ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ನೂತನ ಪ್ರಧಾನಿ ಹುದ್ದೆಯನ್ನು ಯಾರು ಏರಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ. ನೂತನ ಪ್ರಧಾನಿಗಳ ರೇಸ್ನಲ್ಲಿ ಇನ್ಫೋಸಿಸ್ ಸಹಸ್ಥಾಪಕ ನಾರಾಯಣಮೂರ್ತಿ (Narayana Murthy) ಅವರ ಅಳಿಯ ರಿಷಿ ಸುನಕ್ (Rishi Sunak) ಹೆಸರು ಕೂಡ ಇದೆ. ಬ್ರಿಟನ್ನಲ್ಲಿ ಚಾನ್ಸಲರ್ ಹುದ್ದೆಗೆ ರಾಜೀನಾಮೆ ನೀಡಿರುವ ರಿಷಿ ಸುನಕ್ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದೀಗ ಇಂಗ್ಲೆಂಡ್ ಸರ್ಕಾರದಲ್ಲಿ ಬಿಕ್ಕಟ್ಟು ಎದುರಾಗಿದೆ.
ಐಟಿವಿ ನ್ಯೂಸ್ ಪ್ರಕಾರ, ರಿಷಿ ಸುನಕ್ ಮಂಗಳವಾರ ಬ್ರಿಟನ್‌ನ ಚಾನ್ಸೆಲರ್‌ನ ಅಧಿಕೃತ ನಿವಾಸವಾದ ಸಂಖ್ಯೆ 11 ಡೌನಿಂಗ್ ಸ್ಟ್ರೀಟ್‌ನಿಂದ ಹೊರಟಾಗಿನಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ ಲಂಡನ್‌ನಲ್ಲಿರುವ ಅವರ ಮನೆಯ ಹೊರಗೆ ಕಾಯುತ್ತಿದ್ದ ಪತ್ರಕರ್ತರಿಗೆ ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಚಹಾ ನೀಡುವ ಮೂಲಕ ಗಮನಸೆಳೆದಿದ್ದಾರೆ.
ಸಂಸತ್ಗೆ ರಾಜೀನಾಮೆ ನೀಡಿದ ನಂತರ ಕೆನ್ಸಿಂಗ್ಟನ್‌ನಲ್ಲಿರುವ ರಿಷಿ ಸುನಕ್ ಅವರ ಐಷಾರಾಮಿ ಅಪಾರ್ಟ್‌ಮೆಂಟ್‌ನ ಹೊರಗೆ ಹಲವಾರು ಪತ್ರಕರ್ತರು ಮತ್ತು ಛಾಯಾಗ್ರಾಹಕರು ಜಮಾಯಿಸಿದ್ದರು. ಬಿಲಿಯನೇರ್ ಇನ್ಫೋಸಿಸ್ ಸಹಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಹಾಗೂ ರಿಷಿ ಸುನಕ್ ಅವರ ಪತ್ನಿಯಾಗಿರುವ ಅಕ್ಷತಾ ಮೂರ್ತಿ ಟ್ರೇಯಲ್ಲಿ ಚಹಾ ಮತ್ತು ಬಿಸ್ಕತ್ತುಗಳನ್ನು ತಂದು ಪತ್ರಕರ್ತರಿಗೆ ನೀಡಿದ್ದಾರೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಚುನಾವಣೆ: ಅಭ್ಯರ್ಥಿಯಾಗಿ ಕನ್ಸರ್ವೇಟಿವ್ ಪಕ್ಷದ ರಿಷಿ ಸುನಕ್ ಕಣಕ್ಕೆ
ITV ನ್ಯೂಸ್ ಟ್ವಿಟ್ಟರ್‌ನಲ್ಲಿ ಇದರ ಕೆಲವು ಫೋಟೋಗಳನ್ನು ಹಂಚಿಕೊಂಡಿದೆ. ಅಕ್ಷತಾ ಮೂರ್ತಿ ಟೀ ಮತ್ತು ಬಿಸ್ಕತ್ನ ಟ್ರೇಯನ್ನು ಮೇಜಿನ ಮೇಲೆ ಇರಿಸಿ ಮನೆಯೊಳಗೆ ಹೋಗಿದ್ದಾರೆ. ಅಕ್ಷತಾ ಮೂರ್ತಿ ಎಮ್ಮಾ ಲೇಸಿ ಮಗ್‌ಗಳಲ್ಲಿ ಚಹಾವನ್ನು ನೀಡಿದ್ದಾರೆ. ಅದರ ಬೆಲೆ 38 ಪೌಂಡ್ (ಸುಮಾರು 3,600 ರೂ.) ಆಗಿದೆ. ಇಂಗ್ಲೆಂಡ್ ಜೀವನ ವೆಚ್ಚದ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ಈ ಸಮಯದಲ್ಲಿ ಇಷ್ಟು ದುಬಾರಿ ವೆಚ್ಚದ ಕಪ್ಗಳನ್ನು ಖರೀದಿಸಿ, ಚಹಾ ನೀಡಿರುವುದು ಕೂಡ ಇದೀಗ ಚರ್ಚೆಯ ವಿಷಯವಾಗಿದೆ.
