ಇರಾನ್​ನಲ್ಲಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಅಲ್ಲಿನ ಪರಮಾಣು ಶಕ್ತಿ ಸಂಸ್ಥೆಯ ವಿವರಗಳನ್ನು ಹ್ಯಾಕ್ ಮಾಡಲಾಗಿದೆ!

‘ಪಾಶ್ಚಿಮಾತ್ಯರ ಹಾಗೆ ನಾವು ಕ್ರಿಮಿನಲ್ ಮನೋಭಾವದ ಮುಲ್ಲಾಗಳೊಂದಿಗೆ ಚಕ್ಕಂದ ಆಡುವುದಿಲ್ಲ,’ ಎಂದು ಹೇಳಿರುವ ಹ್ಯಾಕಿಂಗ್ ಗುಂಪು, ತಾನು ಮಾಡಿದ ಕೆಲಸವನ್ನು ಟೆಲಿಗ್ರಾಮ್ ಚ್ಯಾನೆಲ್ ನಲ್ಲಿ ಬಹಿರಂಗಗೊಳಿಸಿದೆ.

ಇರಾನ್​ನಲ್ಲಿ ಪ್ರತಿಭಟನೆಗಳು ಮುಂದುವರಿದಿರುವಂತೆಯೇ ಅಲ್ಲಿನ ಪರಮಾಣು ಶಕ್ತಿ ಸಂಸ್ಥೆಯ ವಿವರಗಳನ್ನು ಹ್ಯಾಕ್ ಮಾಡಲಾಗಿದೆ!
ಇರಾನ್​ನಲ್ಲಿ ಪ್ರತಿಭಟನೆಗಳು
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 24, 2022 | 1:52 PM

ವಿದೇಶೀ ರಾಷ್ಟ್ರವೊಂದರ ಪರವಾಗಿ ಕೆಲಸಮಾಡಿರುವ ಕೆಲವು ಹ್ಯಾಕರ್ ಗಳು (Hackers) ಅಂಗಸಂಸ್ಥೆಯೊಂದರ ಜಾಲತಾಣದ ಮೂಲಕ ಅತಿಕ್ರಮಣ ನಡೆಸಿ ಈಮೇಲ್ ಸಿಸ್ಟಮ್ ಅನ್ನು ಓಪನ್ ಮಾಡಿದ್ದಾರೆ ಎಂದು ಇರಾನ್ ಪರಮಾಣು ಶಕ್ತಿ ಏಜೆನ್ಸಿಯು (Atomic Energy Agency) ಅರೋಪಿಸಿದೆ. ಅನಾಮಧೇಯ (Anonymous) ಹ್ಯಾಕಿಂಗ್ ಗುಂಪು ಇರಾನ್‌ನ ಪರಮಾಣು ಶಕ್ತಿ ಸಂಘಟನೆಯನ್ನು ಅತಿಕ್ರಮಿಸಿರುವ ಹೊಣೆ ಹೊತ್ತುಕೊಂಡಿದೆ. ಇತ್ತೀಚಿನ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಬಂಧಿಸಲಾದ ರಾಜಕೀಯ ಕೈದಿಗಳನ್ನು ಟೆಹ್ರಾನ್ ಬಿಡುಗಡೆ ಮಾಡಬೇಕೆಂದು ಹ್ಯಾಕರ್ ಗಳ ಗುಂಪು ಆಗ್ರಹಿಸಿದೆ.

ಬುಶೆಹರ್‌ನಲ್ಲಿರುವ ಇರಾನ್‌ನ ರಷ್ಯಾ ಬೆಂಬಲಿತ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ 50 ಗಿಗಾಬೈಟ್‌ಗಳ ಆಂತರಿಕ ಈಮೇಲ್‌ಗಳು, ಒಪ್ಪಂದಗಳು ಮತ್ತು ನಿರ್ಮಾಣ ಯೋಜನೆಗಳನ್ನು ಸೋರಿಕೆ ಮಾಡಲಾಗಿದೆ ಎಂದು ಗುಂಪು ಹೇಳಿಕೊಂಡಿದೆ. ವರ್ಗೀಕೃತ ದಾಖಲೆಗಳೂ ಸೋರಿಕೆಯಾಗಿವೆಯೇ ಅನ್ನೋದು ದೃಢಪಟ್ಟಿಲ್ಲ.

