ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದ ಪ್ರಧಾನಿ ಮೋದಿ; ಭಾರತಕ್ಕೆ ಆಹ್ವಾನ
ನಿನ್ನೆ ಬೆಳಗ್ಗೆ ರೋಮ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದರು. ಈ ವೇಳೆ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಇದ್ದರು.
ರೋಮ್ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ವ್ಯಾಟಿಕನ್ ನಗರಕ್ಕೆ ತೆರಳಿ, ಅಲ್ಲಿ ಕ್ರೈಸ್ತರ ಪರಮೋಚ್ಛ ಧರ್ಮಗುರು (ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ) ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದರು. ಹಾಗೇ, ಭಾರತಕ್ಕೆ ಬರುವಂತೆ ಅವರಿಗೆ ಆಮಂತ್ರಣ ನೀಡಿದರು. ಇವರಿಬ್ಬರ ಮಧ್ಯೆ 20 ನಿಮಿಷಗಳ ಮಾತುಕತೆ ನಿಗದಿಯಾಗಿತ್ತು. ಆದರೆ ಸುಮಾರು 1 ತಾಸು ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ಅವರು ಇಂದು, ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಹೋರಾಡುವ ಬಗ್ಗೆ, ಬಡತನ ನಿರ್ಮೂಲನ ಮಾಡಲು ಇರುಬಹುದಾದ ವಿಧಾನಗಳ ಕುರಿತಾಗಿ ಚರ್ಚಿಸಿದ್ದಾರೆ. ಈ ಭೂಮಿ ಮೇಲೆ ಇನ್ನಷ್ಟು ಉತ್ತಮವಾಗಿ ಜೀವನ ನಡೆಸುವ ಕ್ರಮಗಳ ಬಗ್ಗೆಯೂ ವ್ಯಾಪಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಂದಿನ ಪೋಪ್ ಜಾನ್ ಪೌಲ್ II ಭೇಟಿ ನೀಡಿದ್ದರು. ಅದಾದ ಮೇಲೆ ಪೋಪ್ ಭೇಟಿ ಈಗಲೇ ಆಗಿದೆ. ಹಾಗೇ, ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ರ ಮೊದಲ ಭೇಟಿಯಾಗಿದೆ. ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ನಾನಿಂದು ಪೋಪ್ ಫ್ರಾನ್ಸಿಸ್ ಅವರನ್ನು ಇಂದು ಭೇಟಿಯಾಗಿ, ವಿವಿಧ ವಿಷಯಗಳನ್ನು ಚರ್ಚಿಸುವ ಅವಕಾಶ ಸಿಕ್ಕಿತು ಎಂದು ಹೇಳಿದ್ದಾರೆ.
Had a very warm meeting with Pope Francis. I had the opportunity to discuss a wide range of issues with him and also invited him to visit India. @Pontifex pic.twitter.com/QP0If1uJAC
— Narendra Modi (@narendramodi) October 30, 2021
ನಿನ್ನೆ ಬೆಳಗ್ಗೆ ರೋಮ್ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ರನ್ನು ಭೇಟಿಯಾದರು. ಈ ವೇಳೆ ಅವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಇದ್ದರು. ಅಲ್ಲಿಂದ ಹೊರಡುವಾಗ ಪೋಪ್ ಫ್ರಾನ್ಸಿಸ್ರನ್ನು ಭಾರತಕ್ಕೆ ಬರುವಂತೆ ಪ್ರಧಾನಿ ಮೋದಿ ಆಮಂತ್ರಿಸಿದ್ದಾರೆ. ಈ ವ್ಯಾಟಿಕನ್ ಸಿಟಿ ರೋಮ್ನಿಂದ ಸುತ್ತುವರಿಯಲ್ಪಟ್ಟ ರಾಜ್ಯವಾಗಿದ್ದು, ರೋಮನ್ ಕ್ಯಾಥೋಲಿಕ್ ಚರ್ಚ್ನ ಪ್ರಧಾನ ಕಚೇರಿಯಿದೆ.
ಇಂದು ಸಂಜೆ ನರೇಂದ್ರ ಮೋದಿಯವರು ಟರ್ಮೆ ಡಿ ಡಿಯೊಕ್ಲೆಜಿಯಾನೊಗೆ ತೆರಳಲಿದ್ದಾರೆ. ಅದಾದ ಬಳಿಕ ಜಿ20 ನಾಯಕರೊಂದಿಗೆ ಔತಣಕೂಟ ನಡೆಯಲಿದೆ. ಜಿ20 ನಾಯಕರೊಂದಿಗೆ ನರೇಂದ್ರ ಮೋದಿ ಕೊವಿಡ್ 19 ಸಾಂಕ್ರಾಮಿ, ಆರ್ಥಿಕ ಪರಿಸ್ಥಿತಿ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ ಮತ್ತಿತರ ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ. ಹಾಗೇ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಜತೆ ಸಭೆ ನಡೆಸಲಿದ್ದು, ಇಂಡೋನೇಷ್ಯಾದ ಅಧ್ಯಕ್ಷ ಜೊಕೊ ವಿಡೋಡೊರನ್ನು ಭೇಟಿಯಾಗುವರು. ಅದರೊಂದಿಗೆ ಸಿಂಗಪುರ ಪ್ರಧಾನಿ ಲೀ ಹೊಸೈನ್ ಲೂಂಗ್ರನ್ನು ಭೇಟಿಯಾಗುವ ನಿರೀಕ್ಷೆ ಇದೆ ಎಂದೂ ಹೇಳಲಾಗಿದೆ.
ಇದನ್ನೂ ಓದಿ: ತಾಲಿಬಾನ್ ಏಜೆಂಟ್ನಂತೆ ವರ್ತಿಸಿದ ಪತ್ರಕರ್ತ: ಖಡಕ್ ಉತ್ತರ ನೀಡಿದ ಅಫ್ಘಾನ್ ನಾಯಕ ನಬಿ
Published On - 2:54 pm, Sat, 30 October 21