ತಾಲಿಬಾನ್ ಏಜೆಂಟ್​ನಂತೆ ವರ್ತಿಸಿದ ಪತ್ರಕರ್ತ: ಖಡಕ್ ಉತ್ತರ ನೀಡಿದ ಅಫ್ಘಾನ್ ನಾಯಕ ನಬಿ

Mohammad Nabi: ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಫ್ಘಾನ್​ ನಾಯಕನಿಗೆ, ಅಫ್ಘಾನಿಸ್ತಾನ್ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡೂ ಪಂದ್ಯಗಳಲ್ಲಿ ನಿಮ್ಮ ತಂಡದ ಪ್ರದರ್ಶನ ಉತ್ತಮವಾಗಿದೆ. ನಿಮ್ಮ ದೇಶದಲ್ಲಿ ಸರ್ಕಾರ ಬದಲಾಗಿವೆ.

ತಾಲಿಬಾನ್ ಏಜೆಂಟ್​ನಂತೆ ವರ್ತಿಸಿದ ಪತ್ರಕರ್ತ: ಖಡಕ್ ಉತ್ತರ ನೀಡಿದ ಅಫ್ಘಾನ್ ನಾಯಕ ನಬಿ
Mohammad Nabi
Follow us
TV9 Web
| Updated By: ಝಾಹಿರ್ ಯೂಸುಫ್

Updated on: Oct 30, 2021 | 2:46 PM

ಶುಕ್ರವಾರ ನಡೆದ T20 ವಿಶ್ವಕಪ್‌ನ 24ನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಫ್ಘಾನಿಸ್ತಾನ್​ ತಂಡವು 5 ವಿಕೆಟ್‌ಗಳಿಂದ ಸೋಲನುಭವಿಸಿತು (PAK vs AFG T20 World Cup 2021). ಒಂದು ಹಂತದಲ್ಲಿ ಅಫ್ಘಾನ್​ ಪರ ವಾಲಿದ್ದ ಪಂದ್ಯವು 19ನೇ ಓವರ್‌ನಲ್ಲಿ ಆಸಿಫ್ ಅಲಿ ಸಿಡಿಸಿದ 4 ಸಿಕ್ಸರ್‌ಗಳೊಂದಿಗೆ ಪಾಕ್ ಪರ ತಿರುಗಿತು. ಅಂತಿಮವಾಗಿ ಪಾಕಿಸ್ತಾನ 5 ವಿಕೆಟ್​ಗಳ ಜಯ ಸಾಧಿಸಿತು. ಈ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಅಫ್ಘಾನ್​ ನಾಯಕ ಮೊಹಮ್ಮದ್ ನಬಿ (Mohammad Nabi) ಅವರಿಗೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದು ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಮೊಹಮ್ಮದ್ ನಬಿ ನೀಡಿದ ಉತ್ತರ ಭಾರೀ ವೈರಲ್ ಆಗಿದೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಅಫ್ಘಾನ್​ ನಾಯಕನಿಗೆ, ಅಫ್ಘಾನಿಸ್ತಾನ್ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡೂ ಪಂದ್ಯಗಳಲ್ಲಿ ನಿಮ್ಮ ತಂಡದ ಪ್ರದರ್ಶನ ಉತ್ತಮವಾಗಿದೆ. ನಿಮ್ಮ ದೇಶದಲ್ಲಿ ಸರ್ಕಾರ ಬದಲಾಗಿವೆ. ಹೀಗಾಗಿ ನೀವು ಹಿಂತಿರುಗಿದಾಗ ನಿಮ್ಮನ್ನು ಪ್ರಶ್ನಿಸಲಾಗುತ್ತದೆ ಅಥವಾ ಅಂತಹ ಒತ್ತಡವಿದೆಯೇ? ಎಂದು ಪತ್ರಕರ್ತ ನೇರವಾಗಿ ಪ್ರಶ್ನಿಸಿದ್ದಾನೆ. ಇಷ್ಟೇ ಅಲ್ಲದೆ ಅಫ್ಘಾನಿಸ್ತಾನದಲ್ಲಿ ಹೊಸ ಯುಗ ಪ್ರಾರಂಭವಾಗಿದೆ. ಈಗ ಪಾಕಿಸ್ತಾನದೊಂದಿಗೆ ಅಫ್ಘಾನಿಸ್ತಾನದ ಸಂಬಂಧಗಳು ಉತ್ತಮವಾಗಿವೆ. ಈ ಸಂಬಂಧಗಳ ಸುಧಾರಣೆ ಅಫ್ಘಾನಿಸ್ತಾನ ತಂಡವನ್ನು ಬಲಪಡಿಸುತ್ತದೆಯೇ? ಎಂದು ಮತ್ತೊಂದು ಪ್ರಶ್ನೆ ಎಸೆದರು.