☕️ After his shock resignation last night, Rishi Sunak’s wife Akshata Murthy brings out a round of tea for journalists waiting for him to show his face. pic.twitter.com/Yt8ldN2aX9
— ITV News Calendar (@itvcalendar) July 6, 2022
ಆ ಮಗ್‌ನ ಬೆಲೆಯಿಂದ ಒಂದು ಕುಟುಂಬ 2 ದಿನಗಳವರೆಗೆ ಜೀವನ ನಡೆಸಬಹುದು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
.@RishiSunak‘s wife Akshata Murty makes round of tea for journalists as ex-chancellor lies low https://t.co/EVqT39CdmW
— ITV News Politics (@ITVNewsPolitics) July 6, 2022
ಇದನ್ನೂ ಓದಿ: ರಷ್ಯಾದಲ್ಲಿ ಇನ್ಫೋಸಿಸ್ ಕಾರ್ಯನಿರ್ವಹಣೆ; ನಾರಾಯಣ ಮೂರ್ತಿ ಅಳಿಯ, ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ಗೆ ಕಠಿಣ ಪ್ರಶ್ನೆ
Business as usual, serving tea, for Akshata Murty, part-owner of @infosys, who is trying to salvage her politician husband’s, @RishiSunak‘s, image from being ruined by media for his role in doling out ? during CoVID19 to colleagues favoured contractors & firms without oversight: pic.twitter.com/2CtNOkBUvs
— °Apart (@DegreesApart) July 6, 2022
ಇನ್ನು ಕೆಲವರು ಇದೊಂದು ಫೋಟೋಶಾಪ್ ಮಾಡಲಾದ ಫೋಟೋ ಎಂದು ಟೀಕಿಸಿದ್ದಾರೆ. ಅಷ್ಟು ಪತ್ರಕರ್ತರು ಹೊರಗೆ ಕಾಯುತ್ತಿರುವಾಗ ಒಂದೇ ಕಪ್ ಚಹಾ ತೆಗೆದುಕೊಂಡು ಹೋಗಲು ಹೇಗೆ ಸಾಧ್ಯ? ಇದು ಫೋಟೋಶಾಪ್ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ.
That woman has clearly never carried a tray before
Or made a cup of tea
Billionaires don’t do anything without a massive ulterior motive. It wasn’t cold or raining yesterday https://t.co/2cg4Zt6jwk
— Cecilia Is Smart ? (@ceciliaissmart) July 7, 2022
ರಿಷಿ ಸುನಕ್ ಅವರು ಜೀವನ ವೆಚ್ಚದ ಬಿಕ್ಕಟ್ಟಿನ ಮಧ್ಯದಲ್ಲಿ ಬ್ರಿಟನ್ನರಿಗೆ ತೆರಿಗೆಗಳನ್ನು ಹೆಚ್ಚಿಸಿದ್ದಕ್ಕಾಗಿ ಜನರ ಆಕ್ರೋಶ ಎದುರಿಸಿದ್ದರು.
Published On - 10:12 am, Sat, 9 July 22