ಕಾಬೂಲ್: ತಾಲಿಬಾನ್ ಅಪ್ಘಾನ್ ಪಾಸ್‌ಪೋರ್ಟ್‌ಗಳನ್ನು ಮತ್ತು ಹಿಂದಿನ ಸರ್ಕಾರದಿಂದ ನೀಡಲಾದ ರಾಷ್ಟ್ರೀಯ ಗುರುತಿನ ಚೀಟಿಗಳನ್ನು ಬದಲಾಯಿಸುವುದಾಗಿ ಘೋಷಿಸಿದೆ ಮತ್ತು ದಾಖಲೆಗಳು ಸದ್ಯಕ್ಕೆ ಮಾನ್ಯವಾಗಿರುತ್ತವೆ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿದೆ. ಅಫ್ಘಾನ್ ಪಾಸ್‌ಪೋರ್ಟ್‌ಗಳು ಮತ್ತು ಎನ್‌ಐಡಿಗಳು “ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನ” ಎಂಬ ಹೆಸರನ್ನು ಹೊಂದಿರಬಹುದು ಎಂದು ತಾಲಿಬಾನ್ ಮಾಹಿತಿ ಮತ್ತು ಸಂಸ್ಕೃತಿಯ ಉಪ ಮಂತ್ರಿ ಮತ್ತು ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರನ್ನು ಉಲ್ಲೇಖಿಸಿ ಎಂದು ಖಾಮಾ ಪ್ರೆಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಹಿಂದಿನ ಸರ್ಕಾರ ನೀಡಿದ ದಾಖಲೆಗಳು ದೇಶದ ಕಾನೂನು ದಾಖಲೆಗಳಾಗಿ ಇಂದಿಗೂ ಮಾನ್ಯವಾಗಿವೆ ಎಂದು ಮುಜಾಹಿದ್ ಹೇಳಿದ್ದಾರೆ.
ಸುದ್ದಿಸಂಸ್ಥೆಯ ಪ್ರಕಾರ ಅಫ್ಘಾನಿಸ್ತಾನದಲ್ಲಿ ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿಭಾಗಗಳು ಇನ್ನೂ ತೆರೆದಿಲ್ಲ. ಅವರ ಬಯೋಮೆಟ್ರಿಕ್ ಮಾಡಿದವರು ಮಾತ್ರ ಈ ದಾಖಲೆಗಳನ್ನು ಪಡೆಯಬಹುದಾಗಿದೆ.
ತಾಲಿಬಾನ್ ಈಗಾಗಲೇ ದೇಶದ ಬದಲಾವಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಅಪ್ಘಾನಿಸ್ತಾನವನ್ನು ವಶವಡಿಸಿಕೊಂಡ ನಂತರ ಅವರು ಮಹಿಳಾ ಸಚಿವಾಲಯವನ್ನು “ಪ್ರಾರ್ಥನೆ ಮತ್ತು ಮಾರ್ಗದರ್ಶನ ಸಚಿವಾಲಯಗಳು ಮತ್ತು ಸದ್ಗುಣಗಳ ಅಭಿವೃದ್ಧಿ ಮತ್ತು ಅನೀತಿ ತಡೆಗಟ್ಟುವಿಕೆ” ಎಂದು ಬದಲಿಸಿದೆ. ಅದೇ ವೇಳೆ ಶಾಲೆಗಳಿಗೆ ಮರಳಲು ಅವಕಾಶ ನೀಡುವುದಿಲ್ಲ ಮತ್ತು ಅಪರಾಧಿಗಳನ್ನು ತಡೆಯಲು ಅಂಗಚ್ಛೇದನ ಮತ್ತು ಮರಣದಂಡನೆಯಂತಹ ಶಿಕ್ಷೆಗಳನ್ನು ಮರುಸ್ಥಾಪಿಸಲಾಗಿದೆ.
