ಮೊದಲು ಅಮೆರಿಕಾವನ್ನು ಸುರಕ್ಷಿತವಾಗಿಡುತ್ತೇವೆ, ಆಫ್ಘನ್​ಗೆ ಈಗಾಗಲೇ ಕೋಟಿಗಟ್ಟಲೆ ಹಣ ಸುರಿದಾಗಿದೆ: ಜೋ ಬೈಡನ್​

| Updated By: Skanda

Updated on: Sep 01, 2021 | 7:37 AM

ಅಫ್ಘಾನಿಸ್ತಾನದ ರಾಷ್ಟ್ರಪತಿ ದೇಶಬಿಟ್ಟು ಓಡಿ ಹೋದರು. ರಾಷ್ಟ್ರಪತಿ ಓಡಿಹೋಗಿದ್ದರಿಂದ ಕಾಬೂಲ್‌ನಲ್ಲಿ ಅರಾಜಕತೆ ಸೃಷ್ಟಿಯಾಯಿತು. ನಾವು ಅಫ್ಘಾನಿಸ್ತಾನಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಈಗಲೂ ಆಫ್ಘನ್ ಮಹಿಳೆಯರು, ಮಕ್ಕಳಿಗೆ ಅಗತ್ಯ ಸಹಕಾರ ನೀಡುತ್ತೇವೆ: ಜೋ ಬೈಡನ್​

ಮೊದಲು ಅಮೆರಿಕಾವನ್ನು ಸುರಕ್ಷಿತವಾಗಿಡುತ್ತೇವೆ, ಆಫ್ಘನ್​ಗೆ ಈಗಾಗಲೇ ಕೋಟಿಗಟ್ಟಲೆ ಹಣ ಸುರಿದಾಗಿದೆ: ಜೋ ಬೈಡನ್​
ಜೋ ಬೈಡನ್​
Follow us on

ತಾಲಿಬಾನ್​ ಕೈವಶವಾಗಿರುವ ಅಫ್ಘಾನಿಸ್ತಾನದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆದುಕೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್​, ಆಫ್ಘನ್‌ನಿಂದ ನಮ್ಮ ಸೇನೆ ವಾಪಸ್‌ ಕರೆಸಿಕೊಂಡಿರುವ ಹೊಣೆ ಹೊರುತ್ತೇನೆ. 2 ದಶಕಗಳಲ್ಲಿ ಆಪ್ಘನ್‌ನಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. 1,400 ಅಮೆರಿಕಾ ಯೋಧರು ಹುತಾತ್ಮರಾಗಿದ್ದಾರೆ, 44 ಸಾವಿರಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಅಫ್ಘಾನಿಸ್ತಾನಕ್ಕಾಗಿಯೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ನಾವು ಮೊದಲು ಅಮೆರಿಕಾವನ್ನು ಸುರಕ್ಷಿತವಾಗಿಡಲು ಬಯಸುತ್ತೇವೆ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಅಮೆರಿಕಾದ ಕಡೆಯಿಂದ ಆಫ್ಘನ್ ಮಿಷನ್ ಅಂತ್ಯವಾಗಿದೆ. ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಾಕಷ್ಟು ಭ್ರಷ್ಟಾಚಾರವಿತ್ತು. ಅಫ್ಘಾನಿಸ್ತಾನದ ರಾಷ್ಟ್ರಪತಿ ದೇಶಬಿಟ್ಟು ಓಡಿ ಹೋದರು. ರಾಷ್ಟ್ರಪತಿ ಓಡಿಹೋಗಿದ್ದರಿಂದ ಕಾಬೂಲ್‌ನಲ್ಲಿ ಅರಾಜಕತೆ ಸೃಷ್ಟಿಯಾಯಿತು. ನಾವು ಅಫ್ಘಾನಿಸ್ತಾನಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದೇವೆ. ಈಗಲೂ ಆಫ್ಘನ್ ಮಹಿಳೆಯರು, ಮಕ್ಕಳಿಗೆ ಅಗತ್ಯ ಸಹಕಾರ ನೀಡುತ್ತೇವೆ ಎಂದು ತಿಳಿಸಿದ್ದಾರೆ.

