Ashraf Ghani ಅಫ್ಘಾನ್ ಜನರನ್ನು ಕೈಬಿಡಲು ಎಂದಿಗೂ ಉದ್ದೇಶಿಸಿಲ್ಲ: ಕಾಬೂಲ್​​ನಿಂದ ಪಲಾಯನ ನಿರ್ಧಾರ ಸಮರ್ಥಿಸಿಕೊಂಡ ಅಶ್ರಫ್ ಘನಿ

Afghanistan: ಕಾಬೂಲ್ ತೊರೆಯುವುದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ, ಆದರೆ ಬಂದೂಕುಗಳನ್ನು ಮೌನವಾಗಿಡಲು ಮತ್ತು ಕಾಬೂಲ್ ಮತ್ತು ಅವಳ 6 ಮಿಲಿಯನ್ ನಾಗರಿಕರನ್ನು ರಕ್ಷಿಸಲು ಇದು ಒಂದೇ ಮಾರ್ಗ ಎಂದು ನಾನು ನಂಬಿದ್ದೇನೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ

Ashraf Ghani ಅಫ್ಘಾನ್ ಜನರನ್ನು ಕೈಬಿಡಲು ಎಂದಿಗೂ ಉದ್ದೇಶಿಸಿಲ್ಲ: ಕಾಬೂಲ್​​ನಿಂದ ಪಲಾಯನ ನಿರ್ಧಾರ ಸಮರ್ಥಿಸಿಕೊಂಡ ಅಶ್ರಫ್ ಘನಿ
ಅಶ್ರಪ್ ಘನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 08, 2021 | 8:42 PM

ಕಾಬೂಲ್: ಕಾಬೂಲ್ ತೊರೆಯುವುದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ ಎಂದು ಪದಚ್ಯುತ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ (Ashraf Ghani) ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ , ಘನಿ ಹೇಳಿಕೆಯಲ್ಲಿ ತನ್ನ “ಸ್ವಂತ ಅಧ್ಯಾಯ” ಸ್ಥಿರತೆ ಮತ್ತು ಸಮೃದ್ಧಿಯನ್ನು ಖಾತ್ರಿಪಡಿಸದೆ ತನ್ನ ಹಿಂದಿನವರ ರೀತಿಯಂತೆ ದುರಂತದಲ್ಲಿ ಕೊನೆಗೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಈ ವರ್ಷದ ಆಗಸ್ಟ್ 15 ರಂದು ತಾಲಿಬಾನ್‌ಗಳು ಕಾಬೂಲ್‌ಗೆ ತೆರಳುತ್ತಿದ್ದಂತೆ ಅಶ್ರಫ್ ಘನಿ ಮತ್ತು ಅವರ ಉನ್ನತ ಮಂತ್ರಿಗಳೊಂದಿಗೆ ಅಫ್ಘಾನಿಸ್ತಾನದಿಂದ ಪಲಾಯನ ಮಾಡಿದರು. ಆರಂಭಿಕ ಹೇಳಿಕೆಯಲ್ಲಿ, ಘನಿ ಅವರು ದೇಶವನ್ನು ತೊರೆಯುವಂತೆ ಒತ್ತಾಯಿಸಲಾಯಿತು ಮತ್ತು ‘ರಕ್ತಪಾತವನ್ನು ತಪ್ಪಿಸಲು’ ಹಾಗೆ ಮಾಡಿದೆ ಎಂದು ಹೇಳಿದ್ದರು. ಅವರು ಅಫ್ಘಾನಿಸ್ತಾನದಿಂದ ನಿರ್ಗಮಿಸಿದ ಕೆಲವು ದಿನಗಳ ನಂತರ, ಘನಿ ಮತ್ತು ಅವರ ಕುಟುಂಬಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ‘ಮಾನವೀಯ ನೆಲೆಯಲ್ಲಿ’ ಆಶ್ರಯ ನೀಡಲಾಯಿತು. ಆಗಸ್ಟ್ 15 ರ ಘಟನೆಗಳನ್ನು ಉಲ್ಲೇಖಿಸಿದ ಅಶ್ರಫ್ ಘನಿ ತನ್ನ ಇತ್ತೀಚಿನ ಹೇಳಿಕೆಯಲ್ಲಿ ಅರಮನೆ ಭದ್ರತೆಯ ಒತ್ತಾಯದ ಮೇರೆಗೆ ಅಫ್ಘಾನಿಸ್ತಾನವನ್ನು ತೊರೆದೆ ಎಂದಿದ್ದರು.

