ಮಹಿಳೆ, ಮಕ್ಕಳು ಮತ್ತು ವಯಸ್ಕರಿಗೆ ಸಮಾನ ಹಕ್ಕು ಪ್ರತಿಪಾದಿಸುವ ಶರಿಯಾ ಕಾನೂನನ್ನು ತಾಲಿಬಾನ್ ಪಾಲಿಸಬೇಕು: ಮೆಹಬೂಬ ಮುಫ್ತಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 08, 2021 | 11:37 PM

ಪ್ರವಾದಿ ಮೊಹಮ್ಮದ್ ಅವರು ಮದೀನಾನಲ್ಲಿ ಅಡಳಿತ ನಡೆಸಿದ ಮಾದರಿಯನ್ನು ತಾಲಿಬಾನ್ ಅನುಸರಿಸಿದರೆ, ಅದು ಇಡೀ ವಿಶ್ವಕ್ಕೆ ಒಂದು ಉದಾಹರಣೆಯಾಗಿ ಪರಿಣಮಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.

ಮಹಿಳೆ, ಮಕ್ಕಳು ಮತ್ತು ವಯಸ್ಕರಿಗೆ ಸಮಾನ ಹಕ್ಕು ಪ್ರತಿಪಾದಿಸುವ ಶರಿಯಾ ಕಾನೂನನ್ನು ತಾಲಿಬಾನ್ ಪಾಲಿಸಬೇಕು: ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ
Follow us on

ಭಾರತದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಫ್ಘಾನಿಸ್ತಾನದಲ್ಲಿ ರಚನೆಯಾಗಿರುವ ತಾಲಿಬಾನ್ ಸರ್ಕಾರದ ಬಗ್ಗೆ ಕಾಮೆಂಟ್ ಗಳನ್ನು ಮಾಡಲು ಆರಂಭಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ್ ಪೀಪಲ್ಸ್ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೆಯಾಗಿರುವ ಮೆಹಬೂಬ ಮುಫ್ತಿ ಅವರು ಬುಧವಾರದಂದು ಹೇಳಿಕೆಯೊಂದನ್ನು ನೀಡಿ ತಾಲಿಬಾನ್ ಹೇಗೆ ಸರ್ಕಾರ ನಡೆಸಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸರ್ಕಾರವನ್ನು ಕೈಗೆತ್ತಿಕೊಂಡಿರುವ ತಾಲಿಬಾನ್ ನಾಯಕರು ಶರಿಯಾ ಅನ್ನು (ಇಸ್ಲಾಮಿಕ್ ಕಾನೂನು) ಅದರ ನಿಜ ಅರ್ಥದಲ್ಲಿ ಪಾಲಿಸಬೇಕು. ಶರಿಯಾ, ಮಹಿಳೆಯರೂ ಸೇರಿದಂತೆ ಸರ್ವರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ ಎಂದು ಅವರು ಶ್ರೀನಗರದಲ್ಲಿ ಹೇಳಿದರು.

ಮೇ 1 ರಂದು ಅಮೇರಿಕ ಮತ್ತು ಅದರ ಮಿತ್ರಪಡೆಯ ಸೇನೆಗಳು ಅಫ್ಘಾನಿಸ್ತಾನದಿಂದ ವಾಪಸ್ಸು ಹೋಗಲು ಶುರು ಮಾಡಿದ ನಂತರ ಕಳೆದ ತಿಂಗಳು ತಾಲಿಬಾನ ಪಡೆಗಳು ದೇಶದ ಒಂದೊಂದೇ ಪ್ರಾಂತ್ಯವನ್ನು ವಶಪಡಿಸಿಕೊಳ್ಳುತ್ತಾ ಅಂತಿಮವಾಗಿ ಆಗಸ್ಟ್ 15 ರಂದು ಕಾಬೂಲ್ ನಗರವನ್ನು ಸಹ ವಶಪಡಿಸಿಕೊಂಡವು. ಮಂಗಳವಾರದಂದು ಮುಲ್ಲಾಹ್ ಮೊಹಮ್ಮದ್ ಹಸನ್ ಅಖುಂದ್ ಅವರ ನೇತೃತ್ವದಲ್ಲಿ ಹಂಗಾಮಿ ಸರ್ಕಾರ ರಚಿಸಿರುವುದಾಗಿ ತಾಲಿಬಾನ್ ಹೇಳಿದೆ.