ಇರಾನ್ ನ ಕಟ್ಟುನಿಟ್ಟಾದ ಇಸ್ಲಾಮಿಕ್ ವಸ್ತ್ರಸಂಹಿತೆಯನ್ನು ಉಲ್ಲಂಘಿಸಿ ಬಂಧನಕ್ಕೊಳಗಾದ 22-ವರ್ಷ-ವಯಸ್ಸಿನ ಮಹ್ಸಾ ಅಮಿನಿ ಕಸ್ಟಡಿಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ನಂತರ ಆ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದೆ. ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಸರ್ಕಾರ ಬಲಪ್ರಯೋಗ ನಡೆಸುತ್ತಿರುವುದನ್ನು ವಿರೋಧಿಸಿ ರವಿವಾರದಂದು ತರಗತಿಗಳನ್ನು ರದ್ದು ಮಾಡಲಾಯಿತೆಂದು ಇರಾನ್ ಪ್ರಮುಖ ಶಿಕ್ಷಕರ ಒಕ್ಕೂಟ ವರದಿ ಮಾಡಿದೆ.

ಅಸಲಿಗೆ ಇರಾನಲ್ಲಿ ಮಹಿಳೆಯರಿಗೆ ಕಡ್ಡಾಯಗೊಳಿಸಿರುವ ಹಿಜಾಬನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾಗಿದ್ದು. ಆದರೆ ಕ್ರಮೇಣ ಪ್ರತಿಭಟನೆಗಳು ಅಲ್ಲಿನ ಸರ್ಕಾರವನ್ನು ನಡೆಸುತ್ತಿವ ಧಾರ್ಮಿಕ ಗುರುಗಳ (ಮೌಲ್ವಿ) ಕಡೆ ತಿರುಗಿದ್ದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರತಿಭಟನೆಕಾರರು ಪೊಲೀಸರೊಂದಿಗೆ ಕಾದಾಟಕ್ಕಿಳಿಯುತ್ತಿದ್ದಾರೆ ಮತ್ತು ದೇಶದಲ್ಲಿ ಜಾರಿಯಲ್ಲಿರುವ ಇಸ್ಲಾಮಿಕ್ ಗಣತಂತ್ರ ವ್ಯವಸ್ಥೆಯನ್ನು ಕೊನೆಗಾಣಿಸಬೇಕೆಂದು ಆಗ್ರಹಿಸುತ್ತಿದ್ದಾರೆ.

ಬಲಪಂಥೀಯ ಗುಂಪುಗಳು ಹೇಳುತ್ತಿರುವ ಪ್ರಕಾರ ಪೊಲೀಸರು ಪ್ರತಿಭಟನೆಕಾರರ ಮೇಲೆ ಅಶ್ರುವಾಯು ಹಾಗೂ ಗುಂಡಿನ ದಾಳಿ ನಡೆಸಿದ್ದರಿಂದ ಕನಿಷ್ಟ 200 ಜನ ಸಾವನ್ನಪ್ಪಿದ್ದಾರೆ.

‘ಈ ಅಕ್ರಮ ಕೃತ್ಯಗಳನ್ನು ಜನರ ಗಮನ ಸೆಳೆಯಲು ಹತಾಷ ಮನೋಭಾವದಿಂದ ನಡೆಸಲಾಗುತ್ತಿದೆ,’ ಎಂದು ಬಲಪಂಥೀಯರ ಸಂಸ್ಥೆಯೊಂದು ಹೇಳಿದೆ.

ತನ್ನನ್ನು ‘ಬ್ಲ್ಯಾಕ್ ರಿವಾರ್ಡ್’ ಎಂದು ಗುರುತಿಸಿಕೊಂಡಿರುವ ಅನಾಮಧೇಯ ಹ್ಯಾಕಿಂಗ್ ಗುಂಪು; ಒಪ್ಪಂದಗಳು, ಯೋಜನೆಗಳು ಮತ್ತು ಬುಶೆಹರ್ ಸ್ಥಾವರದಲ್ಲಿರುವ ಸಾಮಗ್ರಿಗಳ ಹಾಗೆ ಗೋಚರಿಸುವ ಹಲವು ಇಮೇಜ್ ಗಳನ್ನು ಪಬ್ಲಿಶ್ ಮಾಡಿದೆ. ಇವು ರಷ್ಯಾದ ನೆರವಿನಿಂದ ಒಂದು ದಶಕದಷ್ಟು ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

