ಇತ್ತ ಕರ್ನಾಟಕದ ಜನ ರಮೇಶ್ ಜಾರಕಿಹೊಳಿ ಅವರ ಸಿಡಿ ಬಗ್ಗೆ ಕೇಳಿಕೇಳಿ ಸುಸ್ತಾಗಿದ್ದರೆ ಅತ್ತ ಅಮೆರಿಕದಿಂದ ಇಂಥದೇ ಕುತೂಹಲದ ಸುದ್ದಿ ಬಂದಿದೆ. ಅಮೆರಿಕದ ಮಹಿಳೆಯಬ್ಬಳು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆ ಲೈಂಗಿಕ ಸಂಬಂಧ ಇತ್ತು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾಳೆ. ಬ್ರಿಟನ್ನ ಸುದ್ದಿತಾಣ ಮಿರರ್ಗೆ ನೀಡಿದ ಸಂದರ್ಶನದಲ್ಲಿ ಅಮೇರಿಕದ ಮಹಿಳೆ ಜೆನ್ನಿಫರ್ ಕ್ವೇರಿ ಈ ರೀತಿಯ ಹೇಳಿಕೆ ನೀಡಿದ್ದಾಳೆ. 2011 ರಲ್ಲಿ ನಡೆದ ಘಟನೆಗಳ ಬಗ್ಗೆ ಈಗ ಮಾತನಾಡುತ್ತಿರುವ ಜೆನ್ನಿಫರ್ ಅವರ ಹೇಳಿಕೆ ನಿಜವೇ ಅಥವಾ ಸುಳ್ಳೇ ಎಂಬ ಕುರಿತು ಜಾನ್ಸನ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. 2011 ರಲ್ಲಿ ಮರೀನಾ ವೀಲರ್ ಎಂಬ ಮಹಿಳೆ ಜೊತೆ ಮದುವೆಯಾಗಿದ್ದ ಜಾನ್ಸನ್, ಲಂಡನ್ನ ಮಹಾಪೌರರಾಗಿ ಕೆಲಸ ಮಾಡುತ್ತಿದ್ದರು.
ಈ ಮಹಿಳೆ ಹೇಳಿದ್ದೇನು?
ಹೆಂಡತಿ ಮರೀನಾ ಅವರು ಹೊರಗೆ ಹೋದ ತಕ್ಷಣ ತನ್ನನ್ನು ಕರೆಸಿಕೊಳ್ಳುತ್ತಿದ್ದರು. ಜಾನ್ಸನ್ ಅವರ 3.5 ಮಿಲಿಯನ್ ಪೌಂಡ್ ಬೆಲೆಬಾಳುವ ಮನೆಯಿಂದ ಹೊರಗೆ ಹೋದ ನಂತರ ಅವರ ಹೆಂಡತಿ ತಿರುಗಿ ಮನೆಗೆ ಬರುತ್ತಿದ್ದರು ಎಂದು ಜೆನಿಫರ್ ಹೇಳಿದ್ದಾರೆ. ಜಾನ್ಸನ್ ಅವರ ಮನೆಯಲ್ಲಿ ಅವರ ಜೊತೆ ಲೈಂಗಿಕ ಸಂಪರ್ಕ ಮಾಡಲು ಬಹಳ ಸಂಕೋಚ ಆಗುತ್ತಿತ್ತು ಎಂದು ಹೇಳಿರುವ ಮಹಿಳೆ. ಇನ್ನೊಂದು ಅಪರೂಪದ ಘಟನೆಯನ್ನು ನೆನಪಿಸಿಕೊಂಡಿದ್ದಾಳೆ. ತಾವಿಬ್ಬರೂ ಶೇಕ್ಸಪಿಯರ್ ಅವರನ್ನು ಓದಿದ ನಂತರ ಲೈಂಗಿಕ ಸಂಪರ್ಕಕ್ಕೆ ಇಳಿದೆವು ಎಂದಿದ್ದಾರೆ.
ಅವಳು ಇಡೀ ಸಂದರ್ಶನದಲ್ಲಿ ಬೋರಿಸ್ ಎಂದು ಹೆಸರನ್ನೇ ಸಂಬೊಧಿಸಿದ್ದಾಳೆ ಮತ್ತು ಆ ಮೂಲಕ ತನ್ನ ಮತ್ತು ಜಾನ್ಸನ್ ನಡುವಿನ ಸಂಬಂಧ ಆಳದ್ದು ಎಂದು ಹೇಳಿದಂತಿದೆ. ತಮ್ಮಿಬ್ಬರ ನಡುವೆ ಹೇಗೆ ಸಂಬಂಧ ಬೆಳೆಯಿತು ಎಂದು ವಿವರಿಸಿರುವ ಜೆನ್ನಿಫರ್, ತಾನು 2011ರಲ್ಲಿ ಬ್ಯುಸಿನೆಸ್ ಅಧ್ಯಯನದ ವಿದ್ಯಾರ್ಥಿಯಾಗಿದ್ದೆ. ಒಂದು ಕಾರ್ಯಕ್ರಮಕ್ಕೆ ಬಂದ ಅವರ ಬುದ್ಧಿಮತ್ತೆ ನಾನು ಬೆರಗಾಗಿದ್ದೆ. ಹಾಗೆ ನೋಡಿದರೆ ನಾನು ಅವರ ಬುದ್ಧಿಮತ್ತೆಗೆ ಮರುಳಾಗಿದ್ದೆ. ಮರು ವರ್ಷ ಅಂದರೆ 2012ರಲ್ಲಿ ನಮ್ಮ ಸಂಬಂಧ ಪ್ರಾರಂಭವಾಯ್ತು ಮತ್ತು ನಾಲ್ಕು ವರ್ಷ ನಡೆಯಿತು. ಈ ಸಂದರ್ಭದಲ್ಲಿ, ಜಾನ್ಸನ್ ನನ್ನೊಡನೆ ಮಾತನಾಡುತ್ತಾ, ‘ನಾನು ಆಕರ್ಷಣೆಗೆ ಒಳಗಾದ ಮೊದಲ ಅಮೆರಿಕನ್ ಮಹಿಳೆ ನೀನು’ ಎಂದಿದ್ದರು. ಅದಿನ್ನೂ ನನಗೆ ನೆನಪಿದೆ ಎಂದಿದ್ದಾರೆ.
