
ವಾಷಿಂಗ್ಟನ್, ಸೆಪ್ಟೆಂಬರ್ 3: ಭಾರತದ ಮೇಲೆ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Narendra Modi) ಚೀನಾದ ಶೃಂಗಸಭೆಯಲ್ಲಿ ಚೀನಾ ಮತ್ತು ರಷ್ಯಾದ ಅಧ್ಯಕ್ಷರ ಜೊತೆ ಬಹಳ ಆಪ್ತವಾಗಿ ಕಾಣಿಸಿಕೊಂಡು ಅಮೆರಿಕಕ್ಕೆ ಬಿಸಿ ಮುಟ್ಟಿಸಿದ್ದರು. ಈ ನಡುವೆ ಅಮೆರಿಕದ ತಜ್ಞರೊಬ್ಬರು ಟ್ರಂಪ್ ನಿರ್ಧಾರವನ್ನು ಬಹಿರಂಗವಾಗಿ ಟೀಕಿಸಿದ್ದಾರೆ. ಭಾರತದ ಮೇಲಿನ ಹೆಚ್ಚಿನ ಸುಂಕಗಳನ್ನು ಹಿಂದಕ್ಕೆ ಪಡೆಯಬೇಕು, ಆ ಸುಂಕವನ್ನು ಶೂನ್ಯಕ್ಕೆ ಇಳಿಸಬೇಕು ಮತ್ತು ಭಾರತದ ಕ್ಷಮೆ ಯಾಚಿಸಬೇಕು ಎಂದು ಅಮೆರಿಕದ ಪ್ರಮುಖ ತಜ್ಞರೊಬ್ಬರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಒತ್ತಾಯಿಸಿದ್ದಾರೆ.
ಹಾಗೇ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ, ರಷ್ಯಾ ಮತ್ತು ಚೀನಾದ ಜೊತೆಗಿನ ಸಂಬಂಧಗಳನ್ನು ನಿರ್ವಹಿಸುವಲ್ಲಿ ಬಹಳ ಉತ್ತಮ ರಾಜತಾಂತ್ರಿಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ಬಣ್ಣಿಸಿದ್ದಾರೆ. ಈ ಬಗ್ಗೆ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಡ್ವರ್ಡ್ ಪ್ರೈಸ್ ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದು, ಭಾರತವು 21ನೇ ಶತಮಾನವನ್ನು ರೂಪಿಸುವಲ್ಲಿ “ನಿರ್ಣಾಯಕ” ಪಾತ್ರ ಹೊಂದಿದೆ. ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯು ವಾಷಿಂಗ್ಟನ್‌ನ ಅತ್ಯಂತ ಪ್ರಮುಖ ಪಾಲುದಾರಿಕೆಯನ್ನು ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಚೀನಾ, ರಷ್ಯಾದ ಅಧ್ಯಕ್ಷರಿಗೆ ಹಸ್ತಲಾಘವ, ಅಪ್ಪುಗೆ, ತಮಾಷೆ; ಟ್ರಂಪ್ ನಿದ್ರೆಗೆಡಿಸಿದ ಮೋದಿಯ ವಿಡಿಯೋ ಇಲ್ಲಿದೆ
#WATCH | New York | Adjunct Instructor, Centre for Global Affairs, School of Professional Studies, NYU and Independent Analyst, Edward Price says, “I used to think that US President Donald Trump had a very poor understanding of economics and I realise now that I was wrong. In… https://t.co/nkZCsqq6KR pic.twitter.com/7lwxbwUcah
— ANI (@ANI) September 3, 2025
“ಭಾರತ ಮತ್ತು ಅಮೆರಿಕದ ನಡುವಿನ ಪಾಲುದಾರಿಕೆಯನ್ನು 21ನೇ ಶತಮಾನದ ಅತ್ಯಂತ ನಿರ್ಣಾಯಕ ಪಾಲುದಾರಿಕೆ ಎಂದು ನಾನು ಪರಿಗಣಿಸುತ್ತೇನೆ. ಈ ಪಾಲುದಾರಿಕೆಯು ಚೀನಾ ಮತ್ತು ರಷ್ಯಾ ನಡುವೆ ಏನಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. 21ನೇ ಶತಮಾನದಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಚೀನಾದೊಂದಿಗೆ ಮುಖಾಮುಖಿಯಾಗಿ ಮತ್ತು ರಷ್ಯಾದೊಂದಿಗಿನ ಯುದ್ಧದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತದ ಮೇಲೆ ಶೇ. 50ರಷ್ಟು ಸುಂಕಗಳನ್ನು ಏಕೆ ವಿಧಿಸುತ್ತಾರೆ ಎಂಬುದನ್ನು ನನಗೆ ಅರ್ಥವಾಗುತ್ತಿಲ್ಲ” ಎಂದು ಅವರು ಹೇಳಿದ್ದಾರೆ.
#WATCH | New York | NYU professor and Independent Analyst, Edward Price says, “I consider the partnership between India and the US as the most crucial 21st century partnership. This partnership will decide what happens between China and Russia. India has the deciding vote in the… pic.twitter.com/ASGbOCnisG
— ANI (@ANI) September 3, 2025
“ನಾವು ಭಾರತದ ಮೇಲಿನ 50% ಸುಂಕವನ್ನು ತೆಗೆದುಹಾಕಬೇಕು. ನಾನು ಭಾರತದ ಮೇಲೆ ಸುಂಕವನ್ನು ಶೂನ್ಯಕ್ಕೆ ಇಳಿಸಬೇಕೆಂದು ಸೂಚಿಸುತ್ತೇನೆ ಮತ್ತು ಕ್ಷಮೆಯಾಚಿಸಬೇಕೆಂದು ಕೋರುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟ್ರಂಪ್ ಸುಂಕ ಬೆದರಿಕೆಗೆ ಜಗ್ಗದ ಮೋದಿ, ಚೀನಾದಲ್ಲಿ ಷಿ ಜಿನ್ಪಿಂಗ್, ಪುಟಿನ್ ಜತೆ ಮಾತುಕತೆ
“ಪ್ರಧಾನಿ ಮೋದಿ ಸಾಕಷ್ಟು ಬುದ್ಧಿವಂತರಾಗಿದ್ದಾರೆ. ಅವರಿಗೆ ಅಮೆರಿಕದ ಹೊರತು ಆಯ್ಕೆಗಳಿವೆ, ಆದರೆ ಅವರು ಚೀನಾ ಮತ್ತು ರಷ್ಯಾವನ್ನು ಸಂಪೂರ್ಣವಾಗಿ ಸ್ವೀಕರಿಸಿಲ್ಲ. ಉದಾಹರಣೆಗೆ, ಅವರು ಮಿಲಿಟರಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿಲ್ಲ” ಎಂದು ಎಡ್ವರ್ಡ್ ಪ್ರೈಸ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