ರಷ್ಯಾದಲ್ಲಿ 6 ಸಿಬ್ಬಂದಿಯೊಂದಿಗೆ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ವಿಮಾನ ಕಣ್ಮರೆ
Russia Plane: ಖಬರೋವ್ಸ್ಕ್ನ ನೈಋತ್ಯ ದಿಕ್ಕಿನಲ್ಲಿ 38 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರಾಡಾರ್‌ಗಳಿಂದ ಆರು ಸಿಬ್ಬಂದಿಯೊಂದಿಗೆ ಆನ್ -26 ವಿಮಾನ ಕಣ್ಮರೆಯಾಯಿತು ಎಂದು ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ. ವಿಮಾನವು ತನ್ನ ಸಂವಹನ ಸಾಧನಗಳನ್ನು ಪರೀಕ್ಷಿಸಲು ಹಾರಾಟ ನಡೆಸುತ್ತಿತ್ತು.
ಖಬರೋವ್ಸ್ಕ್: ಆರು ಜನ ಸಿಬ್ಬಂದಿಗಳಿದ್ದ ಆಂಟೋನೊವ್ -26 (Antonov-26 )ವಿಮಾನವು ರಷ್ಯಾದ ಖಬರೋವ್ಸ್ಕ್ ಪ್ರದೇಶದಲ್ಲಿ ಕಣ್ಮರೆಯಾಗಿದೆ ಎಂದು ರಾಷ್ಟ್ರದ ತುರ್ತು ಸೇವೆಗಳ ಸಚಿವಾಲಯ ಬುಧವಾರ ತಿಳಿಸಿದೆ. ನಾಪತ್ತೆಯಾದ ವಿಮಾನವನ್ನು ಹುಡುಕಲು ಎಂಐ -8 ಹೆಲಿಕಾಪ್ಟರ್ ಅನ್ನು ನಿಯೋಜಿಸಲಾಗಿದೆ ಎಂದು ತುರ್ತು ಸೇವೆಗಳ ಮೂಲಗಳು ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ವರದಿ ಮಾಡಿದೆ.
ಖಬರೋವ್ಸ್ಕ್ನ ನೈಋತ್ಯ ದಿಕ್ಕಿನಲ್ಲಿ 38 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ರಾಡಾರ್‌ಗಳಿಂದ ಆರು ಸಿಬ್ಬಂದಿಯೊಂದಿಗೆ ಆನ್ -26 ವಿಮಾನ ಕಣ್ಮರೆಯಾಯಿತು ಎಂದು ತುರ್ತು ಸೇವೆಗಳ ವಕ್ತಾರರು ತಿಳಿಸಿದ್ದಾರೆ. ವಿಮಾನವು ತನ್ನ ಸಂವಹನ ಸಾಧನಗಳನ್ನು ಪರೀಕ್ಷಿಸಲು ಹಾರಾಟ ನಡೆಸುತ್ತಿತ್ತು.
ರಷ್ಯಾದ ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿಯ ಹೆಲಿಕಾಪ್ಟರ್ ಅನ್ನು ಶೋಧ ಕಾರ್ಯಾಚರಣೆಗಾಗಿ ಕಳುಹಿಸಲಾಗಿದೆ. ಆದರೆ ಕಳಪೆ ಹವಾಮಾನ ಪರಿಸ್ಥಿತಿ ಮತ್ತು ಬೆಳಕಿನ ಕೊರತೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಟ್ಟ ಹವಾಮಾನದಿಂದಾಗಿ ವಿಮಾನ ಕಣ್ಮರೆಯಾಗಿರಬಹುದು ಎಂದು ವಕ್ತಾರರು ತಿಳಿಸಿದ್ದಾರೆ.
“ಮಾಸ್ಕೋ ಸಮಯ 11:45 ಕ್ಕೆ,ಖಬರೋವ್ಸ್ಕ್ ಪ್ರದೇಶದ ರಷ್ಯಾದ ತುರ್ತು ಸಚಿವಾಲಯದ ಬಿಕ್ಕಟ್ಟು ನಿರ್ವಹಣಾ ಕೇಂದ್ರವು ಖಬರೋವ್ಸ್ಕ್ ನಗರ ವಿಮಾನ ನಿಲ್ದಾಣದಿಂದ 38 ಕಿಮೀ ದೂರದಲ್ಲಿರುವ ವಿಮಾನ ರಾಡಾರ್‌ಗಳಿಂದ ಕಣ್ಮರೆಯಾಯಿತು ಎಂಬ ಸಂದೇಶವನ್ನು ಸ್ವೀಕರಿಸಿತು. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನದಲ್ಲಿ ಆರು ಜನರ ವಿಮಾನ ಸಿಬ್ಬಂದಿ ಇದ್ದರು “ಎಂದು ಮಾಧ್ಯಮ ಸೇವೆಯು ತಿಳಿಸಿದೆ.
ಕತ್ತಲ ಸಮಯ ಮತ್ತು ಪ್ರತಿಕೂಲ ಹವಾಮಾನದಿಂದ ಹುಡುಕಾಟಗಳು ಕಷ್ಟವಾಗಿದೆ ಎಂದು ಸಚಿವಾಲಯ ಹೇಳಿದೆ.
ಇದನ್ನೂ ಓದಿ: ಇಂಗ್ಲೆಂಡ್ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ; ಭಾರತೀಯರಿಗೆ ಕ್ವಾರಂಟೈನ್ ಮಾತ್ರ ಕಡ್ಡಾಯ
(Antonov-26 plane with six people onboard has disappeared Russia’s Khabarovsk region)
Published On - 4:31 pm, Wed, 22 September 21