ಬಾಂಗ್ಲಾದೇಶದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ; ಚಿನ್ನಾಭರಣ, ಹಣ ದೋಚಿ ಪರಾರಿ

| Updated By: ಸುಷ್ಮಾ ಚಕ್ರೆ

Updated on: Oct 30, 2021 | 5:19 PM

ಇಂಡಸ್ ನದಿ ಬಳಿ ಇರುವ ಹಿಂದೂ ದೇವಿಯ ದೇವಾಲಯಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಹೋಗಿರುವುದಾಗಿ ಕೋಟ್ರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಬಾಂಗ್ಲಾದೇಶದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ; ಚಿನ್ನಾಭರಣ, ಹಣ ದೋಚಿ ಪರಾರಿ
ದಾಳಿಗೊಳಗಾದ ಪಾಕಿಸ್ತಾನದ ಹಿಂದೂ ದೇವಿಯ ದೇವಸ್ಥಾನ
Follow us on

ಇಸ್ಲಾಮಾಬಾದ್: ನವರಾತ್ರಿ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಮಾಡುತ್ತಿದ್ದಾಗಲೇ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿದ್ದು ವಿಶ್ವಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಇದೀಗ ಪಾಕಿಸ್ತಾನದಲ್ಲಿ ಕೂಡ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಲಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೋಟ್ರಿ ಬಳಿ ಇರುವ ದೇವಿಯ ಮಂದಿರಕ್ಕೆ ನುಗ್ಗಿದ ಕಳ್ಳರು ದೇವಾಲಯವನ್ನು ಅಪವಿತ್ರಗೊಳಿಸಿ ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿದ್ದಾರೆ.

ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಂಡಸ್ ನದಿ ತೀರದ ಬಳಿ ಇರುವ ಹಿಂದೂ ದೇವಿಯ ದೇವಾಲಯಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಹೋಗಿರುವುದಾಗಿ ಕೋಟ್ರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಆ ಹಿಂದೂ ದೇವಾಲಯದ ಉಸ್ತುವಾರಿ ವಹಿಸಿಕೊಂಡಿರುವ ಭಗವಾನ್ ದಾಸ್ ದೂರು ನೀಡಿದ್ದಾರೆ.

ಈ ಹಿಂದೆ ಜನವರಿಯಲ್ಲಿಯೂ ಗುರು ಬಾಲಿಮಾಕ್ ದೇವಾಲಯದಲ್ಲಿ ಕೂಡ ಚಿನ್ನಾಭರಣ ಮತ್ತು ದೇವರ ಕಿರೀಟವನ್ನು ದೋಚಲಾಗಿತ್ತು. ಇದೀಗ ಮತ್ತೆ ಅದೇ ದೇವಸ್ಥಾನದಲ್ಲಿ ಭಕ್ತರು ಕಾಣಿಕೆಯಗಿ ನೀಡಿದ್ದ ಚಿನ್ನಾಭರಣ ಹಾಗೂ ಸುಮಾರು 25 ಸಾವಿರ ರೂ. ಹಣ ಕಳವು ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ಗೂಂಡಾಗಳು ದಾಳಿ ನಡೆಸಿ ಮೂವರನ್ನು ಹತ್ಯೆ ಮಾಡಿದ್ದರು. ಘಟನೆ ನಡೆದಿದೆ. ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಪೂಜೆ ನಡೆಸುತ್ತಿದ್ದಾಗ ಅಪರಿಚಿತರ ಗುಂಪೊಂದು ದೇವಸ್ಥಾನದ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಹಿಂದೂ ದೇವಾಲಯಗಳ ಎದುರು ಜನರು ಹಾಗೂ ಪೊಲೀಸರ ನಡುವೆ ಗಲಾಟೆ ನಡೆದಿತ್ತು.

ಇದನ್ನೂ ಓದಿ: ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿದವರನ್ನು ಹುಡುಕಿ, ಶಿಕ್ಷೆ ನೀಡುತ್ತೇವೆ; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭರವಸೆ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದಾಳಿ; ಮೂವರು ಸಾವು