ಶೇಕ್ಸಪಿಯರ್ ಮೋಡಿ ನೋಡಿ
2016ರ ಸಮಯ. ಆಗ ಜಾನ್ಸನ್ ಪುಸ್ತಕ ಬರೆಯುತ್ತಿದ್ದರು. ಬರಹಗಾರರಿಗೆ ಆಗುವ ಮಾನಸಿಕ ಕ್ಲೇಷ (mental block) ಆಗಿದ್ದರಿಂದ ಪುಸ್ತಕ ಮುಂದುವರಿಸಲು ತಿಣುಕಾಡುತ್ತಿದ್ದರು. ಆಗ ನಾವು ಶೇಕ್ಸಪಿಯರ್ನ ಮ್ಯಾಕ್ಬೆತ್ ಪುಸ್ತಕದ ಒಂದು ಭಾಗವನ್ನು ಓದಿದೆವು. ಆಗ ನಮ್ಮ ರೋಮಾನ್ಸ್ ಬೆಳೆಯಿತು ಎಂದು ಜೆನ್ನಿಫರ್ ಹೇಳಿದ್ದಾಳೆ.
ಒಂದು ಬಾರಿ ನಾನು ಹೋದಾಗ ಬೋರಿಸ್ ಚೀಸ್ ಪಾಸ್ತಾ ಮಾಡುತ್ತಿದ್ದರು. ಕೆಂಪು ವೈನ್ ತಯಾರು ಮಾಡಿದ್ದರು. ಮನೆಯಲ್ಲಿ ಕೆಲವು ತಿಂಡಿ ಇರಲಿಲ್ಲ ಎಂದು ಮಾರುಕಟ್ಟೆಗೆ ಸಾಮಾನು ತರಲು ಅವರು ಹೋದರು. ಆ ವೇಳೆಯಲ್ಲಿ ನಾನು ಅವರ ಮನೆಯಲ್ಲಿ ಒಬ್ಬಳೇ ಇದ್ದೆ. ಆಗ ಒಂದು ಸೆಲ್ಫಿ ತೆಗೆದುಕೊಂಡಿದ್ದು ಇನ್ನೂ ನೆನಪಿದೆ ಎಂದು ಹೇಳಿದ್ದಾಳೆ. ಅವರು ಮಾಡಿದ ತಿಂಡಿ ತಿನ್ನಲು ಆಗುತ್ತಿರಲಿಲ್ಲ. ನಾನೆ ಹೇಳಿದ್ದೆ, ನೀವು ಅಡುಗೆಮನೆಗೆ ಹೋಗೋದು ಬೇಡ. ಅದರಿಂದ ಪ್ರಯೋಜನ ಇಲ್ಲ ಎಂದು.
ಈ ಸಂದರ್ಭದಲ್ಲಿ ಬೋರಿಸ್ ಜಾನ್ಸನ್ ತಮ್ಮ ಕುಟುಂಬ ಜೀವನದ ಬಗ್ಗೆ ಕಡಿಮೆ ಮಾತನಾಡುತ್ತಿದ್ದರು ಹಾಗೂ ತಾನೂ ಕೂಡ ಆ ಕುರಿತು ಹೆಚ್ಚೇನು ಕೇಳುತ್ತಿರಲಿಲ್ಲ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ, ಜಾನ್ಸನ್ ಅವರ ಪ್ರಭಾವ ಬಳಸಿ ಬ್ಯುಸಿನೆಸ್ ಟ್ರಿಪ್ಗೆ ಹೋಗುತ್ತಿದ್ದೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Backlash Over UK: ಪ್ರತಿಭಟನೆಗಳನ್ನು ಹತ್ತಿಕ್ಕಲು ಹೊಸ ಕಾನೂನು: ಬ್ರಿಟನ್ ಸಂಸತ್ತು ಚಿಂತನೆ
ಇದನ್ನೂ ಓದಿ: ಭಾರತದ ಕೃಷಿ ಕಾನೂನುಗಳ ಬಗ್ಗೆ ಬ್ರಿಟನ್ ಸಂಸತ್ತಿನಲ್ಲಿ ಚರ್ಚೆ: ವಿದೇಶಿ ಹಸ್ತಕ್ಷೇಪಕ್ಕೆ ಭಾರತದ ತೀವ್ರ ಆಕ್ಷೇಪ
Published On - 2:32 pm, Tue, 30 March 21