‘ತಾಲಿಬಾನ್ ಸರ್ಕಾರ ರಚಿಸಿ ಆಡಳಿತವನ್ನು ಕೈಗೆತ್ತಿಕೊಂಡಿರುವುದು ಸದ್ಯದ ವಾಸ್ತವ ಸಂಗತಿಯಾಗಿದೆ. ತಾಲಿಬಾನ ಮೊದಲ ಬಾರಿಗೆ ಆಡಳಿತಕ್ಕೆ ಬಂದಾಗ, ಮಾನವ ಹಕ್ಕುಗಳ ವಿರೋಧಿ ಎನ್ನುವುದು ಅದರ ಇಮೇಜ್ ಆಗಿತ್ತು. ಅದು ಅಫ್ಘಾನಿಸ್ತಾನವನ್ನು ಆಳುವ ನಿರ್ಧಾರ ಮಾಡಿಕೊಂಡಿದ್ದರೆ, ಶರಿಯಾ ಕಾನೂನನ್ನು ಪವಿತ್ರ ಕುರಾನ್ ನಲ್ಲಿ ಹೇಳಿರುವ ಹಾಗೆ ಪಾಲಿಸಬೇಕು. ಈ ಕಾನೂನು ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ,’ ಎಂದು ಮೆಹಬೂಬಾ ಅವರು ಹೇಳಿದರು.

ಪ್ರವಾದಿ ಮೊಹಮ್ಮದ್ ಅವರು ಮದೀನಾನಲ್ಲಿ ಅಡಳಿತ ನಡೆಸಿದ ಮಾದರಿಯನ್ನು ತಾಲಿಬಾನ್ ಅನುಸರಿಸಿದರೆ, ಅದು ಇಡೀ ವಿಶ್ವಕ್ಕೆ ಒಂದು ಉದಾಹರಣೆಯಾಗಿ ಪರಿಣಮಿಸಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.
ಅಂತರರಾಷ್ಟ್ರೀಯ ಸಮುದಾಯಗಳೊಂದಿಗೆ ಉತ್ತಮ ಬಾಂಧವನ್ನು ಇಟ್ಟುಕೊಳ್ಳಬೇಕಾದರೆ ಇಸ್ಲಾಂ ಮತ್ತು ಶರಿಯಾದ ಕಠಿಣ ವ್ಯಾಖ್ಯಾನವನ್ನು ಜಾರಿಗೆ ತರುವ ಪ್ರಯತ್ನ ಮಾಡಬಾರದು ಎಂದು ಮೆಹಬೂಬಾ ಹೇಳಿದರು.

‘ಶರಿಯಾವನ್ನು ಅನುಸರಿಸುವುದನ್ನು ಅವರು ನಿರಾಕರಿಸಿದರೆ, ಅಪ್ಘಾನಿಸ್ತಾನದಲ್ಲಿ ಜನಜೀವನ ದುಸ್ತರಗೊಳ್ಳಲಿದೆ,’ ಎಂದು ಅವರು ಹೇಳಿದರು.

ಇದನ್ನೂ ಓದಿ:  ತಾಲಿಬಾನಿಗಳ ಅಫಘಾನಿಸ್ತಾನದಲ್ಲಿ ಮಹಿಳೆಯರಷ್ಟೇ ಅಲ್ಲ, ಪುರುಷರೂ ಜೀನ್ಸ್ ಧರಿಸುವಂತಿಲ್ಲ! ದಿನಕ್ಕೊಂದು ಫತ್ವಾ!!