ ರದ್ದು?
Cricket Australia
TV9 Web
| Edited By: |

Updated on: Sep 09, 2021 | 12:54 PM

Share

ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರಿಗೆ ಕ್ರಿಕೆಟ್ ಸೇರಿದಂತೆ ಯಾವುದೇ ಕ್ರೀಡೆಗಳನ್ನು ಆಡಲು ಅವಕಾಶವಿಲ್ಲ ಎಂದು ತಾಲಿಬಾನ್ ಕಟ್ಟಪ್ಪಣೆ ಹೊರಡಿಸಿದೆ. ಈ ಕ್ರಮವು ನವೆಂಬರ್‌ನಲ್ಲಿ ಹೋಬರ್ಟ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ (Australia vs Afghanistan) ನಡುವಿನ ಪುರುಷರ ಟೆಸ್ಟ್ ಪಂದ್ಯದ ಮೇಲೆ ನೇರ ಪರಿಣಾಮ ಉಂಟುಮಾಡಿದೆ. ಮಾತ್ರವಲ್ಲದೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಪ್ರಕಟಣೆಯನ್ನು ಹೊರಡಿಸುವ ಮೂಲಕ ತಾಲಿಬಾನಿಗರಿಗೆ (Taliban) ಖಡಕ್ ಎಚ್ಚರಿಕೆ ನೀಡಿದೆ.

“ನಾನು ಮಹಿಳೆಯರು ಕ್ರಿಕೆಟ್ ಆಡಲು ಅವಕಾಶ ನೀಡುವುದಿಲ್ಲ ಎಂದು ಭಾವಿಸುತ್ತೇನೆ. ಯಾಕೆಂದರೆ, ಮಹಿಳೆಯರು ಕ್ರಿಕೆಟ್ ಆಡುವುದು ಅನಿವಾರ್ಯವಲ್ಲ. ಕ್ರಿಕೆಟ್​ನಲ್ಲಿ ಅವರು ಮುಖ ಮತ್ತು ದೇಹವನ್ನು ಮುಚ್ಚಿಕೊಳ್ಳದಂತಹ ಪರಿಸ್ಥಿತಿ ಎದುರಿಸಬಹುದು. ಇಸ್ಲಾಂ ಈರೀತಿಯಾಗಿ ಮಹಿಳೆಯರನ್ನು ನೋಡಲು ಅನುಮತಿಸುವುದಿಲ್ಲ.ಇದು ಮಾಧ್ಯಮ ಯುಗ. ಫೋಟೋಗಳು ಮತ್ತು ವಿಡಿಯೋಗಳು ಇರುತ್ತವೆ. ನಂತರ ಜನರು ಇದನ್ನು ವೀಕ್ಷಿಸುತ್ತಾರೆ” ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆ.

ಇದರ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ತಾಲಿಬಾನಿಗರಿಗೆ ವಾರ್ನಿಂಗ್ ನೀಡಿದೆ. ಮುಂಬರುವ ನವೆಂಬರ್​ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೋಬರ್ಟ್​ನಲ್ಲಿ ನಡೆಯಬೇಕಿರುವ ಐತಿಹಾಸಿಕ ಚೊಚ್ಚಲ ಟೆಸ್ಟ್​ ಪಂದ್ಯವನ್ನು ರದ್ದುಗೊಳಿತ್ತೇವೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

“ಒಂದು ವೇಳೆ ತಾಲಿಬಾನಿಗರು ಕ್ರಿಡೆಯಲ್ಲಿ ಮಹಿಳೆಯರ ಮೇಲೆ ನಿಷೇಧ ಹೇರಿದರೆ ನಾವೂ ಅಫ್ಘಾನಿಸ್ತಾನದ ವಿರುದ್ಧ ಹೋಬರ್ಟ್​​​ನಲ್ಲಿ ನಡೆಯಬೇಕಿದ್ದ ಟೆಸ್ಟ್ ಪಂದ್ಯವನ್ನು ರದ್ದು ಮಾಡಬೇಕಾಗುತ್ತದೆ. ಮಹಿಳೆಯರ ಕ್ರೀಡೆ ಅಭಿವೃದ್ಧಿಯನ್ನು ಬೆಂಬಲಿಸುವುದು ಆಸ್ಟ್ರೇಲಿಯಾದ ಕರ್ತವ್ಯವಾಗಿದೆ. ಒಂದು ವೇಳೆ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆಗೆ ನಿಷೇಧ ಹೇರಿದ್ದು ನಿಜವೇ ಆದರೆ ನಾವೂ ಆಫ್ಘಾನಿಸ್ತಾನ ಪುರುಷರ ತಂಡದ ನಮ್ಮ ದೇಶಕ್ಕೆ ಪ್ರವಾಸವನ್ನು ರದ್ದುಗೊಳಿಸಬೇಕಾಗುತ್ತದೆ” ಎಂದು ಆಸ್ಟ್ರೇಲಿಯಾ ಖಡಕ್ ಆಗಿ ಸೂಚನೆ ನೀಡಿದೆ.

“ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರನ್ನು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ” ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದರು.

“ನಾವು ನಮ್ಮ ಧರ್ಮಕ್ಕಾಗಿ ಹೋರಾಡಿದ್ದೇವೆ. ಇದಕ್ಕಾಗಿ ಕೂಡ, ನಾವು ಸವಾಲುಗಳು ಮತ್ತು ಸಮಸ್ಯೆಗಳನ್ನು ಎದುರಿಸಲು ಸಿದ್ಧ. ನಾವು ಇಸ್ಲಾಮಿಕ್ ಮೌಲ್ಯಗಳನ್ನು ದಾಟುವುದಿಲ್ಲ. ನಾವು ನಮ್ಮ ಇಸ್ಲಾಮಿಕ್ ನಿಯಮಗಳನ್ನು ಬಿಡುವುದಿಲ್ಲ” ಎಂದಿದ್ದಾರೆ.

ಸದ್ಯ ತಾಲಿಬಾನಿಗರ ಕೆಲವು ನಿರ್ಧಾರಗಳು ಕ್ರಿಕೆಟ್ ಮೇಲೂ ಪರಿಣಾಮ ಬೀರುತ್ತಿದೆ. ತಾಲಿಬಾನ್ ತನ್ನ ನಿರ್ಧಾರದಿಂದ ಹಿಂದೆ ಸರಿಯದೇ ಇದ್ದಲ್ಲಿ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ನಡುವಣ ಚೊಚ್ಚಲ ಟೆಸ್ಟ್ ಪಂದ್ಯ ರದ್ದಾಗುವುದು ಖಚಿತ.

Virat Kohli: ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಶಾಕಿಂಗ್ ನ್ಯೂಸ್: ಬಿಸಿಸಿಐ ನಡೆಸಿದೆ ವಿಶೇಷ ಸಭೆ

T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ಬದಲಾವಣೆ ಸಾಧ್ಯತೆ: ಆ ಒಂದು ಕ್ಷಣಕ್ಕೆ ಕಾದು ಕುಳಿತಿದೆ ಬಿಸಿಸಿಐ

(Cricket Australia said it would cancel a match against Afghanistan unless the Taliban ban on women playing sport)