ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು

| Updated By: Lakshmi Hegde

Updated on: Sep 06, 2021 | 9:36 AM

ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು
ಪಂಜಶಿರ್​ ಹೋರಾಟಗಾರರು
Follow us on

ತಾಲಿಬಾನಿಗಳಿಗೆ ಬಹುದೊಡ್ಡ ಸವಾಲಾಗಿದ್ದ ಪಂಜಶಿರ್​ ಕಣಿವೆಯಲ್ಲಿ ಹೋರಾಟ ಮುಂದುವರಿದಿದೆ. ಪಂಜಶಿರ್​ನ್ನು ತಾವು ವಶಪಡಿಸಿಕೊಂಡಿದ್ದಾಗಿ ತಾಲಿಬಾನ್​ ಪಡೆಗಳು ಹೇಳಿದ್ದರೂ, ಪಂಜಶಿರ್​ ಪ್ರತಿರೋಧಕ ಪಡೆ ಇದನ್ನು ಅಲ್ಲಗಳೆದಿದೆ. ತಾಲಿಬಾನಿಗಳು ಪಂಜಶಿರ್​ ರಸ್ತೆಯನ್ನಷ್ಟೇ ವಶಪಡಿಸಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ. ಈ ಮಧ್ಯೆ ಪಂಜಶಿರ್​ ಪ್ರತಿರೋಧಕ ಪಡೆ (National Resistance Front of Afghanistan) ಕದನ ವಿರಾಮಕ್ಕೆ ಕರೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳ ಹೊಸ ನಿಯಮಗಳು ಜಾರಿಯಾದ ಬೆನ್ನಲ್ಲೇ ಪಂಜಶಿರ್​ ಕಣಿವೆಯಲ್ಲೂ ಹೆಚ್ಚೆಚ್ಚು ಸಂಘರ್ಷಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ತಾಲಿಬಾನ್​ ಮತ್ತು ಪಂಜಶಿರ್​ ಹೋರಾಟ ಪಡೆಗಳ ನಡುವೆ ಸಿಕ್ಕಾಪಟೆ ಹೊಡೆದಾಟ, ಸಂಘರ್ಷಗಳು ನಡೆದ ಪರಿಣಾಮ ಎರಡೂ ಕಡೆಗಳಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಈ ಮಧ್ಯೆ ಎನ್​​ಆರ್​ಎಫ್​​ಎ ಕದನ ವಿರಾಮಕ್ಕೆ ಕರೆ ನೀಡಿದೆ.  ತಾಲಿಬಾನ್​ ಕೂಡ ಒಪ್ಪಿಕೊಂಡು ಯುದ್ಧ ನಿಲ್ಲಿಸಿದೆ ಎಂದು ವರದಿಯಾಗಿದೆ. 

ಮಾತುಕತೆಗೆ ಸಿದ್ಧವೆಂದ ಅಹ್ಮದ್​ ಮಸೂದ್​
ಇನ್ನು ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಪ್ರಸ್ತುತ ಉಂಟಾಗಿರುವ ಸಮಸ್ಯೆಯನ್ನು, ದ್ವೇಷದ ಸ್ಥಿತಿಯನ್ನು ಅಂತ್ಯಗೊಳಿಸಲು ನಾವು ಒಪ್ಪುತ್ತೇವೆ. ಅದಕ್ಕೆ ತಾಲಿಬಾನ್​ ಕೂಡ ಒಪ್ಪಬೇಕು..ಮುಸ್ಲಿಂ ಧಾರ್ಮಿಕ ಗುರುಗಳ ಕರೆಗೆ ಅವರು ಸ್ಪಂದಿಸಿ, ದಾಳಿಯನ್ನು ನಿಲ್ಲಿಸಬೇಕು ಎಂದೂ ಮಸೂದ್​ ಹೇಳಿದ್ದಾರೆ.

ತಾಲಿಬಾನಿಗಳು ಪಂಜಶಿರ್​ ಮತ್ತು ಅಂದರಾಬ್​​ನಲ್ಲಿ ತಮ್ಮ ದಾಳಿ ಹಾಗೂ ಸೇನಾ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು. ಹಾಗೊಮ್ಮೆ ಮಾಡಿದರೆ ನಾವೂ ಕೂಡ ನಮ್ಮ ಹೋರಾಟವನ್ನು ಬಿಡುತ್ತೇವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ತಾಲಿಬಾನಿಗಳು ಬರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಗಳನ್ನು ಸೂರ್ಯ-ಜ್ಯೋತಿಕಾ ದಂಪತಿಯ ಕೈಗೆ ಒಪ್ಪಿಸಿದ ಸ್ಟಾರ್​ ನಿರ್ದೇಶಕ; ಏನಾಗಲಿದೆ ಅದಿತಿ ಶಂಕರ್​ ಭವಿಷ್ಯ?

ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವು

Published On - 9:09 am, Mon, 6 September 21