‘ಪಾಶ್ಚಿಮಾತ್ಯರ ಹಾಗೆ ನಾವು ಕ್ರಿಮಿನಲ್ ಮನೋಭಾವದ ಮುಲ್ಲಾಗಳೊಂದಿಗೆ ಚಕ್ಕಂದ ಆಡುವುದಿಲ್ಲ,’ ಎಂದು ಹೇಳಿರುವ ಹ್ಯಾಕಿಂಗ್ ಗುಂಪು, ತಾನು ಮಾಡಿದ ಕೆಲಸವನ್ನು ಟೆಲಿಗ್ರಾಮ್ ಚ್ಯಾನೆಲ್ ನಲ್ಲಿ ಬಹಿರಂಗಗೊಳಿಸಿದೆ.

ಏತನ್ಮಧ್ಯೆ, ಪ್ರತಿಭಟನೆಯಲ್ಲಿ ಧ್ವನಿಯೆತ್ತಿರುವ ಇರಾನ್‌ನ ಪ್ರಮುಖ ಶಿಕ್ಷಕರ ಸಂಘವಾದ ಶಿಕ್ಷಕರ ಒಕ್ಕೂಟದ ಸಮನ್ವಯ ಸಮಿತಿಯು, ಇರಾನ್‌ನ ಕುರ್ದಿಷ್ ಪ್ರಾಂತ್ಯಗಳಲ್ಲಿನ ಶಾಲೆಗಳು, ಈ ಹಿಂದೆ ನಡೆದಿರುವ ವಿದ್ಯಾರ್ಥಿಗಳ ಸಾವು ಮತ್ತು ಬಂಧನವನ್ನು ಪ್ರತಿಭಟಿಸಿ ಭಾನುವಾರ ತರಗತಿಗಳನ್ನು ಬಹಿಷ್ಕರಿಸುವ ಕರೆಗೆ ಕಿವಿಗೊಟ್ಟಿದೆ ಎಂದು ವರದಿ ಮಾಡಿದೆ. ಈ ಎಚ್ಚರಿಕೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಕುರ್ದಿಶ್ ನಗರಗಳಾದ ಸನಂದಾಜ್, ಮರಿವಾನ್, ಕೆರ್ಮನ್‌ಶಾ ಮತ್ತು ಸಾಕೆಜ್ ಹಾಗೂ ಪಶ್ಚಿಮ ಅಜರ್‌ಬೈಜಾನ್ ಮತ್ತು ಪರ್ವತ ಹಮದಾನ್ ಪ್ರಾಂತ್ಯಗಳಲ್ಲಿನ ಶಾಲೆಗಳಲ್ಲಿನ ಶಿಕ್ಷಕರು ತರಗತಿಗಳಿಗೆ ತೆರಳಿ ಬೋಧನೆ ಮಾಡುವ ಬದಲು ‘ಮಹಿಳೆ, ಬದುಕು, ಸ್ವಾತಂತ್ರ್ಯ’ ಮೊದಲಾದ ಘೋಷಣೆಗಳನ್ನು ಬರೆದಿರುವ ಪ್ಲೆಕಾರ್ಡ್ ಗಳನ್ನು ಪ್ರದರ್ಶಿಸುತ್ತಾ ಪ್ರತಿಭಟನೆ ನಡೆಸಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.

‘ಶಾಲೆಗಳು ಬಂಧಿಖಾನೆಗಳಾಗಿ ಮಾರ್ಪಟ್ಟಿವೆ ಮತ್ತು ಚಿಕ್ಕಪುಟ್ಟ ಮಕ್ಕಳ ಶಿಶುವಿಹಾರಗಳ ಮೇಲೆ ಅಶ್ರುವಾಯು ಸೆಲ್ ಗಳನ್ನು ಎಸೆಯಲಾಗುತ್ತಿದೆ,’ ಎಂದು ಒಬ್ಬ ಶಿಕ್ಷಕಿ ಬರೆದಿರುವುದನ್ನು ಶಿಕ್ಷಕರ ಒಕ್ಕೂಟ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದೆ. ‘ಈ ಧೈರ್ಯಶಾಲಿ ಪೀಳಿಗೆಯ ಹೆಸರನ್ನು ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿದೆ,’ ಎಂದು ಒಕ್ಕೂಟವು ಹೇಳಿಕೊಂಡಿದೆ.

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