ಶನಿವಾರ ಪಶ್ಚಿಮ ಅಫ್ಘಾನಿಸ್ತಾನ ನಗರ ಹೆರಾತ್‌ನ ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು, ತಾಲಿಬಾನ್‌ಗಳು ಶಂಕಿತನಾಲ್ಕು ಅಪಹರಣಕಾರರನ್ನು ಕೊಂದಿದ್ದಾರೆ ಮತ್ತು ಇತರರನ್ನು ತಡೆಯಲು ಅವರ ದೇಹಗಳನ್ನು ಸಾರ್ವಜನಿಕವಾಗಿ ನೇತುಹಾಕಿದ್ದಾರೆ ಎಂದು ಹೇಳಿದರು.
ಸ್ಥಳೀಯ ಉದ್ಯಮಿ ಮತ್ತು ಆತನ ಮಗನನ್ನು ಅಪಹರಿಸಿದ್ದಾರೆ ಮತ್ತು ನಗರದ ಸುತ್ತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ ಗಸ್ತು ಸಿಬ್ಬಂದಿಅವರನ್ನು ಕಂಡಾಗ ಅವರನ್ನು ನಗರದಿಂದ ಹೊರಗೆ ಕರೆದೊಯ್ಯಲು ಪ್ರಯತ್ನಿಸಿದರು ಎಂದು ಹೆರತ್‌ನ ಉಪ ಗವರ್ನರ್ ಶೇರ್ ಅಹ್ಮದ್ ಅಮ್ಮರ್ ಹೇಳಿದ್ದಾರೆ. ಗುಂಡಿನ ಚಕಮಕಿಯಲ್ಲಿ ನಾಲ್ವರು ಸಾವನ್ನಪ್ಪಿದರು ಮತ್ತು ಒಬ್ಬ ತಾಲಿಬಾನ್ ಯೋಧ ಗಾಯಗೊಂಡರು. “ಅವರ ದೇಹಗಳನ್ನು ಮುಖ್ಯ ಚೌಕಕ್ಕೆ ತರಲಾಯಿತು ಮತ್ತು ಇತರ ಅಪಹರಣಕಾರರಿಗೆ ಪಾಠವಾಗಿ ನಗರದಲ್ಲಿ ನೇತು ಹಾಕಲಾಗಿದೆ” ಎಂದು ಅವರು ಹೇಳಿದರು.
ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹಿರಿಯ ತಾಲಿಬಾನ್ ನಾಯಕ ಮುಲ್ಲಾ ನೂರುದ್ದೀನ್ ತುರಾಬಿ ಅವರು ಅಪರಾಧಿಗಳನ್ನು ತಡೆಯಲು ಅಂಗಚ್ಛೇದನ ಮತ್ತು ಮರಣದಂಡನೆಯಂತಹ ಶಿಕ್ಷೆಗಳನ್ನು ಪುನಃಸ್ಥಾಪಿಸುವುದಾಗಿ ಹೇಳಿದರು. ಶಿಕ್ಷೆಗಳು ಮತ್ತು ಇತರ ಕ್ರಮಗಳ ಕುರಿತು ಗುಂಪಿನ ಟೀಕೆಗಳನ್ನು ಖಂಡಿಸಿರುವ ಹಲವಾರು ದೇಶಗಳು, ಕಾಬೂಲ್‌ನಲ್ಲಿ ತಾಲಿಬಾನ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಸಂಭಾವ್ಯ ಮಾನ್ಯತೆ ಮಾನವ ಹಕ್ಕುಗಳ ಗೌರವವನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: Bhabanipur Bypoll ಮೋದಿ ಜೀ, ನಾವು ಭಾರತವನ್ನು ತಾಲಿಬಾನ್ ಮಾಡಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ
ಇದನ್ನೂ ಓದಿ: ಅಧಿಕಾರಕ್ಕಾಗಿ ಕಿತ್ತಾಟ; ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು: ವರದಿ
(Taliban to change Afghan passports and national identity cards by the previous government says Report )
Published On - 3:02 pm, Sun, 26 September 21