2001ರಿಂದಲೂ ತಾಲಿಬಾನ್ ಸಂಘಟನೆ ಬಲಿಷ್ಠಗೊಳ್ಳುತ್ತಿತ್ತು. ತಾಲಿಬಾನ್ ಸಂಘಟನೆಯ ಸೈನ್ಯದ ಬಲ ಸಾಕಷ್ಟಿದೆ. ಆಫ್ಘನ್ ಭಯೋತ್ಪಾದನೆ ಪ್ರಚೋದನೆಗೆ ಬಳಕೆ ಆಗದಿರಲಿ ಎಂದು ಆಶಿಸುತ್ತೇವೆ. ಆಫ್ಘನ್‌ನಿಂದ ನಮ್ಮ ಸೇನೆ ವಾಪಸ್‌ ಕರೆಸಿಕೊಂಡಿರುವ ಹೊಣೆ ಹೊರುತ್ತೇನೆ. ನಾವು ಮೊದಲು ಅಮೆರಿಕಾವನ್ನು ಸುರಕ್ಷಿತವಾಗಿಡಲು ಬಯಸುವ ಕಾರಣ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

ಒಳಗೆ ಬರಲು ಬಿಡುತ್ತೇವೆ, ಹೊರ ಹೋಗುವುದು ಸಾಧ್ಯವಿಲ್ಲ: ತಾಲಿಬಾನಿಗಳಿಗೆ ಎಚ್ಚರಿಕೆ
ಇತ್ತ, ಅಫ್ಘಾನಿಸ್ತಾನದಲ್ಲಿ ಪಂಜ್​ಶೀರ್ ಪ್ರಾಂತ್ಯದ ಮೇಲೆ ದಾಳಿಗೆ ಯತ್ನಿಸಿದ 41 ತಾಲಿಬಾನಿಗಳ ಹತ್ಯೆಯಾಗಿದ್ದು, ಉತ್ತರ ಮೈತ್ರಿ ಪಡೆಯಿಂದ ತಾಲಿಬಾನಿಗಳ ಹತ್ಯೆಯಾಗಿದೆ. 20 ಮಂದಿ ತಾಲಿಬಾನ್ ಉಗ್ರರನ್ನು ಸೆರೆ ಹಿಡಿದ ಉತ್ತರ ಮೈತ್ರಿ ಪಡೆ ತಾಲಿಬಾನಿಗಳ ವಿರುದ್ಧ ಸೆಟೆದು ನಿಂತಿದೆ. ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿರುವ ಅಲೈಯನ್ಸ್ ಕಮ್ಯಾಂಡರ್ ಹಸೀಬ್, ನಾವು ನಿಮ್ಮನ್ನು ಪಂಜ್​ಶೀರ್ ಪ್ರಾಂತ್ಯದೊಳಕ್ಕೆ ಬರಲು ಬಿಡುತ್ತೇವೆ. ಆದರೆ ಹೊರಹೋಗಲು ಬಿಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

ಪಂಜ್​ಶೀರ್ ಪ್ರಾಂತ್ಯದ ಮೇಲೆ ಬೇರೆ ಬೇರೆ ಕಡೆಗಳಿಂದ ತಾಲಿಬಾನ್ ದಾಳಿ ಮಾಡುತ್ತಿದ್ದು, ನಿನ್ನೆಯಿಂದ ದಾಳಿ ನಡೆಯುತ್ತಿದ್ದರೂ ಆಕ್ರಮಣ ಸಾಧ್ಯವಾಗಿಲ್ಲ. ಖಾವಕ್, ಪರ್ಯನ್ ಜಿಲ್ಲೆಯ ಕಡೆಯಿಂದ ತಾಲಿಬಾನ್ ದಾಳಿ ಮಾಡಿದ್ದು, ಪ್ರತಿದಾಳಿಯಲ್ಲಿ ಬಹಳಷ್ಟು ಮಂದಿ ತಾಲಿಬಾನ್ ಉಗ್ರರ ಸಾವಿಗೀಡಾಗಿ, ಹಲವರು ಗಾಯಗೊಂಡಿದ್ದಾರೆ. ಬೆಟ್ಟಗಳ ಮೇಲ್ಭಾಗದಲ್ಲಿರುವ ಉತ್ತರ ಮೈತ್ರಿ ಪಡೆ ಕೆಳಭಾಗದಲ್ಲಿರುವ ಉಗ್ರರ ಮೇಲೆ ದಾಳಿ ನಡೆಸುತ್ತಿದೆ.

ಇದನ್ನೂ ಓದಿ:
ಅಫ್ಘಾನಿಸ್ತಾನದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಮಾಡುತ್ತೇವೆ ಅಂತ ಭರವಸೆ ನೀಡಿದ ತಾಲಿಬಾನ್ ನಾಯಕರು 

ಅಮೆರಿಕ ಪಡೆಯ ನಿರ್ಗಮನದ ನಂತರ ವ್ಯಕ್ತಿಯೊಬ್ಬನನ್ನು ಹೆಲಿಕಾಪ್ಟರ್​​ಗೆ ನೇತು ಹಾಕಿ ಹಾರಾಟ ನಡೆಸಿದ ತಾಲಿಬಾನ್

(US President Joe Biden says their first preference is America statement comes out as US Military force left Afghanistan)