ಈ ಪ್ರಶ್ನೆಗಳು ಮೂಡಿ ಬರುತ್ತಿದ್ದಂತೆ ಅತ್ತ ಅಫ್ಘಾನ್​ ನಾಯಕ ಮೊಹಮ್ಮದ್ ನಬಿ, ನಾವು ಕ್ರಿಕೆಟ್ ಬಗ್ಗೆ ಮಾತನಾಡೋಣ. ನಾವು ಇಲ್ಲಿಗೆ ಬಂದಿರುವುದು ಟಿ20 ವಿಶ್ವಕಪ್ ಆಡಲು. ಅದಕ್ಕಾಗಿ ಸಂಪೂರ್ಣ ತಯಾರಿಯೊಂದಿಗೆ ಬಂದಿದ್ದೇವೆ. ಎಲ್ಲಾ ರೀತಿಯ ಆತ್ಮವಿಶ್ವಾಸದಿಂದ ಇಲ್ಲಿಗೆ ಬಂದಿದ್ದೇವೆ. ಕ್ರಿಕೆಟ್‌ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಕೇಳಬಹುದು ಎಂದು ಖಾರವಾಗಿ ಉತ್ತರಿಸಿದರು.

ಇದಾಗ್ಯೂ ಪತ್ರಕರ್ತ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸುತ್ತಿದ್ದ. ಅತ್ತ ಕ್ರಿಕೆಟ್ ಹೊರತಾಗಿ ಮತ್ತೇನು ಮಾತಾಡಲ್ಲ ಎಂಬುದನ್ನು ನಬಿ ಸ್ಪಷ್ಟಪಡಿಸಿದರು. ಇಬ್ಬರ ನಡುವೆ ಜಟಾಪಟಿ ಶುರುವಾಗಲಿದೆ ಎಂದರಿತ ಪತ್ರಿಕಾಗೋಷ್ಠಿಯನ್ನು ನಿರ್ವಹಿಸುತ್ತಿದ್ದ ಐಸಿಸಿ ಅಧಿಕಾರಿ ಪತ್ರಕರ್ತನಿಗೆ ಇನ್ನೊಂದು ಪ್ರಶ್ನೆ ಕೇಳುವಂತೆ ಹೇಳಿದರು. ಆದರೆ ಪತ್ರಕರ್ತ ಅದಕ್ಕೆ ಒಪ್ಪಲಿಲ್ಲ. ಆ ಬಳಿಕ ನಬಿ ಅವರು ಪತ್ರಿಕಾಗೋಷ್ಠಿಯಿಂದ ನಿರ್ಗಮಿಸಿದರು.

ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಪತ್ರಕರ್ತ ತಾಲಿಬಾನಿಗಳ ಆಜೆಂಟ್​ನಂತೆ ವರ್ತಿಸುತ್ತಿದ್ದ ಎಂಬ ಟೀಕೆಗಳು ಕೇಳಿ ಬಂದಿವೆ. ಇದಕ್ಕಾಗಿಯೇ ಆತ ತಾಲಿಬಾನ್ ಸರ್ಕಾರ ಬಂದ ಬಳಿಕ ಅಫ್ಘಾನ್-ಪಾಕಿಸ್ತಾನ್ ಸಂಬಂಧ ಸುಧಾರಣೆಯಾಗಿದೆ ಎಂಬುದನ್ನು ಪದೇ ಪದೇ ಒತ್ತಿ ಹೇಳುತ್ತಿದ್ದ. ಇದಾಗ್ಯೂ ಮೊಹಮ್ಮದ್ ನಬಿ ಕ್ರಿಕೆಟ್ ಕುರಿತಾಗಿ ಪ್ರಶ್ನಿಸಲು ಕೇಳಿದಾಗಲೂ ಮತ್ತೆ ಪಾಕ್-ಅಫ್ಘಾನ್ ವಿಷಯವನ್ನು ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದ್ದ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: T20 World Cup 2021: ಸೆಮಿಫೈನಲ್ ಲೆಕ್ಕಾಚಾರ: ನ್ಯೂಜಿಲೆಂಡ್ ವಿರುದ್ದ ಟೀಮ್ ಇಂಡಿಯಾ ಗೆಲ್ಲಲೇಬೇಕು, ಯಾಕೆ ಗೊತ್ತಾ?

ಇದನ್ನೂ ಓದಿ: ICC T20 Batter Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಇಬ್ಬರ ಸ್ಥಾನ ಕುಸಿತ

ಇದನ್ನೂ ಓದಿ:  T20 World Cup 2021: ಹಿಂದೂಗಳ ಮುಂದೆ ನಮಾಜ್ ಮಾಡಿದ್ದು ಖುಷಿಯಾಯ್ತು ಎಂದ ಪಾಕ್ ಕ್ರಿಕೆಟಿಗ

(Mohammad Nabi Fumes at Journalist For Asking Question)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