ಕಾಬೂಲ್: ಅಫ್ಘಾನಿಸ್ತಾನದ (Afghanistan) ಪಕ್ತಿಯಾ ಪ್ರಾಂತ್ಯದಲ್ಲಿ ಸಂಗೀತಗಾರನ ಮುಂದೆಯೇ ತಾಲಿಬಾನ್ (Taliban) ಉಗ್ರರು ಸಂಗೀತ ವಾದ್ಯವನ್ನು ಸುಟ್ಟುಹಾಕಿದ ವಿಡಿಯೊವನ್ನು ಆಫ್ಘನ್ ಪತ್ರಕರ್ತರೊಬ್ಬರು ಪೋಸ್ಟ್ ಮಾಡಿದ್ದಾರೆ. ವಾದ್ಯ ಉರಿಯುತ್ತಿದ್ದಂತೆ ಅದನ್ನು ನೋಡಿ ಸಂಗೀತಗಾರ ಕಣ್ಣೀರಿಡುತ್ತಿರುವುದು ವಿಡಿಯೊದಲ್ಲಿದೆ. ಅಫ್ಘಾನಿಸ್ತಾನದ ಹಿರಿಯ ಪತ್ರಕರ್ತ ಅಬ್ದುಲ್ಹಕ್ ಒಮೆರಿ(Abdulhaq Omeri) ಅವರು ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬಂಧೂಕು ಹಿಡಿದ ವ್ಯಕ್ತಿಯೊಬ್ಬ ಕಣ್ಣೀರಿಡುವ ಸಂಗೀತಗಾರನನ್ನು ನೋಡಿ ನಗುತ್ತಿರುವುದನ್ನು ತೋರಿಸುತ್ತದೆ ಮತ್ತು ಇನ್ನೊಬ್ಬರು ಅವನ “ದಯನೀಯ ಸ್ಥಿತಿಯನ್ನು” ವಿಡಿಯೊ ಮಾಡುತ್ತಿರುವುದು ಕಾಣುತ್ತಿದೆ. “ತಾಲಿಬಾನ್, ಸ್ಥಳೀಯ ಸಂಗೀತಗಾರ ಅಳುತ್ತಿದ್ದಂತೆ ಸಂಗೀತಗಾರನ ಸಂಗೀತ ವಾದ್ಯವನ್ನು ಸುಟ್ಟುಹಾಕಿದರು. ಈ ಘಟನೆಯು ಅಫ್ಘಾನಿಸ್ತಾನದ ಝಜೈಅರುಬ್ ಜಿಲ್ಲೆಯ ಪಕ್ತಿಯಾ ಪ್ರಾಂತ್ಯ ಸಂಭವಿಸಿದೆ ಎಂದು ಒಮೆರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಈ ಹಿಂದೆ ತಾಲಿಬಾನ್‌ಗಳು ವಾಹನಗಳಲ್ಲಿ ಸಂಗೀತವನ್ನು ನಿಷೇಧಿಸಿದ್ದರು. ಇದಲ್ಲದೆ ತಾಲಿಬಾನ್, ಮದುವೆಗಳಲ್ಲಿ ಲೈವ್ ಸಂಗೀತವನ್ನು ನಿಷೇಧಿಸಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಾಲ್‌ಗಳಲ್ಲಿ ಆಚರಿಸಲು ಆದೇಶಿಸಿದೆ ಎಂದು ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದ ಹೋಟೆಲ್‌ನ ಮಾಲೀಕರು ಸ್ಪುಟ್ನಿಕ್‌ಗೆ ತಿಳಿಸಿದರು.
Video : Taliban burn musician’s musical instrument as local musicians weeps. This incident happened in #ZazaiArub District #Paktia Province #Afghanistan . pic.twitter.com/zzCp0POeKl
— Abdulhaq Omeri (@AbdulhaqOmeri) January 15, 2022
ಇತ್ತೀಚೆಗೆ ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದ ಬಟ್ಟೆ ಅಂಗಡಿಗಳಲ್ಲಿ “ಮಾನೆಕ್ವಿನ್‌ಗಳ” ಶಿರಚ್ಛೇದಕ್ಕೆ ತಾಲಿಬಾನ್ ಆದೇಶಿಸಿದ್ದಾರೆ ಎಂದು ಆಫ್ಘನ್ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿದ ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ತಿಳಿಸಿದೆ.
ಬಟ್ಟೆ ಅಂಗಡಿಗಳಲ್ಲಿ ಬಳಸುವ “ಮಾನೆಕ್ವಿನ್” ಗಳನ್ನು ಷರಿಯಾ ಕಾನೂನಿನ ಉಲ್ಲಂಘನೆ ಎಂದು ಹೇಳುತ್ತದೆ ತಾಲಿಬಾನ್. ಕಾಬೂಲ್‌ನ ಬೀದಿಗಳಲ್ಲಿ ಇಂತಹ ಘಟನೆಗಳು ಮತ್ತೆ ಕಾಣಿಸಿಕೊಳ್ಳಲಾರಂಭಿಸಿವೆ. ತಾಲಿಬಾನ್‌ನ ಸದ್ಗುಣ ಪ್ರಚಾರ ಮತ್ತು ಉಪಟಳ ತಡೆಗಟ್ಟುವಿಕೆ ಸಚಿವಾಲಯವು ಅಫ್ಘಾನಿಸ್ತಾನದ ಟಿವಿ ಚಾನೆಲ್‌ಗಳಿಗೆ ನಾಟಕಗಳು ಮತ್ತು ಸೋಪ್ ಒಪೆರಾಗಳಲ್ಲಿ ಮಹಿಳೆಯರನ್ನು ತೋರಿಸುವುದನ್ನು ನಿಲ್ಲಿಸುವಂತೆ ಕರೆ ನೀಡಿದ್ದು, ಧಾರ್ಮಿಕ ಮಾರ್ಗಸೂಚಿಗಳನ್ನು ಅನುಸರಿಸಲು ಹೇಳಿತ್ತು.
ಈ ಹೊಸ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸಲಾಗುವುದಿಲ್ಲ ಎಂದು ಗುಂಪು ಹೇಳಿದ್ದರೂ, ಈ ಗುಂಪು ತಮ್ಮ ಕಠಿಣವಾದ ಷರಿಯಾ ಕಾನೂನನ್ನು ದೇಶದಲ್ಲಿ ಜಾರಿಗೆ ತರಲು ಬದ್ಧವಾಗಿದೆ ಎಂದು ಇತಿಹಾಸವು ತೋರಿಸಿದೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.
20 ವರ್ಷಗಳ ನಂತರ ತಾಲಿಬಾನ್ ಮತ್ತೊಮ್ಮೆ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿರುವುದರಿಂದ, ಭಯೋತ್ಪಾದಕ ಗುಂಪಿನ ಆಡಳಿತದಲ್ಲಿ ಅಫ್ಘಾನ್ ಮಹಿಳೆಯರು ಅನಿಶ್ಚಿತ ಭವಿಷ್ಯವನ್ನು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ನಂಬಿದ್ದಾರೆ.
ಇದನ್ನೂ ಓದಿ: ಟೆಕ್ಸಾಸ್ ಯಹೂದಿ ಮಂದಿರದಲ್ಲಿದ್ದ ಒತ್ತೆಯಾಳುಗಳ ಬಿಡುಗಡೆ; ಅವರು ಸುರಕ್ಷಿತರಾಗಿದ್ದಾರೆ ಎಂದ ಗವರ್ನರ್ ಗ್ರೆಗ್ ಅಬಾಟ್