“ಕಾಬೂಲ್ ತೊರೆಯುವುದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರ, ಆದರೆ ಬಂದೂಕುಗಳನ್ನು ಮೌನವಾಗಿಡಲು ಮತ್ತು ಕಾಬೂಲ್ ಮತ್ತು ಅವಳ 6 ಮಿಲಿಯನ್ ನಾಗರಿಕರನ್ನು ರಕ್ಷಿಸಲು ಇದು ಒಂದೇ ಮಾರ್ಗ ಎಂದು ನಾನು ನಂಬಿದ್ದೇನೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ನಾನು ಪ್ರಜಾಪ್ರಭುತ್ವ, ಸಮೃದ್ಧ ಮತ್ತು ಸಾರ್ವಭೌಮ ರಾಜ್ಯವನ್ನು ನಿರ್ಮಿಸಲು ಅಪ್ಘಾನ್ ಜನರಿಗೆ ಸಹಾಯ ಮಾಡಲು ನನ್ನ ಜೀವನದ 20 ವರ್ಷಗಳನ್ನು ವಿನಿಯೋಗಿಸಿದ್ದೇನೆ ಜನರನ್ನು ಅಥವಾ ಆ ರೀತಿಯಿಂದ ತೊರೆಯುವುದು ನನ್ನ ಉದ್ದೇಶವಾಗಿರಲಿಲ್ಲ.”

ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷರು ಈಗ ಪರಿಸ್ಥಿತಿಯನ್ನು ಅವಲೋಕಿಸುವ ಮತ್ತು ಅವರ ಸರ್ಕಾರದ ಪತನಕ್ಕೆ ಕಾರಣವಾದ ಘಟನೆಗಳನ್ನು ನಿರ್ಣಯಿಸುವ ಕ್ಷಣ ಎಂದು ಬರೆದಿದ್ದಾರೆ. “ಮುಂದಿನ ದಿನಗಳಲ್ಲಿ ನಾನು ಅವುಗಳನ್ನು ವಿವರವಾಗಿ ತಿಳಿಸುತ್ತೇನೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಬೂಲ್‌ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ವಕ್ತಾರರು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶ್ರಫ್ ಘನಿ ಅವರು “ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ನಲ್ಲಿ ಭರಪೂರ ನಗದು ತುಂಬಿಕೊಂಡು” ಅಫ್ಘಾನಿಸ್ತಾನಕ್ಕೆ ಪರಾರಿಯಾದ ಆರೋಪವನ್ನು ನಿರಾಕರಿಸಿದರು. ಆರೋಪಗಳನ್ನು “ಸಂಪೂರ್ಣವಾಗಿ ಮತ್ತು ಸ್ಪಷ್ಟ ಸುಳ್ಳು” ಎಂದು ಹೇಳಿದ ಘನಿ ಭ್ರಷ್ಟಾಚಾರವು ಅಫ್ಘಾನಿಸ್ತಾನವನ್ನು ದಶಕಗಳಿಂದ ದುರ್ಬಲಗೊಳಿಸಿದ ಒಂದು ಪಿಡುಗು ಎಂದಿದ್ದಾರೆ.

“ನಾನು ಸುಲಭವಾಗಿ ಅಥವಾ ತ್ವರಿತವಾಗಿ ಸೋಲಿಸಲು ಸಾಧ್ಯವಾಗದ ಪೆಡಂಭೂತವನ್ನು ನಾನು ಆನುವಂಶಿಕವಾಗಿ ಪಡೆದಿದ್ದೇನೆ” ಎಂದು ಅವರು ಬರೆದಿದ್ದಾರೆ.  ಅಶ್ರಫ್ ಘನಿ ಅವರು ತಮ್ಮ ಪತ್ನಿಯ ಕುಟುಂಬದ ಪಿತ್ರಾರ್ಜಿತ ಮತ್ತು ಅವರ ತಾಯ್ನಾಡಿನ ಲೆಬನಾನ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲಾ ಆಸ್ತಿಗಳನ್ನು ಸಾರ್ವಜನಿಕವಾಗಿ ಘೋಷಿಸಿರುವುದಾಗಿ ಹೇಳಿದರು.

