ಆಫ್ಘಾನಿಸ್ತಾನ: ತಾಲೀಬಾನ್ ಉಗ್ರರ ಉಪಟಳವನ್ನು ಕಳೆದ 2-3 ವರ್ಷಗಳಿಂದ ತೀವ್ರವಾಗಿ ಸಹಿಸಿಕೊಂಡು ಬಂದಿದ್ದ ಭಾರತದ ಹಿಂದೂಗಳು ಮತ್ತು ಸಿಖ್ಖರು ಕೊನೆಗೂ ಆ ಬೆಂಕಿಯ ಬಾಣಲೆಯಿಂದ ಸಾಮೂಹಿಕವಾಗಿ ಭಾರತಕ್ಕೆ ವಾಪಸಾಗುತ್ತಿದ್ದಾರೆ. ಕರ್ನಾಟಕ ಮೂಲದವರೂ ಸಹ ಅನೇಕ ಮಂದಿ ಆಫ್ಘಾನಿಸ್ತಾನಕ್ಕೆ ತೆರಳಿ ವ್ಯಾಪಾರ ವಹಿವಾಟು, ಸೇವಾ ಕ್ಷೇತ್ರದಲ್ಲಿ ತೊಡಗಿದ್ದರು. ಆದರೆ ಈಗ ಬದಲಾದ ರಾಜಕೀಯ ಪರಿಸ್ಥಿತಿಗಳಿಂದಾಗಿ ಕನ್ನಡಿಗರೂ ಸಹ ತಾಯ್ನಾಡಿಗೆ ಮರಳುತ್ತಿದ್ದಾರೆ.
ಈ ಮಧ್ಯೆ, ಆಫ್ಘಾನಿಸ್ತಾನದಲ್ಲಿ ಭಾರತೀಯ ಮೂಲದ ಸಿಖ್ಖರು ಸಹ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದರು. ಅವರೂ ಸಹ ಬಹುತೇಕ ವಾಪಸಾಗಿದ್ದಾರೆ. ಹಾಗೆ ವಾಪಸು ಬರುವಾಗ ತಮ್ಮ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹೀಬ್ನ ಮೂರು ಪುಸ್ತಕಗಳನ್ನೂ ಭಾರತಕ್ಕೆ ತಂದಿದ್ದಾರೆ.
ಕಾಬೂಲ್‌ನಿಂದ ಭಾರತಕ್ಕೆ ಬಂದ ಅಫ್ಘಾನಿಸ್ತಾನದ ಸಿಖ್ಖರು ಈ ಬೃಹತ್ ಗ್ರಂಥವನ್ನು ತಂದಿದ್ದಾರೆ. ಇದಕ್ಕೆ ನರವಾದ ಭಾರತ ಸರ್ಕಾರಕ್ಕೆ ಸಿಖ್ ಸಮುದಾಯಸ್ಥರು ಧನ್ಯವಾದ ತಿಳಿಸಿದ್ದಾರೆ. ಭಾರತೀಯ ವಾಯುಪಡೆಯು ತನ್ನ ವಿಮಾನಗಳಲ್ಲಿ ಯುದ್ಧೋಪಾದಿಯಲ್ಲಿ ಅಫ್ಘಾನಿಸ್ತಾನದಲ್ಲಿದ್ದ 46 ಭಾರತೀಯರನ್ನು ಹೊತ್ತು ತಂದಿದೆ.
#WATCH | Three Sri Guru Granth Sahib being brought to India from Afghanistan's Kabul, along with stranded Indian nationals and 46 Afghan Hindus & Sikhs, on an Indian Air Force aircraft.
(Video Source: Puneet Singh Chandhok, President, Indian World Forum) pic.twitter.com/CUDYavSM2X
— ANI (@ANI) August 23, 2021
(Three Sri Guru Granth Sahib brought to India from Kabul on Indian Air Force aircraft)
Published On - 12:30 pm, Mon, 23 August 21