Taliban ಪೂರ್ವ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ, 5 ಸಾವು

Afghanistan: ಪೂರ್ವ ಅಫ್ಘಾನಿಸ್ತಾನದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಗುಂಪು ಕಳೆದ ವಾರ ಜಲಾಲಾಬಾದ್‌ನಲ್ಲಿ ಎಂಟು ಜನರ ಸಾವಿಗೆ ಇದೇ ರೀತಿಯ ದಾಳಿಯ ಹೊಣೆ ಹೊತ್ತಿದ್ದರೂ ಬುಧವಾರದ ದಾಳಿಗೆ ಯಾರೂ ತಕ್ಷಣದ ಹೊಣೆ ಹೊತ್ತಿಲ್ಲ.

Taliban ಪೂರ್ವ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ, 5 ಸಾವು
ತಾಲಿಬಾನ್ ಹೋರಾಟಗಾರರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 22, 2021 | 5:37 PM

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ (Eastern Afghanistan)ಬುಧವಾರ ತಾಲಿಬಾನ್ (Taliban) ವಾಹನಗಳ ಮೇಲೆ ದಾಳಿಕೋರರು ದಾಳಿ ನಡೆಸಿದ್ದಾರೆ. ಆಗಸ್ಟ್ ಮಧ್ಯದಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ನಡೆದ ಇತ್ತೀಚಿನ ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಹೋರಾಟಗಾರರು ಮತ್ತು ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಂದು ದಾಳಿಯಲ್ಲಿ ಪ್ರಾಂತ್ಯ ರಾಜಧಾನಿ ಜಲಾಲಾಬಾದ್‌ನ ಸ್ಥಳೀಯ ಗ್ಯಾಸ್ ಸ್ಟೇಶನ್‌ನಲ್ಲಿ ಬಂದೂಕುಧಾರಿಗಳು ತಾಲಿಬಾನ್ ವಾಹನದ ಮೇಲೆ ಗುಂಡು ಹಾರಿಸಿದರು. ಇಬ್ಬರು ಹೋರಾಟಗಾರರು ಮತ್ತು ಗ್ಯಾಸ್ ಸ್ಟೇಷನ್ ಅಟೆಂಡೆಂಟ್ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಒಂದು ಮಗು ಕೂಡ ಹತ್ಯೆಗೀಡಾಗಿದೆ ಎಂದು ಅವರು ಹೇಳಿದರು.

ಪ್ರತ್ಯೇಕ ದಾಳಿಯಲ್ಲಿ ಮತ್ತೊಂದು ಮಗು ಸಾವನ್ನಪ್ಪಿದೆ ಮತ್ತು ಇಬ್ಬರು ತಾಲಿಬಾನ್ ಗಾಯಗೊಂಡಿದ್ದಾರೆ – ಇನ್ನೊಂದು ವಾಹನದ ಮೇಲೆ ಬಾಂಬ್ ದಾಳಿ ನಡೆದಿದೆ. ಜಲಾಲಾಬಾದ್‌ನಲ್ಲಿ ತಾಲಿಬಾನ್ ವಾಹನದ ಇನ್ನೊಂದು ಬಾಂಬ್ ಸ್ಫೋಟದಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಆದರೂ ಆ ವ್ಯಕ್ತಿಯು ತಾಲಿಬಾನ್ ಅಧಿಕಾರಿಯೇ ಅಥವಾ ಅಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಸಾಕ್ಷಿಗಳು ಪ್ರತೀಕಾರದ ಭಯದಿಂದ ಹೆಸರು ಹೇಳಲು ಹಿಂಜರಿದಿದ್ದಾರೆ.

ಪೂರ್ವ ಅಫ್ಘಾನಿಸ್ತಾನದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಗುಂಪು ಕಳೆದ ವಾರ ಜಲಾಲಾಬಾದ್‌ನಲ್ಲಿ ಎಂಟು ಜನರ ಸಾವಿಗೆ ಇದೇ ರೀತಿಯ ದಾಳಿಯ ಹೊಣೆ ಹೊತ್ತಿದ್ದರೂ ಬುಧವಾರದ ದಾಳಿಗೆ ಯಾರೂ ತಕ್ಷಣದ ಹೊಣೆ ಹೊತ್ತಿಲ್ಲ.

ತಾಲಿಬಾನ್ ಮತ್ತು ಐಎಸ್ ಪರಸ್ಪರ ಶತ್ರುಗಳಾಗಿದ್ದು ಈ ದಾಳಿಗಳು ದೇಶದ ಹೊಸ ತಾಲಿಬಾನ್ ಆಡಳಿತಗಾರರು ಮತ್ತು ಅವರ ದೀರ್ಘಕಾಲದ ಪ್ರತಿಸ್ಪರ್ಧಿಗಳ ನಡುವಿನ ವ್ಯಾಪಕ ಸಂಘರ್ಷದ ಭೀತಿಯನ್ನು ಹೆಚ್ಚಿಸಿದೆ. ತಾಲಿಬಾನ್‌ಗಳು ಐಎಸ್ ಉಗ್ರರನ್ನು ಎದುರಿಸುವ ಒತ್ತಡದಲ್ಲಿವೆ. ಅಫ್ಘಾನ್ ನೆಲದಿಂದ ಭಯೋತ್ಪಾದಕ ದಾಳಿಗಳನ್ನು ತಡೆಯುತ್ತೇವೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ಭರವಸೆಯ ಮೇಲೆ ಭಾಗಶಃ. ಸಂಘರ್ಷದಿಂದ ಬೇಸತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಗ್ಗೆ ಭಯ ಮತ್ತು ತಪ್ಪುಗ್ರಹಿಕೆಯ ಹೊರತಾಗಿಯೂ ಹೊಸ ಆಡಳಿತಗಾರರು ಕನಿಷ್ಠ ಸಾರ್ವಜನಿಕ ಸುರಕ್ಷತೆಯ ಕಾರ್ಯವನ್ನು ಪುನಃಸ್ಥಾಪಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ

( Attackers struck Taliban vehicles in an eastern Afghanistan 5 Killed)

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