ತನ್ನ ಹೇಳಿಕೆಗಳ ಸತ್ಯಾಸತ್ಯತೆಯನ್ನು ಸಾಬೀತುಪಡಿಸಲು ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಅಧಿಕೃತ ಲೆಕ್ಕಪರಿಶೋಧನೆಯನ್ನು ಅವರು ಸ್ವಾಗತಿಸಿದರು.

“ನನ್ನ ಆಪ್ತ ಸಹಾಯಕರು ತಮ್ಮ ಹಣಕಾಸನ್ನು ಸಾರ್ವಜನಿಕ ಲೆಕ್ಕಪರಿಶೋಧನೆಗೆ ಸಲ್ಲಿಸಲು ಸಿದ್ಧರಾಗಿದ್ದಾರೆ, ಮತ್ತು ನಾನು ಇತರ ಹಿರಿಯ ಅಧಿಕಾರಿಗಳು ಮತ್ತು ರಾಜಕೀಯ ವ್ಯಕ್ತಿಗಳನ್ನು ಹಾಗೆ ಮಾಡಲು ಪ್ರೋತ್ಸಾಹಿಸುತ್ತೇನೆ ಮತ್ತು ಒತ್ತಾಯಿಸುತ್ತೇನೆ” ಎಂದು ಘನಿ ಬರೆದಿದ್ದಾರೆ.

ಕ್ರಿಯೆಗಳನ್ನು ಯಾವಾಗಲೂ 2004 ಸಂವಿಧಾನದಿಂದ ವ್ಯಾಖ್ಯಾನಿಸಲಾಗಿದೆ ಅಶ್ರಫ್ ಘನಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಘಾನಿಸ್ತಾನದ 2004 ರ ಸಂವಿಧಾನವು “ನಮ್ಮ ಭಿನ್ನಾಭಿಪ್ರಾಯಗಳನ್ನು ಕೊಡುಕೊಳ್ಳುವಿಕೆ ಮತ್ತು ಮನವೊಲಿಸುವ ಮೂಲಕ ನಿರ್ವಹಿಸಬಹುದಾದ ಸಂವಾದಕ್ಕೆ ವೇದಿಕೆಗಳನ್ನು ಒದಗಿಸುತ್ತದೆ ಮತ್ತು ಭವಿಷ್ಯಕ್ಕಾಗಿ ಒಂದು ಸಾಮಾನ್ಯ ದೃಷ್ಟಿಕೋನವನ್ನು ಒಪ್ಪಿಕೊಳ್ಳುವುದನ್ನು ವ್ಯಾಖ್ಯಾನಿಸಬಹುದು ಮತ್ತು ಸ್ವೀಕರಿಸಬಹುದು” ಎಂದು ಬರೆದಿದ್ದಾರೆ. 2004 ರ ಸಂವಿಧಾನವು ಯಾವಾಗಲೂ ತನ್ನ ಕಾರ್ಯಗಳಿಗೆ ಮಾರ್ಗದರ್ಶನ ನೀಡಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಹಿಂದಿನವರ ಅಧ್ಯಾಯದಂತೆಯೇ ನನ್ನದೇಅಧ್ಯಾಯವು ದುರಂತದಲ್ಲಿ ಕೊನೆಗೊಂಡಿತು. ನಾನು ಅದನ್ನು ವಿಭಿನ್ನವಾಗಿ ಅಂತ್ಯಗೊಳಿಸಲು ಸಾಧ್ಯವಾಗಲಿಲ್ಲ ಎಂದು ನಾನು ಅಫ್ಘಾನ್ ಜನರಿಗೆ ಕ್ಷಮೆಯಾಚಿಸುತ್ತೇನೆ. ಅಫ್ಘಾನಿಸ್ತಾನದ ಜನರ ಬಗೆಗಿನ ನನ್ನ ಬದ್ಧತೆಯು ಎಂದಿಗೂ ಕಡಿಮೆಯಾಗಿಲ್ಲ ಮತ್ತು ನನ್ನ ಜೀವನದುದ್ದಕ್ಕೂ ನನಗೆ ಮಾರ್ಗದರ್ಶನ ನೀಡುತ್ತದೆ ಎಂದು ಘನಿ ಹೇಳಿದ್ದಾರೆ.

ಇದನ್ನೂ ಓದಿ: Afghan Government ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ:  ನೂತನ ಅಫ್ಘಾನ್ ಸರ್ಕಾರದ ಬಗ್ಗೆ ಏಳು ಪ್ರಮುಖ ಸಂಗತಿಗಳು

(Leaving Kabul was the most difficult decision of my life says Ashraf Ghani

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